ಇಂಡಿ

ಗಣಿತ ಕಲಿಕಾ ಸ್ಪರ್ಧೆಯಿಂದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ವೃದ್ಧಿ

ಗಣಿತ ಕಲಿಕಾ ಸ್ಪರ್ಧೆಯಿಂದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ವೃದ್ಧಿ

ಇಂಡಿ, 24:  ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಹಾಗೂ ಶಾಲೆ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮುದಾಯದ ಹಾಗೂ ಅಕ್ಷರ ಪೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ.ತಡವಲಗಾ ಗ್ರಾಮ ಪಂಚಾಯಿತಿ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ದೆ ಕಾರ್ಯಕ್ರಮ ಕೆ ಬಿ ಎಮ್ ಪಿ ಎಸ್ ತಡವಲಗಾ ಹಾಗೂ ತಡವಲಗಾ ಗ್ರಾಮ ಪಂಚಾಯಿತಿ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಂದಾ ವಾಲಿಕಾರ ಅವರು ಸ್ವರಸ್ವತಿ ಪೋಟೋ ಪೂಜೆ ಸಲ್ಲಿಸಿವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಶಾಲೆಗೆ ಹೋಗುವ ಮಕ್ಕಳಲ್ಲಿ ಉತ್ತಮವಾದ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಕೌಶಲ್ಯಗಳ ಕೊರತೆಯೂ ಕಲಿಕೆಯ ಬಡತನಕ್ಕೆ ಪ್ರಮುಖ ಕಾರಣವಾಗಿದೆ.ಗಣಿತ ಕಲಿಕಾ ಆಂದೋಲನ ಸ್ಪರ್ಧೆಗಳಿಂದ ವಿದ್ಯಾರ್ಥಿಗಳ ಕಲಿಕಾ ಉತ್ಸಾಹ ಹೆಚ್ಚಳವಾಗಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ವೃದ್ಧಿಯಾಗಲು ನೆರವಾಗುತ್ತದೆ ಎಂದು ಹೇಳಿದರು. 

ಶಿಕ್ಷಕ ಎಸ್ ಕೆ ಲಾಳಸಂಗಿ ಮಾತನಾಡಿ ಗಣಿತ ಎಂದರೆ ಕಬ್ಬಿಣದ ಕಡಲೆ ಎನ್ನುವ ಅಭಿಪ್ರಾಯ ಸಾಮಾನ್ಯವಾಗಿದೆ. ತರಗತಿಗಳಲ್ಲಿ ಗಣಿತ ವಿಷಯವನ್ನು ಪರಿಣಾಮಕಾರಿಯಾಗಿ ಮತ್ತು ಸರಳವಾಗಿ ಬೋಧಿಸುವ ಕುರಿತು ಶಿಕ್ಷಕರಿಂದ ನಿರಂತರ ಪ್ರಯತ್ನಗಳು ನಡೆಯಬೇಕು. ಇಂತಹ ಕಲಿಕಾ ಆಂದೋಲನಗಳಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.ತಡವಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಹದಿನೈದು ಶಾಲೆಗಳ 4,5,6 ನೇ ತರಗತಿಗಳ ಮಕ್ಕಳು ಗಣೀತ ಕಲಿಕಾ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. 

ತಡವಲಗಾ ಗ್ರಾಮ ಪಂಚಾಯಿತಿ ಸದಸ್ಯರಾದ ರಾಮನಗೌಡ ಪಾಟೀಲ,ಚನ್ನು ಜಾಡರ ಅಖಕ ಪ್ರಕಾಶ್ ರಾಠೋಡ ಹಾಗೂ ವಿವಿಧ ಶಾಲೆಗಳ ಶಿಕ್ಷಕರಾದ ಅನೀತಾ ರಾಠೋಡ, ಆರ್ ಎಸ್ ದೊಡ್ಡಮನಿ, ಎನ್ ಎಸ್ ಚವಾಣ, ಎಸ್ ಆರ್ ಗಿಡಗಂಟಿ,ಜಿ ಎಸ್ ಗೌರ, ಟಿ ಕೆ ಜಂಬಗಿ,ಎ ಎಸ್ ಬಡಿಗೇರ, ಎಸ್ ಎಂ ವಂದಾಲ,ವಿ ಆಯ್ ಜಾಡರ, ಪ್ರೇಮಾ ಹುಬ್ಬಳ್ಳಿ, ಎಸ್ ಕೆ ರಾಠೋಡ,ಎಂ ಎಚ್ ಬ್ಯಾಳಿ, ಸೇರಿದಂತೆ ಅನೇಕ ಶಿಕ್ಷಕರು ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಶಿಕ್ಷಕರಾದ ಗೀರಿಶ್ ಬಜೇಂತ್ರಿ ನಿರೂಪಿಸಿದರು. ಶಿಕ್ಷಕಿ ಎನ್ ಎನ್ ಖವಟಿಗಿ ವಂದಿಸಿದರು. 


ಸುದ್ದಿ ಓದಿ