ನೀತಿ ಸಂಹಿತೆ ಜಾರಿ: ಸುಮಾರು 30.86 ಲಕ್ಷರೂ.ಗಳ ಮೌಲ್ಯದ ಚಿನ್ನ, ಬಟ್ಟೆ ವಸ್ತು ವಶ
ಲೋಕದರ್ಶನ ವರದಿ,
ಜಮಖಂಡಿ :ಜಮಖಂಡಿ ವಿಧಾನಸಭಾ ಮತಕ್ಷೇತ್ರದ ಗಡಿಯ ಚೆಕ್ ಪೋಸ್ಟ್ಗಳಲ್ಲಿ ವಾಹನಗಳನ್ನು ತಪಾಸಣೆಯ ಮಾಡುವ ಸಮಯದಲ್ಲಿ ಸುಮಾರು 7,44,140 ರೂ, ನಗದು ಒಳಗೊಂಡು ಇಲ್ಲಿಯವರೆಗೆ ಒಟ್ಟು 30,86,430.80 ರೂ,ಗಳ ಮೌಲ್ಯದ ಚಿನ್ನ, ಬಟ್ಟೆ ಹಾಗೂ ಇತರೆ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಚುನಾವಣಾಧಿಕಾರಿ ಎಸಿ, ಸಂತೋಷ ಕಾಮಗೊಂಡ ಮಾಧ್ಯಮಕ್ಕೆ ತಿಳಿಸಿದರು.
ತಾಲೂಕಿನ ಚಿಕ್ಕಲಕಿ ಕ್ರಾಸ್, ಹುಲ್ಯಾಳ, ಹೊನ್ನೂರು ಗ್ರಾಮಗಳಲ್ಲಿ ಚೆಕ್ ಪೋಸ್ಟ್ಗಳನ್ನು ತೆಗೆದು ಪ್ರತಿ 8ಗಂಟೆಗೆ ಒಂದು ಟೀಮದಂತೆ ದಿನದ 24 ಗಂಟೆ ಎಸ್ ಎಸ್ ಟಿ ತಂಡಗಳನ್ನು ರಚನೆ ಮಾಡಿ ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ. ಮಾ.29 ರಿಂದ ಏ,8 ರವರೆಗೆ ಚುನಾವಣೆ ನೀತಿ ಸಂಹಿತೆ ಕುರಿತು ಚೆಕ್ ಪೋಸ್ಟ್ಗಳಲ್ಲಿ ನಗದು ಒಳಗೊಂಡು ಇತರೆ ಎಲ್ಲ ವಸ್ತುಗಳನ್ನು ಮುಟ್ಟಗೋಲು ಹಾಕಲಾಗುತ್ತದೆ ಎಂದರು.
ಮಾ,29 ರಂದು ಹುಲ್ಯಾಳ ಚೆಕ್ ಪೋಸ್ಟ್ನಲ್ಲಿ 2 ರೂ, ಲಕ್ಷ ನಗದು, 30 ರಂದು ಹುನ್ನೂರ್ ಚೆಕ್ ಪೋಸ್ಟ್ನಲ್ಲಿ ಅಂದಾಜು 2 ಲಕ್ಷ 38 ಸಾವಿರ, ರೂ,ಗಳ ಮೌಲ್ಯದ ಬಟ್ಟೆಗಳು. 31 ರಂದು ನಗರದಲ್ಲಿ ಎಫ್ಎಸ್ಟಿ ತಂಡದಿಂದ 4 ನೂರು ರೂ,ಗಳ ಮೌಲ್ಯದ ಕರಪತ್ರಗಳು. ಏ, 1 ರಂದು ಹುಲ್ಯಾಳ ಚೆಕ್ ಪೋಸ್ಟ್ನಲ್ಲಿ ಅಂದಾಜು ರೂ. 4,96,650 ಮೌಲ್ಯದ 33 ಟನ್ ಅಕ್ರಮ ಪಡಿತರ ಅಕ್ಕಿ ಮೂಟೆಗಳನ್ನು. 2 ರಂದು ಚಿಕ್ಕಪಡಸಲಗಿ ಗ್ರಾಮದಲ್ಲಿ ಎಫ್ಎಸ್ಟಿ ತಂಡದಿಂದ ಸುಮಾರು 95 ರೂ,ಮೌಲ್ಯದ ಕರಪತ್ರಗಳು. 6 ರಂದು ಹುನ್ನೂರ್ ಚೆಕ್ ಪೋಸ್ಟ್ನಲ್ಲಿ 2 ಲಕ್ಷ,50 ಸಾವಿರಗಳ ನಗದು. 7 ರಂದು ಹುನ್ನೂರ ಚೆಕ್ ಪೋಸ್ಟ್ನಲ್ಲಿ 1 ಲಕ್ಷ, 41 ಸಾವಿರ 340 ರೂ,ಗಳು ನಗದು. 8 ರಂದು ಚಿಕ್ಕಲಕಿ ಕ್ರಾಸ್ ಚೆಕ್ ಪೋಸ್ಟ್ನಲ್ಲಿ 1,50,800 ರೂ,ಗಳು ನಗದು ಹಾಗೂ 16,07,145,ರೂ,ಗಳ ಮೌಲ್ಯದ 307.07 ಗ್ರಾಂ ಚಿನ್ನವಶಪಡಿಸಿಕೊಂಡಿರುತ್ತದೆ ಹಾಗೂ ಎಫ್ಎಸ್ಟಿ ತಂಡದಿಂದ ನಗರದಲ್ಲಿ 0.80 ಪೈಸೆಗಳ ಮೌಲ್ಯದ ಕರಪತ್ರವನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲು ಮಾಡಲಾಗಿದ್ದು. 7,44,140 ರೂ,ಗಳು ನಗದು ಒಳಗೊಂಡು ಇಲ್ಲಿಯವರೆಗೆ ಒಟ್ಟು 30,86,430.80 ರೂ,ಗಳ ಮೌಲ್ಯದ ಚಿನ್ನ, ಬಟ್ಟೆ ಹಾಗೂ ಇತರೆ ವಸ್ತುಗಳನ್ನು ಮುಟ್ಟುಗೊಲು ಹಾಕಿಕೊಳ್ಳಲಾಗಿದ್ದು. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರಕರಣಗಳನ್ನು ದಾಖಲು ಮಾಡಲಾಗಿದೆಂದು ಮಾಧ್ಯಮಕ್ಕೆ ಮಾಹಿತಿ ನೀಡಿದರು.