ಸರಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು: ಎಂ.ಎಲ್.ಸಿ ಡಾ. ತಳವಾರ
ಬೆಳಗಾವಿ 27: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅನುದಾನ ಒದಗಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಾಬಣ್ಣಾ ತಳವಾರ ತಿಳಿಸಿದರು.
ಮಂಗಳವಾರ ಆಂಜನೇಯ ನಗರ ಸರಕಾರಿ ಶಾಲೆಗೆ ಭೇಟಿ ಶಾಲೆಯ ಮೂಲ ಸೌಕರ್ಯಕ್ಕೆ ಅನುದಾನ ಕೋರಿ ಸಲ್ಲಿಸಲಾದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದಲ್ಲಿ ಹಿಂದುಳಿದ ಶಾಲೆಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿದೆ ಎಂದ ಅವರು ಶಿಕ್ಷಕರು ಕರ್ತವ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಕಿವಿಮಾತು ಹೇಳಿದರು.
ಶಾಲೆಯ ಆವರಣ, ಗೇಟು, ಶಾಲೆಗಳ ಕೊಠಡಿಗಳಿಗೆ ಹೋಗಲು ಫೇವರ್ಸ್, ಮೇಲ್ಚಾವಣಿ ಸೋರುವಿಕೆ ತಡೆಯುವುದು ಸೇರಿದಂತೆ ಇತ್ಯಾದಿ ಸೌಕರ್ಯಗಳ ಬಗ್ಗೆ ಮನವಿ ಸಲ್ಲಿಸಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ತಳವಾರ ಅವರು ಆದಷ್ಟು ಬೇಗ ಈ ಕುರಿತು ಕ್ರಮವಹಿಸುವದಾಗಿ ಭರವಸೆ ನೀಡಿದರು.
ಮುಖ್ಯಾಧ್ಯಾಪಕಿ ಮಾಲತಿ ಎಂ, ಖೋದಾನಪೂರ, ಶಿಕ್ಷಕಿಯರಾದ ಬಿ,ಎಸ್. ಅವಕ್ಕನವರ, ಎಸ್,ಎಚ್, ಬೋಗಾರ, ಪತ್ರಕರ್ತ ಗೋಪಾಲ ಖಟಾವಕರ ಸೇರಿದಂತೆ ಪಾಲಕರು ಉಪಸ್ಥಿತರಿದ್ದರು.