ಗೋಕಾಕ್

ವಿದ್ಯುತ್ ಅವಘಡ: ಮೂರು ಕಾರು, ಹಲವು ಬೈಕ್‍ಗಳು ಭಸ್ಮ

ವಿದ್ಯುತ್ ಅವಘಡ: ಮೂರು ಕಾರು, ಹಲವು ಬೈಕ್‍ಗಳು ಭಸ್ಮ
ಗೋಕಾಕ: ವಿದ್ಯುತ್ ಅವಘಡದಿಂದ ಹೊತ್ತಿಕೊಂಡ ಬೆಂಕಿಯಲ್ಲಿ ಮೂರು ಕಾರು ಹಾಗೂ ಹಲವು ಬೈಕ್‍ಗಳು ಸುಟ್ಟು ಭಸ್ಮವಾಗಿವೆ.

ಗೋಕಾಕ 21: ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮನೆಯ ಹೊರಗಡೆ ಸಾಲಾಗಿ ನಿಲಿಸಿದ್ದ ಕಾರು, ಬೈಕ್‍ಗಳು ಬೆಂಕಿಯಲ್ಲಿ ಧಗಧಗನೆ ಹೊತ್ತಿ ಉರಿದ ಘಟನೆ ತಡರಾತ್ರಿ ಜರುಗಿದೆ.

ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್‍ನಲ್ಲಿ ಈ ಘಟನೆ ನಡೆದಿದೆ. ಏಕಾಏಕಿಯಾಗಿ ವಿದ್ಯುತ್ ಅವಘಡದಿಂದ ಹೊತ್ತಿಕೊಂಡ ಬೆಂಕಿಯಲ್ಲಿ ಮೂರು ಕಾರು ಹಾಗೂ ಹಲವು ಬೈಕ್‍ಗಳು ಸುಟ್ಟು ಭಸ್ಮವಾಗಿವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿಕೊಂಡು ಬೆಂಕಿ ನುಂದಿಸಿದ್ದು, ಅವಘಡದಿಂದ ಅಕ್ಕ ಪಕ್ಕದ ಮನೆಗಳಿಗೆ ಬೆಂಕಿ ಹರಡುವುದು ತಪ್ಪಿದಂತಾಗಿದೆ. ಈ ಕುರಿತು ಗೋಕಾಕ ಶಹರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಓದಿ