ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ: ಅಬ್ದುಲ್ ನಬಿ
ಸಿರುಗುಪ್ಪ08: ವಿದ್ಯೆ ಯಾರೂ ಕದಿಯಲಾಗದ ಸಂಪತ್ತು ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಲೋಕ ಶಿಕ್ಷಣ ನಿರ್ದೇಶನಾಲಯ ಸಾಕ್ಷರತ ಸದಸ್ಯ ಸಮಾಜ ಸುಧಾರಕ ಎ .ಅಬ್ದುಲ್ ನಬಿ ಅಭಿಪ್ರಾಯ ಪಟ್ಟರು ಕರ್ನಾಟಕ ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ನಗರಸಭೆ ಪಕ್ಕದಲ್ಲಿರುವ 6 ನೇ ವಿಭಾಗ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ಆಜಾದಿಕ ಅಮೃತ ಮಹೋತ್ಸವ ಗಣ ರಾಜ್ಯೋತ್ಸವದ ಪ್ರಯುಕ್ತ 2022-23ನೇ ಸಾಲಿನ ಶಾಲಾ ಅಭಿವೃದ್ಧಿ ಉಸ್ತುವಾರಿ ಸಮಿತಿ ಖಆಒಅ ಸದಸ್ಯರ ಪಾಲಕರ ಪೋಷಕರ ಆಯೋಜಿಸಿದ ಮೊದಲನೆಯ ಸಭೆಯಲ್ಲಿ ಅವರು ಪರಿಸರ ನಿಸರ್ಗದ ಸಂರಕ್ಷಣೆಗೆ ಶೈಕ್ಷಣಿಕ ಸುಧಾರಣೆಗೆ ಹಸಿರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು. ಅಬ್ದುಲ್ ನಬಿಯವರು " ಹಮ್ ಭಾರತ್ ಕಿ ಸಂತಾನ್ ಸಬಿ ಹೊಂಗೆ ಸಾಕ್ಷರ ವಿದ್ವಾನ್ ಏಕ್ ದಿನ್ ಹೋ ಹೋ ಮನ್ ಮೆ ಹೈ ವಿಶ್ವಾಸ್ ಪೂರಾ ಹೈ ವಿಶ್ವಾಸ್ ಹಮ್ ಹೋಂಗೆ ಕಾಮಯಾಬ್ ಏಕ್ ದಿನ್" ಎಂದು ಧ್ವನಿ ಗೂಡಿಸುವ ರೊಂದಿಗೆ ಹಾಡನ್ನು ಹಾಡಿಸಿದರು ಶಾಲಾ ಮುಖ್ಯಗುರುಗಳಾದ ಮೊಹಮ್ಮದ್ ಅಲಿ ಬಾಗವಾನ್ ಅವರು ಮಾತನಾಡುತ್ತಾ ಜಗತ್ತಿನಲ್ಲಿ ಕರೋನಾ ಮತ್ತು ವೈರಸ್ ಹೆಚ್ಚಳ ವಾಗುತ್ತಿದೆ ಆರೊ?ಗ್ಯದ ಬಗ್ಗೆ ಆತಂಕ ಭಯ ಬೇಡ ಪ್ರತಿಯೊಬ್ಬರು ಕೈಗಳನ್ನು ಮುಖ ಕಾಲುಗಳನ್ನು ಸ್ವಚ್ಛತೆಗೆ ಆರೊ?ಗ್ಯಕ್ಕಾಗಿ ಆಗಾಗ್ಗೆ ತೊಳೆದುಕೊಳ್ಳಬೇಕು ದೈಹಿಕ ಅಂತರ ಪಾಲಿಸಬೇಕು ಮಾಸ್ಕ್ ಧರಿಸಬೇಕು ಎಲ್ಲರೂ ಸರಕಾರದ ನಿಯಮ ಪಾಲಿಸಬೇಕು ವಿದ್ಯೆಯನ್ನು ಯಾರೂ ಕದಿಯಲಾಗದ ಸಂಪತ್ತಾಗಿದೆ ಮಕ್ಕಳ ಉಜ್ವಲ ಭವಿಷ್ಯತ್ತಿಗೆ ಶೈಕ್ಷಣಿಕವಾಗಿ ಎಸ್ ಡಿ ಎಂ ಸಿ ಪ್ರಜಾ ಪ್ರಭುತ್ವದ ವ್ಯವಸ್ಥೆಯ ತಳಹದಿ ಶಾಲೆ ವಿದ್ಯಾರ್ಥಿಗಳು ಪೋಷಕರು ಹಾಗೂ ಶಿಕ್ಷಕರ ನಡುವೆ ಅವಿನಾಭಾವ ಸಂಬಂಧ ಕಟ್ಟಿ ಕೊಡುತ್ತದೆ ಶಾಲಾ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಉತ್ತಮ ಕಾಯಕಲ್ಪಕ್ಕೆ ಶ್ರಮಿಸಬೇಕು ಮಾದರಿ ಶಾಲೆ ಮಾಡುವ ಪ್ರಯತ್ನ ನಾವೆಲ್ಲಾ ಮಾಡಬೇಕು ದಾಖಲಾದ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಬರಬೇಕು ಶೈಕ್ಷಣಿಕವಾಗಿ ಇದರ ಪಾತ್ರ ಪ್ರಮುಖವಾಗಿದೆ ಎಂದರು. ಶಾಲಾ ಶಿಕ್ಷಕ ಶಿಕ್ಷಕಿಯರು ಪೋಷಕರು ವಿದ್ಯಾರ್ಥಿಗಳು ಹಾಜರಿದ್ದರು ಶಾಲಾ ಮಕ್ಕಳಿಂದ ಪ್ರಾರ್ಥನೆ ಕುರಾನ್ ಪಠಿಸಲಾಯಿತು ಹಮ್ದ್ ನಾತೆ ರಸೂಲ್ ಓದಿದರು ಶಿಕ್ಷಕಿ ಯರಾದ ಜಿ ಶಾಹಿನಾ ಸ್ವಾಗತ ಮಾಡಿದರು ಫಜಲ್ ಉನ್ನಿಸಾ ವಂದನಾರೆ್ಣ ಮಾಡಿದರು.