ಉದ್ಯೋಗದಿಂದಲೇ ಆರ್ಥಿಕ ಸಬಲತೆ: ಶಾಸಕ ಗುಡಗುಂಟಿ
ಜಮಖಂಡಿ 05: ಜಗತ್ತಿನಲ್ಲಿ ದೇವರು ನೀಡಿದ ಶಕ್ತಿಯ ಉಪಯೋಗವಾಗಬೇಕು. ಉದ್ಯೋಗದಿಂದಲೇ ಆರ್ಥಿಕ ಸಬಲತೆಯಾಗುತ್ತದೆ. ಮಹಿಳೆಯರು ತಮ್ಮ ಕೌಶಲ್ಯವನ್ನು ಹೊರಬಿಂಬಿಸಬೇಕು. ಮಹಿಳೆ ಕೃಷಿ, ನೇಕಾರಿಕೆ, ಹೋಟೆಲ, ಸಾರಿಗೆ, ಹೊಲಿಗೆ ಸೇರಿದಂತೆ ವಿವಿಧ ಕೌಶಲ್ಯದ ಕೆಲಸ ಕಾರ್ಯಗಳನ್ನು ಮಾಡಬೇಕು. ಇದರಿಂದ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಓಲೇಮಠದ ಸಭಾಭವನದಲ್ಲಿ ನಡೆದ ವೀರರಾಣಿ ಕಿತ್ತೂರ ಚೆನ್ನಮ್ಮಾ ಮಹಿಳಾ ಸಂಘ, ಐರಣಿ ಮಹಾಸಂಸ್ಥಾ ಐರಣಿ, ದಾವಣಗೇರಿ ಸ್ಪೂರ್ತಿ ಗ್ರಾಮೀಣಾಭಿವೃಧ್ದಿ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ 250ನೇ 100 ದಿನಗಳ ಮಹಿಳಾ ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮದಲ್ಲಿ ಏರಿ್ಡಸಿದ ಸಾಮೂಹಿಕ ಸವಿ ಭೋಜನ ಹಾಗೂ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಅವರು ಪ್ರತಿಯೊಬ್ಬ ಮಹಿಳೆ ಪುರುಷರಿಗೆ ಸರಿಸಮವಾಗಿ ಧೈರ್ಯಶಾಲಿಯಾಗಿ ವಿವಿಧ ಕೆಲಸದಲ್ಲಿ ಕಾರ್ಯ ಪ್ರವೃತ್ತರಾಗಬೇಕು. ನಿಷ್ಟೆ, ಪಾರದರ್ಶಕತೆ ಸ್ಥಿತಿ ಸಮಯ ಪ್ರಜ್ಞೆ ನಿರ್ಣಯ ಅತಿಮುಖ್ಯವಾಗಬೇಕು. ಕೌಶಲ್ಯವಿದ್ದರೆ ಹಣ ಸಂಪಾದಿಸಲು ಸಾಧ್ಯ ನಾವು ಹಣದ ಬೆನ್ನು ಹತ್ತದೇ ಅದೇ ನಮ್ಮ ಬೆನ್ನುಹತ್ತುವಂತಾಗಬೇಕು ಎಂದರು.
ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ ಮಾತನಾಡಿ. ಮಹಿಳೆಯರು ಸ್ವ ಸಂಘ ಸ್ಥಾಪಿಸಿ ಉದ್ಯೋಗ ಮಾಡಲು ಆರ್ಥಿಕ ಸಹಾಯ ನೀಡುತ್ತೇವೆ. ಮತ್ತು ಸಣ್ಣಪುಟ್ಟ ಉದ್ಯೋಗಕ್ಕಾಗಿ 10 ಸಾವಿರದಿಂದ 2 ಲಕ್ಷದ ವರೆಗೆ ಸಹಾಯಧನ ನೀಡುತ್ತೇವೆ. 18ನೇ ಹಣಕಾಸಿನ ಯೋಜನೆಯಲ್ಲಿ ಮಹಿಳೆಯರಿಗಾಗಿ ಹೊಲಿಗೆ ಯಂತ್ರ ನೀಡುವ ಕ್ರಿಯಾ ಯೋಜನೆ ಹಾಕಿಕೊಳ್ಳಲಾಗುವದು ಎಂದರು.
ಶಾಲಾ ಮುಖ್ಯಗುರು ನಾರಾಯಣ ಕುಲಕರ್ಣಿ ಮಾತನಾಡಿ. ಮಹಿಳೆ ಸ್ವಾವಲಂಭಿ ಬದಕು ಸಾಗಿಸಲು ಈ ತರಬೇತಿ ಪೂರಕವಾಗಿದೆ. ಇಲ್ಲಿ ತರಬೇತಿ ಪಡೆದ ಮಹಿಳೆಯರು ಮನೆಯಲ್ಲಿಯೇ ವಸ್ತುಗಳನ್ನು ತಯಾರಿಸುವ ಕಾರ್ಯದಲ್ಲಿ ತೊಡಗಬೇಕು. ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಕೌಶಲ್ಯವನ್ನು ರೂಡಿಸಿಕೊಳ್ಳಬೇಕು ಎಂದರು.
ಓಲೇಮಠದ ಡಾ ಚೆನ್ನಬಸವ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶಿರ್ವಚನ ನೀಡಿದರು. ಸ್ಪೂರ್ತಿ ಸಂಸ್ಥೆಯ ಅಧ್ಯಕ್ಷ ಗೂಳಪ್ಪ ಗೊಳಸಂಗಿ ಮಾತನಾಡಿದರು. ಶಿಬಿರಾರ್ಥಿಗಳಾದ ಪ್ರೀತಿ ಭೂಮಾರ, ಗಂಗೋತ್ರಿ ಬಡಿಗೇರ, ಶಾಂತಾ, ಸವಿತಾ ದಳವಾಯಿ ಇತರರು ತಮ್ಮ ಅನಿಸಿಕೆ ಹಂಚಿಕೊಂಡರು.
ವೇದಿಕೆಯಲ್ಲಿ ತಹಸೀಲದಾರ ಸದಾಶಿವ ಮಕ್ಕೋಜಿ, ನಾಗಪ್ಪಾ ಸನದಿ, ಆಶಾದೇವಿ ಗುಡಗುಂಟಿ, ಎನ್.ಬಿ.ಬಿರಾದಾರ, ಸಿ.ಎಸ್.ಬಿರಾದಾರ, ಶ್ರೀಶೈಲ ತೇಲಿ, ಡಾ, ಅಶ್ವಿನಿ ಪೂಜಾರ, ನಂದಿನಿ ಬಾಂಗಿ, ಶಂಕರ ಜಾಲಿಗಿಡದ ಇತರರು ಇದ್ದರು. ಸಂಯೋಜಕ ಎಂ ಗುಡ್ಡಪ್ಪಾ ಸ್ವಾಗತಿಸಿ. ನಿರೂಪಿಸಿದರು. ಸುನೀತಾ ಬಳಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಬಳಗಾರ ವಂದಿಸಿದರು.