ನಾಳೆ ರಂಭಾಪುರಿ ಶ್ರೀಗಳಿಂದ ದುರ್ಗಾ ಮೂರ್ತಿ ಪ್ರತಿಷ್ಠಾಪನೆ
ರಾಣೆಬೆನ್ನೂರ 16: ಸ್ಥಳೀಯ ಶ್ರೀ ಹಿರೇಮಠ ಸಂಸ್ಕೃತಿ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ನಗರ ಹೊರವಲಯದ ಶ್ರೀ ಶನೇಶ್ಚರ ಸ್ವಾಮಿಯ ಬಯಲು ಆಲಯ ದ್ವಾದಶ ಪ್ರತಿಷ್ಠಾ ಮಹೋತ್ಸವದ ನಿಮಿತ್ತ ಲೋಕಕಲ್ಯಾಣಾರ್ಥ ಹಾಗೂ ಪ್ರಾಚೀನ ಧರ್ಮ ಪರಂಪರೆಯ ಸಂವರ್ಧನೆಗಾಗಿ ನಿರಂತರ 593 ದಿನಗಳ ಕಾಲ ಜರುಗುವ ಕಾರ್ಯಕ್ರಮಮದ ನಿಮಿತ್ಯ ಏ.17ರಂದು ಮುಂಜಾನೆ 7 ಘಂಟೆಗೆ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿ ಕೇಂದ್ರ ಮಹಾಸ್ವಾಮಿಗಳವರಿಂದ ದುರ್ಗಾ ಮೂರ್ತಿ ಪ್ರತಿಷ್ಠಾಪನೆ, ಯಾಗ ಮಂಟಪ ಪೂಜೆ, ಮಂತ್ರೋಪದೇಶ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.