ರವಿವಾರದಿಂದ ನಶೆ ಮುಕ್ತ ಸಮಾಜ ಅಭಿಯಾನ: ನಾಸೀರ್
ಗಂಗಾವತಿ 21: ದೇಶ ಕಟ್ಟಬೇಕಾದ ನವ ಯುವಕರು ನಶೆಗೆ ದಾಸರಾಗಿ ತಮ್ಮ ಅಮೂಲ್ಯ ಜೀವ ಹಾಳು ಮಾಡಿಕೊಳ್ಳುತ್ತಿದ್ದು ಸರಿದಾರಿಗೆ ತರುವ ಸದುದ್ದೇಶದಿಂದ ರವಿವಾರ ಬೆಳಗ್ಗೆ 11-30 ಗಂಟೆಗೆ ಇಲ್ಲಿನ ಪ್ರಶಾಂತ ನಗರದಲ್ಲಿರುವ ಶಾಂತಿ ಸದನದಲ್ಲಿ ಸರ್ವಧರ್ಮದ ಧಾರ್ಮಿಕ ಪೂಜ್ಯರಿಂದ ಚಾಲನೆ ನೀಡಲಾಗುವುದು ಎಂದು ಸಾಲಿಡಾರಿಟಿ ಯೂಥ್ ಮೂವ್‌ಮೆಂಟ್ ಸ್ಥಳೀಯ ಅಧ್ಯಕ್ಷ ನಾಸೀರ್ ಅಹೆಮದ್ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೂದುಗುಂಪಾ ಶಾಖಾ ಮಠದ ಸದ್ಗುರು ಶ್ರೀ ಸಿದ್ದೇಶ್ವರ ಶ್ರೀಗಳು, ಗ್ರಾಮೀಣ ಠಾಣಾ ಸಿಪಿಐ ಮಂಜುನಾಥ್, ವ್ಯದ್ಯಾಧಿಕಾರಿ ಈಶ್ವರ ಸವಡಿ, ನಗರಸಭಾ ಪೌರಾಯುಕ್ತ ವಿರುಪಾಕ್ಷ ಮೂರ್ತಿ ಸೆರಿದಂತೆ ಪಾದ್ರಿಗಳು, ಮೌಲ್ವಿಗಳು ಪಾಲ್ಗೊಳ್ಳುವರು ಎಂದರು.
ಜ ಮಾತೆ ಇಸ್ಲಾಂ ಕಾರ್ಯಕರ್ತ ಮೋಹಿನುದ್ದೀನ್ ಕರ್ನೂಲ್ ಇವರು ಮಾತನಾಡಿ, ಒಟ್ಟು ಜನಸಂಖ್ಯೆಯಲ್ಲಿ ಶೇ.14.6 ರಷ್ಟು ಜನ ಆಲ್ಕೋಹಾಲ್ ಸೇವಿಸಿದರೆ, ಗಾಂಜಾ ಶೇ.2.83 ರಷ್ಟು, ಅಫೀಮು, ಚರಸ್ ಇತರೆ ಶೇ.2.1 ರಷ್ಟು ಜನ ಸೇವಿಸಿ ತಮ್ಮ ಆರೋಗ್ಯ ಹಾಳುಮಾಡಿಕೊಳ್ಳುವುದಲ್ಲದೆ ಸಮಾಜದಲ್ಲಿ ಆಶಾಂತಿಗೆ ಕಾರಣವಾಗುತ್ತಿದ್ದಾರೆ ನಶೆ ಮುಕ್ತ ಸಮಾಜ ಕಾರ್ಯಕ್ರಮದ ಮೂಲಕ ಇಂಥವರ ಮನವೊಲಿಸಿ ಉತ್ತಮ ಪ್ರಜೆಗಳನ್ನಾಗಿ ಮಾಡಲು ಯತ್ನಿಸಲಾಗುವುದು ಎಂದು ಹೇಳಿದರು.
ಸಾಲಿಡಾರಿಟಿ ಯೂಥ್ ಮೂವ್‌ಮೆಂಟ್‌ನ ಸಕ್ರೀಯ ಸದಸ್ಯ ರಾಜಾ ಮಾತನಾಡಿ, ಈಗಾಗಲೆ ಸಮಾಜ ಕೇಂದ್ರಿದ ಅಧಿಕಾರಿಗಳಿಂದ ನಶೆಯಿಂದಾಗಿ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗೆಗೆ ವಿಡಿಯೋ ತುಣುಕುಗಳನ್ನು ಸಂಗ್ರಹಿಸಿದ್ದು ಅಕ್ಟೋಬರ್ 22 ಇಂದಿನಿಂದ ಫೋರ್ ವ್ಹೀಲರ್ ವಾಹನದ ಜೊತೆಗೆ ಪ್ರಾಜೆಕ್ಟರ್ ಮೂಲಕ ಧ್ವನಿವರ್ಧಕ ಬಳಸಿ ಐದಾರು ದಿನಗಳ ಕಾಲ ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಪ್ರದರ್ಶನ ಏರಿ್ಡಸಿ ಮನ ಪರಿವರ್ತನೆಗೆ ಪ್ರಯತ್ನಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಶಿಬಿರ ಏರಿ್ಡಸಿ ನಶೆ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಹಾಕಲಿದ್ದೇವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಮೀರ್ ಸೋಹೆಲ್ ಮತ್ತು ಅಬ್ದೂಲ್ ಖುದ್ದೂಸ್ ಇದ್ದರು.