ಶಾಲಾ ಬಲವರ್ಧನಾ ತರಬೇತಿ ಕಾರ್ಯಗಾರಕ್ಕೆ ಚಾಲನೆ
ಯಲಬುರ್ಗಾ ನವೆಂಬರ್ 7: ಅಂಗನವಾಡಿ ಕೇಂದ್ರಗಳ ಶಾಲಾ ಪೂರ್ಣ ಶಿಕ್ಷಣ ಬಲ ವರ್ಧನೆಗೊಳಿಸಲು ಕಾರ್ಯಕರ್ತೆಯರ ಶ್ರಮ ಅತ್ಯಂತ ಮುಖ್ಯವಾಗಿದೆ. ಅಂಗನವಾಡಿ ಕಾರ್ಯಕರ್ತರು ಬಲವರ್ಧನೆಗೊಳಿಸಲು ಮುಂದಾಗಬೇಕು ಎಂದು ತಾಪಂ ಇಓ ಡಾ, ಜಯರಾಂ ಚವ್ಹಾಣ ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಕಲಬುರ್ಗಿ, ಜಿಪಂ ಕೊಪ್ಪಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕೊಪ್ಪಳ, ಯಲಬುರ್ಗಾ ಇವರ ಆಶ್ರಯದಲ್ಲಿ ಶುಕ್ರವಾರ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತೆಯರ 3ನೇ ಹಂತದ ತರಬೇತಿಯ ಶಾಲಾ ಪೂರ್ಣ ಶಿಕ್ಷಣ ಬಲವರ್ಧನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಉಮೇಶ ಹಿರೇಮಠ, ಸಿಡಿಪಿಓ ಅಧಿಕಾರಿ ವೀರುಪಾಕ್ಷಯ್ಯ ಹಿರೇಮಠ ಮಾತನಾಡಿ, ತರಬೇತಿ ಪಡೆದ ಅಂಗನವಾಡಿ ಕಾರ್ಯಕರ್ತೆಯರು ಮಾದರಿ ಅಂಗನವಾಡಿ ಕೇಂದ್ರಗಳನ್ನು ರಚಿಸುವ ಮೂಲಕ ಮಕ್ಕಳಿಗೆ ಕಲಿಕಾ ಸಾಮಾರ್ಥ್ಯ ಹೆಚ್ಚಿಸಲು ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಅಂಗನವಾಡಿ ಕೇಂದ್ರದ ಹಿರಿಯ ಮೇಲ್ವೀಚಾರಕಿ ಲಲಿತಾ ನಾಯಕ ಪ್ರಾಸ್ತವಿಕವಾಗಿ ಮಾತನಾಡಿದರು.
ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ದುರಗಪ್ಪ, ಅಂಗವಾಡಿ ಕೇಂದ್ರದ ಮೇಲ್ವೀಚಾರಕ ಮಾಧವಿ ವೈದ್ಯ, ಚೆನ್ನಮ್ಮ ಶ್ಯಾನಬೋಗರ, ಜಯಲಕ್ಷ್ಮೀ ಮೆಣಸಿನಕಾಯಿ ಭಾಗವಹಿಸಿದ್ದರು.