ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ
ಜಮಖಂಡಿ 24: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಜೀವನವನ್ನೆ ದೇಶದ ಉನ್ನತಿಕರಣ ಹಾಗೂ ಸರ್ವಾಂಗೀಣ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು. ದೇಶವನ್ನು ಸಮರ್ಥವಾಗಿ ನಿರ್ವಹಿಸಿ. ವಿಶ್ವದಲ್ಲಿ 3ನೇ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾರಿ್ಡಸುವಲ್ಲಿ ಅತೀ ಮುಖ್ಯ ನಿಲುವುಗಳನ್ನು ಕೈಗೊಂಡು ವಿಶ್ವ ಮಟ್ಟದಲ್ಲಿ ದೇಶದ ಗರಿಮೆಯನ್ನು ಹೆಚ್ಚಿಸುತ್ತಿರುವ ನಾಯಕರಾಗಿದ್ದಾರೆಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ತಾಲೂಕಿನ ಗೋಠೆ ಗ್ರಾಮದ ಕಾಳಿಕಾದೇವಿ ದೇವಸ್ಥಾನದಲ್ಲಿ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ಯ ಸೇವಾ ಪಾಕ್ಷಿಕದ ಅಂಗವಾಗಿ ಬಿಜೆಪಿ ಪಕ್ಷದ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಹಾಗೂ ರಕ್ತಧಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡಿ. ವಿಶ್ವದಲ್ಲೇ ವಿಶಿಷ್ಟ ಸಾಧನೆಗೈದ ರಾಷ್ಟ್ರ ನಮ್ಮದಾಗಿಸುವಲ್ಲಿ ಸಹಕರಿಸಿದ ವ್ಯಕ್ತಿಯಾಗಿದ್ದಾರೆ. ಕೇವಲ ವ್ಯಕ್ತಿ ಅಲ್ಲ ಇವರು ಭಾರತ ದೇಶದ ಶಕ್ತಿಯಾಗಿದ್ದಾರೆ ಎಂದರು. ಶಿವಾನಂದ ಪಾಟೀಲ ಅವರು ಪ್ರಾಸ್ಥಾವಿಕವಾಗಿ ಮಾತನಾಡಿದರು.
ಮಾಜಿ ವಿಪ ಸದಸ್ಯ ಜಿ,ಎಸ್, ನ್ಯಾಮಗೌಡ ಮಾತನಾಡಿ, ದೇಶದ ಪ್ರಧಾನಿಯವರು 73ನೇ ವಸಂತ ದಾಟಿದರು ಸಹ. 9 ವರ್ಷದಲ್ಲಿ ಒಂದು ದಿನವು ರಜೆ ಪಡೆಯದೆ ಸತತ 18 ಘಂಟೆಗಳ ಕಾಲ ದೇಶದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ.ಅವರ ತಾಯಿ ನಿಧನ ಹೊಂದಿದ ಸಮಯದಲ್ಲಿ ಅರ್ಧಗಂಟೆ ಭಾಗವಹಿಸಿ. ನಂತರ ದೇಶಕ್ಕಾಗಿ ಉಳಿದ ಸಮಯವನ್ನು ಮುಡಿಪಾಗಿಟ್ಟ ವ್ಯಕ್ತಿಯಾಗಿದ್ದಾರೆ ಎಂದರು.
ಡಾ,ವಿಜಯಲಕ್ಷ್ಮೀ ತುಂಗಳ ಮಾತನಾಡಿದರು, ಇದೇ ಸಂದರ್ಭದಲ್ಲಿ ಈಶ್ವರ ಆದೆಪ್ಪನವರ, ಅಜೇಯ ಕಡಪಟ್ಟಿ, ಮಲ್ಲು ದಾನಗೌಡ, ರಾಜುಗೌಡ ಪಾಟೀಲ, ಹನಮಂತ ಅನಂತಪೂರ, ಬಸುಗೌಡ ಪರಮಗೌಡ, ಕಾಶಿನಾಥ ಚನವೀರ, ಡಾ,ರಂಗನಾಥ ಸೋನ್ವಾಲ್ಕರ್, ಡಾ, ಸಾವಂತ, ಡಾ, ಶೇಗುಣಶಿ, ಡಾ, ಚಂದ್ರಶೇಖರ ರುದ್ರಸ್ವಾಮಿಮಠ, ಡಾ, ಚಿಚಖಂಡಿ, ಡಾ, ಅಡಹಳ್ಳಿಮಠ, ಗೋಠೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ, ವಡಗಾಂವಕರ್, ಸಿದ್ದು ಬಡಿಗೇರ, ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು. ಶಿವಾನಂದ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು,
ಪರಶುರಾಮ ಬಿಸನಾಳ ನಿರೂಪಿಸಿದರು, ಸಾಬು ಗಲಗಲಿ ಸ್ವಾಗತಿಸಿದರು, ಜೀವಪ್ಪ ಮಾಳಿ ವಂದಿಸಿದರು.