ಗೋಕಾಕ್

ಡಾ ಉದ್ದಣ್ಣ ಗೋಡೇರಗೆ ಡಾ ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ

ಡಾ ಉದ್ದಣ್ಣ ಗೋಡೇರಗೆ ಡಾ ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ

ಗೋಕಾಕ 27: ತಾಲೂಕಿನ ಜಗನ್ಮಾತೆ ಉದ್ದಮ್ಮಾದೇವಿ ನೆಲೆಸಿರುವ ಉದಗಟ್ಟಿ ಗ್ರಾಮದ ಸಮಾಜ ಸೇವಕ, ಹಿರಿಯ ಜಾನಪದ ದಟ್ಟಿ ಕುಣಿತ ಕಲಾವಿದ ಡಾ ಉದ್ದಣ್ಣಾ ಗೌಡರ(ಗೋಡೇರ)ಅವರಿಗೆ ಧಾರವಾಡ ಸಾಮರಸ್ಯ ಪೌಂಡೇಶನ್ ಹಾಗೂ ಸುದ್ಯಾನ ವಿದ್ಯಾಪೀಠ ಶ್ರೀಮಾತಾ ಪ್ರಕಾಶನ ಕರ್ನಾಟಕ ಅವರಿಂದ ಡಾ. ಬಿ. ಆರ್‌. ಅಂಬೇಡ್ಕರ್ ರಾಷ್ಟ್ರೀಯ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಕಾರ್ಯಕ್ರಮದ ಸಾನಿಧ್ಯವನ್ನು ಡಾ. ಅವದೂತ ಮಹರ್ಷಿ ಸ್ವಾಮೀಜಿ, ಡಾ ಗುರುಶಾಂತವೀರ ಶಿವಚಾರ್ಯ ಮಹಾಸ್ವಾಮಿಗಳು, ಶ್ರೀನಿವಾಸ ಭುದೇಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆಯನ್ನು ಬೆಂಗಳೂರಿನ ಸಾಹಿತಿ, ಪತ್ರಕರ್ತೆ ಮಂಜುಳಾ ಪಾವಗಡ ನೆರವೇರಿಸಿದರು. ಸುಗಮ ಸಂಗೀತ, ಹಾಗೂ ನೃತ್ಯ ಕಾರ್ಯಕ್ರಮ ಡೊಳ್ಳಿನ ಪದ ಹಾಡಿದರು. ಡಾ ನಾಗರಾಜ್ ತಂಬ್ರಹಳ್ಳಿ ಸ್ವಾಗತಿಸಿದರು. ವಿಠ್ಠಲ ಅಪ್ಪು ನಿರೂಪಿಸಿದರು.  

ಸುದ್ದಿ ಓದಿ