ಸಿಂಧಗಿ

ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಯುವಪೀಳಿಗೆಗೆ ದಾರಿ ದೀಪ: ಮಾಗಣಗೇರಿ

ಡಾ.ಶ್ಯಾಮ್ ಪ್ರಸಾದ್  ಮುಖರ್ಜಿ ಯುವಪೀಳಿಗೆಗೆ ದಾರಿ ದೀಪ:  ಮಾಗಣಗೇರಿ

ಸಿಂದಗಿ25:  ಮುಖರ್ಜಿಯರು ಬಾಲ್ಯದಲ್ಲಿಯೇ ದೇಶಪ್ರೇಮಿ ಯಾಗಿದ್ದರು, ಇಂತಹ ಮಹಾನ ಚೇತನಶಕ್ತಿ ಇಂದು ಯುವಪೀಳಿಗೆಗೆ ದಾರಿ ದೀಪವಾಗಿದ್ದಾರೆ. ಇಂಥಾ. ದೇಶ ಪ್ರೇಮದ ಮಹನಿಯರನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಂಡು ಮುಂದೆಸಾಗಬೇಕೆಂದು ಬಿಜೆಪಿಯ ಕೋಶಾಧಕ್ಷ ಶ್ರೀಶೈಗೌಡ ಮಾಗಣಗೇರಿ ಹೇಳಿದರು.

ಅಖಂಡ ಭಾರತದ ಏಕತೆಗೆ ಶ್ರಮಿಸಿದ ಧೀಮಂತ ನಾಯಕ ಜನಸಂಘದ ಸಂಸ್ಥಾಪಕರು ರಾಷ್ಟ್ರೀಯತಿಯ ಹರಿಕಾರ ಡಾ.ಶ್ಯಾಮ್ಪ್ರಸಾದ ಮುಖರ್ಜಿಯವರ ಪುಣ್ಯಸ್ಮರಣೆಯ ಕಾರ್ಯಕ್ರಮವು ಪಟ್ಟಣದ ಬಿಜೆಪಿಯ ಕಾರ್ಯಲಯದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ರವಿಗೌಡ ಬಿರಾದಾರ. ಸಿದ್ದು ಪುಜಾರಿ,ಶೇಖಪ್ಪ ಅಮಲಿಹಾಳ, ಸಿದ್ದಾರಾಮ ಆನಗೊಂಡ, ಪುರಸಭೆಯ ಸದಸ್ಯ ಮಾಂತಗೌಡ ಬಿರಾದಾರ, ಬಸು ಸಜ್ಜನ.ರಾಜು ಗೌಂಡಿ,ಪುಟ್ಟು ದೇಸಾಯಿ, ರುದ್ರಗೌಡ ಮಲಘಾಣ, ಅನೀಲ ಸುಣಗಾರ ಹಾಗೂ ಬಿಜೆಪಿಯ ಮಹಿಳಾ ವಿಭಾಗದ ಸುನಂದಾ ಯಂಪುರೆ,  ಅನಸುಭಾಯಿ ಪಾರಗೊಂಡ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು 

ಸುದ್ದಿ ಓದಿ