ಗೋಕಾಕ್

ಮೋರೀಷಿಸ ದೇಶದ ಸಹಕಾರ ಸಂಘಗಳ ಅಧ್ಯಯನಕ್ಕೆ ಡಾ. ಹೊಸಮಠ ಮತ್ತು ಮಾಂಗಳೇಕರ

ಮೋರೀಷಿಸ ದೇಶದ ಸಹಕಾರ ಸಂಘಗಳ ಅಧ್ಯಯನಕ್ಕೆ ಡಾ. ಹೊಸಮಠ ಮತ್ತು ಮಾಂಗಳೇಕರ

ಗೋಕಾಕ 24: ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ., ಬೆಂಗಳೂರು ಇದರ ನಿರ್ದೇಶಕರಾದ ಡಾ ಸಂಜಯ ಪಂಚಾಕ್ಷರಿ ಹೊಸಮಠ ಮತ್ತು ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಗೋಕಾಕ ಇದರ ಉಪಾಧ್ಯಕ್ಷರಾದ ಶ್ರೀ ಜಿತೇಂದ್ರ ಬಾಳಾಸಾಹೇಬ ಮಾಂಗಳೆಕರ ಇವರುಗಳು ಮೋರೀಷಿಸ ದೇಶದ ಸಹಕಾರ ಮಹಾಮಂಡಳದ ಆಮಂತ್ರಣದ ಮೇರೆಗೆ ಶ್ರೀ ಕಾಕಾ ಕೊಯಿತೆ ಅಧ್ಯಕ್ಷರು ಮಹಾರಾಷ್ಟ್ರ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಇವರ ನೇತೃತ್ವದಲ್ಲಿ ಐದು ದಿನದ ಸಹಕಾರ ಶೈಕ್ಷಣಿಕ ಪ್ರವಾಸವನ್ನು ದ್ವೀಪಗಳ ನಾಡಾದ ಮೋರೀಷಿಸ ದೆಶಕ್ಕೆ ಇದೇ ಜನವರಿ 28 ಶನಿವಾರ ರಂದು ಮುಂಬೈ ಮುಖಾಂತರ ಪ್ರಯಾಣ  ಬೆಳೆಸಲಿದ್ದಾರೆ. 

ಮೋರೀಷಿಸ ಸಹಕಾರ ಮಹಾಮಂಡಳ ಇದೊಂದು ಸ್ವಾಯುತ ಸಂಸ್ಥೆ ಇದ್ದು ಇದು ಮೋರೀಷಿಸ ದೇಶದ ಸಹಕಾರ ಪತ್ತಿನ ಸಂಘಗಳನ್ನು ಪ್ರತಿನಿಧಿಸುತ್ತದೆ, ಜೇಮ್ಸ್‌ ವಿನ್ಸ್ಲೋ ಈ ಮಹಾಮಂಡಳದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಸಹಕಾರ ಆಂದೋಲನವು ಪ್ರತಿ ಊರಿಗೂ ಹರಡಿದ್ದು ಸಹಕಾರ ಕ್ಷೇತ್ರವನ್ನು ಪ್ರವಾಸೋದ್ಯಮ ಮುಖಾಂತರ ಬಲಪಡಿಸಿದ್ದು ವಿಶೇಷ ಎಣಿಸುತ್ತದೆ.ಜೇಮ್ಸ್‌ ವಿನ್ಸ್ಲೋ ಮತ್ತು ಅವರ ತಂಡ ನಮ್ಮೆಲ್ಲರನ್ನೂ ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದು ನಮಗೆ ಹರ್ಷ ತಂದಿದೆ.ನಮ್ಮ ಈ ಐದು ದಿನದ ಪ್ರವಾಸದ ರೂಪ ರೇಶವನ್ನು ಸ್ವತಃ ಜೇಮ್ಸ್‌ ಅವರೇ ರೂಪಿಸಿದ್ದು ಅದರಲ್ಲಿ ಮೂರು ಪ್ರಮುಖ ಪತ್ತಿನ ಸಹಕಾರ ಸಂಘಗಳ ಭೇಟಿ ಮತ್ತು ಎರಡು ಮೊರಿಷಿಸ ಮಹಾಮಂಡಳದವರೊಂದಿಗೆ ವಿಚಾರ ವಿನಿಮಯ, ಚಿಂತನ ಮಂಥನ ಹಾಗೂ ಮುಕ್ತ ಚರ್ಚಾಗೋಷ್ಠಿಯನ್ನು ಏರಿ​‍್ಡಸುತ್ತಿರೊಂದಿಗೆ ದ್ವೀಪಗಳ ನಾಡಾದ ಮೊರಿಷಿಸ್ ದೇಶದ ಪ್ರಮುಖ ಪ್ರೇಕ್ಷಣಿಕ  ಸ್ಥಳಗಳ ಭೇಟಿಕೊಡುತ್ತಿದ್ದು ನಮ್ಮೆಲ್ಲರಿಗೂ ಸಂತಸ ನೀಡಿದೆ.ಮುಂದುವರೆದು ಡಾ ಹೊಸಮಠ ನಮ್ಮ ಸುದ್ದಿಗಾರರೊಂದಿಗೆ ಮಾತನಾಡುತ್ತ ಸಹಕಾರಿ ಕ್ಷೇತ್ರದಲ್ಲಿ ತೊಡಗಿರುವವರು ಶೈಕ್ಷಣಿಕ ಅಧ್ಯಯನ ಮಾಡುವುದು ಬಹಳ ಮುಖ್ಯ ಮತ್ತು ನಾವುಗಳು ಹೊರ ರಾಜ್ಯ ಹೊರದೇಶಗಳಿಗೆ ಭೇಟಿ ಕೊಟ್ಟಾಗ ಮಾತ್ರ ನಮಗೆ ವಿವಿಧ ದೇಶಗಳ ಸಹಕಾರ ಆಂದೋಲನ ಬಗ್ಗೆ ಮನವರಿಕೆ ಆಗುತ್ತದೆ. ವಿವಿಧತೆಯಲ್ಲಿ ಏಕತೆ ಕಾಣುವುದೇ ಸಹಕಾರಿಗಳ ದೂರದೃಷ್ಟಿ ಯಾಗಿರಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಜಿತೇಂದ್ರ ಮಾಂಗಳಿಕರ ಉಪಸ್ಥಿತರಿದ್ದರು. 


ಸುದ್ದಿ ಓದಿ