ಡಾ. ಸಿ. ಕೆ. ನಾವಲಗಿ ಅವರಿಗೆ ಸೇವಾ ರತ್ನ ಪ್ರಶಸ್ತಿ
ಲೋಕದರ್ಶನ ವರದಿ
ಗೋಕಾಕ್ 04: ಡಾ. ಶಿವಬಸವ ಮಹಾಸ್ವಾಮಿಗಳವರ 134ನೇ ಜಯಂತಿಯ ಸಂದರ್ಭದಲ್ಲಿ ಬೆಳಗಾವಿ-ನಾಗನೂರು ರುದ್ರಾಕ್ಷಿಮಠ ಕೊಡಮಾಡುವ 2023ನೇ ಸಾಲಿನ ರಾಜ್ಯಮಟ್ಟದ " ಸೇವಾ ರತ್ನ" ಪ್ರಶಸ್ತಿಯನ್ನು ಸಾಹಿತಿ, ವಚನ-ಜಾನಪದ ಚಿಂತಕ ಡಾ. ಸಿ .ಕೆ. ನಾವಲಗಿ ಅವರಿಗೆ ನೀಡಿ ಗೌರವಿಸಲು ಶ್ರೀಮಠ ನಿರ್ಧರಿಸಿದೆ.
ಪ್ರಶಸ್ತಿಯು 10,000 ನಗದು, ಪ್ರಶಸ್ತಿ ಫಲಕ ಒಳಗೊಂಡಿದ್ದು ಡಿ.8ರಂದು ಶುಕ್ರವಾರ 10. 30ಕ್ಕೆ ಶ್ರೀಮಠದ ಆವರಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪೀಠಾಧಿಪತಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ತಿಳಿಸಿದ್ದಾರೆ.
ಡಾ. ಸಿ.ಕೆ. ನಾವಲಗಿ - ಚೆಂಬೆಳಕಿನ ಮಹಾಬೆಳಗು ಹೆಸರಿನ ಚೆನ್ನವೀರ ಕಣವಿ ಕುರಿತು ರಚಿಸಿದ ವಿಮರ್ಶಾ ಕೃತಿಯನ್ನು ಈ ಹಿಂದೆಯೇ ಶ್ರೀಮಠವು ಪ್ರಕಟಿಸಿ, ಕವಿ ಕಣವಿ ಅವರಿಂದಲೇ ಬಿಡುಗಡೆಗೊಳಿಸಿ, ಅವರಿಂದಲೇ ನಾವಲಗಿ ಅವರಿಗೆ 2017ರಲ್ಲಿ ಗೌರವ ಸನ್ಮಾನ ನೀಡಿದ್ದು ವಿಶೇಷವಾಗಿತ್ತು. ಡಂಬಳಗದಗ ತೋಂಟದಾರ್ಯ ಮಠದ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಶ್ರೀಗಳು, ಕಾರಂಜಿಮಠದ ಗುರುಸಿದ್ಧ ಶ್ರೀಗಳು, ಅರಭಾವಿಮಠದ ಸಿದ್ಧಲಿಂಗಶ್ರೀಗಳು, ವಿದ್ಯಾ ಗುರು ಪ್ರೊ. ಎಂ.ಆರ್.ಉಳ್ಳೇಗಡ್ಡಿ ಮತ್ತು ಹಿರಿಯರಾದ ಬಿ.ಎಸ್. ಗವಿಮಠ ಅವರು ಉಪಸ್ಥಿತರಿದ್ದು, ಆಶೀರ್ವದಿಸಿದ್ದುದು ಇಲ್ಲಿ ಸ್ಮರಣೀಯ. ಇವರು ನಗರದ ಜೆ.ಎಸ್.ಎಸ್. ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಚಾರ್ಯರ