‘ಡಾ.ಅಭಿನವಕುಮಾರ ಚೆನ್ನಬಸವ ಮಹಾಸ್ವಾಮಿಗಳು ಮಹಾನ್ ಕವಿಗಳು’
ಜಮಖಂಡಿ 29: ಓಲೆಮಠದ ಡಾ.ಅಭಿನವಕುಮಾರ ಚೆನ್ನಬಸವ ಮಹಾಸ್ವಾಮಿಗಳು ವಾಕ್ಸಿದ್ಧಿ ಮತ್ತು ಲೇಖನಸಿದ್ಧಿ ಎರಡನ್ನೂ ಮೈಗೂಡಿಸಿಕೊಂಡಿದ್ದಾರೆ. ಒಳ್ಳೆಯ ಖ್ಯಾತ ಪ್ರವಚನಕಾರು ಹಾಗೂ ಮಹಾನ್ ಕವಿಗಳು ಆಗಿದ್ದಾರೆ ಎಂದು ಆಲಗೂರಿನ ಪಂಚಮಸಾಲಿ ಪೀಠದ ಜಗದ್ಗುರು ಡಾ.ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಶ್ರಾವಣ ಮಾಸದ ನಿಮಿತ್ತ ನಗರದ ಓಲೆಮಠದಲ್ಲಿ ಹಮ್ಮಿಕೊಂಡಿದ್ದ ಬಸವ ಸಮಕಾಲೀನ ಶರಣರ ಚರಿತಾಮೃತ ಪ್ರವಚನ ಮಂಗಲೋತ್ಸವ ಹಾಗೂ ಡಾ.ಅಭಿನವಕುಮಾರ ಚೆನ್ನಬಸವ ಮಹಾಸ್ವಾಮಿಗಳು ರಚಿಸಿರುವ ಕೃತಿಗಳನ್ನು ಲೋಕಾರೆ್ಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸತತ ಅಧ್ಯಯನ, ಚಿಂತನಶೀಲತೆ, ಪರಿಶ್ರಮ, ಪ್ರತಿಭೆ, ಸೃಜನಶೀಲತೆ, ಶ್ರೇಷ್ಠ ಸಂಶೋಧಕರು ಆಗಿರುವ ಪೂಜ್ಯರು ಕಾವ್ಯ, ವ್ಯಕ್ತಿಚಿತ್ರಣ, ಪುರಾಣ ವಚನಗಳು, ಚುಟುಕುಗಳು, ಪ್ರವಾಸ ಕಥನ, ಸಂಶೋಧನಾ ಮಹಾಪ್ರಬಂಧ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸುಮಾರು 90 ಕೃತಿಗಳನ್ನು ರಚಿಸಿದ್ದಾರೆ ಎಂದರು.
ಶಾಸಕ ಜಗದೀಶ ಗುಡಗುಂಟಿ ಕೃತಿಗಳನ್ನು ಲೋಕಾರೆ್ಣ ಮಾಡಿ ಮಾತನಾಡಿ, ಜ್ಞಾನವಿದ್ದರೆ ಮಾತ್ರ ಕೃತಿ ರಚಿಸಲು ಶಬ್ದಗಳು ಹೊರಬರುತ್ತವೆ. ಮನಸ್ಸಿನಲ್ಲಿ ಮೂಡಿದ್ದನ್ನು ಸ್ಪಷ್ಟವಾಗಿ ಬರೆಯುವ ಹದುಳ ಮನಸ್ಸು ಓಲೆಮಠದ ಪೂಜ್ಯರಿಗಿದೆ ಎಂದರು.
ವಕೀಲ ಎನ್.ಎಸ್. ದೇವರವರ, ಚಿಮ್ಮಡದ ಅಲ್ಲಮಪ್ರಭು ಸಂಸ್ಥಾನಮಠದ ಪ್ರಭು ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು, ‘ಕುಮಾರ ಚೌಪದಿ ಮಹಾಕಾವ್ಯ, ಆಧುನಿಕ ವಚನ ಸಂಪುಟ-50, ಓಲೆಮಠದ ಶ್ರೀಗಳ ಸಾಹಿತ್ಯ ಅವಲೋಕನ’ ಕೃತಿಗಳು ಲೋಕಾರೆ್ಣಗೊಂಡವು.
ಸೋಲಾಪುರದ ಕೀರೀಟ ಮಠದ ಸ್ವಾಮಿನಾಥ ಮಹಾಸ್ವಾಮಿಗಳು, ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಓಲೆಮಠದ ಡಾ.ಅಭಿನವಕುಮಾರ ಚೆನ್ನಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಸಾಹಿತಿ ಡಾ.ಅಶೋಕ ನರೋಡೆ, ಸಾಹಿತಿ ಶಿವಾನಂದ ದಾಶ್ಯಾಳ ಅವರು ಕೃತಿಗಳನ್ನು ಪರಿಚಯಿಸಿದರು. ವಕೀಲ ರವಿ ಯಡಹಳ್ಳಿ, ಶ್ರೀಮಠದ ಸದ್ಭಕ್ತರಾದ ಸವದತ್ತಿಯ ಬಸವರಾಜ ಪ್ರಭುನವರ, ಜಗದೀಶ ಹಳೇಮನಿ, ಸೋಮಯ್ಯ ಗುದ್ದಯ್ಯನವರ, ಉಮೇಶ ಕಲಗುಡಿ ಇದ್ದರು. ಶರಣೆ ಭಾರತಿ ಅಮ್ಮನವರು ಬಸವಾದಿ ಶಿವಶರಣ ಕಾಯಕ-ದಾಸೋಹ ಕುರಿತು ಪ್ರವಚನ ನೀಡಿದರು. ಪಿ.ಎಸ್. ಕಟ್ಟಿಮನಿ, ಮಲ್ಲಿಕಾರ್ಜುನ ನಾವಿ ಸಂಗೀತ ಸೇವೆ ಸಲ್ಲಿಸಿದರು. ಶಿವಾನಂದ ಕೊಣ್ಣೂರ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಶಂಕರ ಲಮಾಣಿ ನಿರೂಪಿಸಿದರು. ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ವಂದಿಸಿದರು.