ಜಿಲ್ಲಾ ಮಟ್ಟದ ಕ್ರೀಡಾಕೂಟ: ವಿದ್ಯಾರ್ಥಿನಿ ಮಹಾಲಕ್ಷ್ಮಿ ಸಾಧನೆ
ಲೋಕದರ್ಶನ ವರದಿ,
ಜಮಖಂಡಿ 5: ತಾಲೂಕಿನ ಸಮೀಪ ಕಡಪಟ್ಟಿ, ಜಮಖಂಡಿ ಬಸವೇಶ್ವರ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಹಾಲಕ್ಷ್ಮಿ ಬಸಕಳಿ ಅವರು ಗಲಗಲಿಯಲ್ಲಿ ನಡೆದ. ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ. 1500ಮೀ ಪ್ರಥಮ. 3000ಮೀ ಪ್ರಥಮ ಹಾಗೂ ಗುಡ್ಡುಗಾಡು ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಧಾರವಾಡದಲ್ಲಿ ನಡೆಯಲಿರುವ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆಂದು ಕಾಲೇಜಿನ ಅದ್ಯಕ್ಷ ಜಿ, ಕೆ, ಮಠದ ಆಡಳಿತ ಅಧಿಕಾರಿ ಡಾ, ಆರ್, ಎನ್, ಮಡಿವಾಲರ, ಪ್ರಾಚಾರ್ಯ ಆರ್, ಎಸ್, ತಳ್ಳಿ ಹಾಗೂ ಸಿಬ್ಬಂದಿವರ್ಗ ಶುಭ ಹಾರೈಸಿ ವಿದ್ಯಾರ್ಥಿನಿಯು ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾಳೆ ಎಂದು ತಿಳಿಸಿ ಸನ್ಮಾನಿಸಿದ್ದರು.