ಜಮಖಂಡಿ

ಮಾ.12ರಂದು ಜಿಲ್ಲಾ ಮಟ್ಟದ ಬೃಹತ್ ಸಮಾವೇಶ

ಮಾ.12ರಂದು ಜಿಲ್ಲಾ ಮಟ್ಟದ ಬೃಹತ್ ಸಮಾವೇಶ

ಲೋಕದರ್ಶನ ವರದಿ, 

ಜಮಖಂಡಿ 10: ತಳವಾರ ಮಹಾಸಭಾ ಸಮಿತಿ ಸಹಯೋಗದಲ್ಲಿ ಬನಹಟ್ಟಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಾ.12ರಂದು ಸರಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಲು ಜಿಲ್ಲಾ ಮಟ್ಟದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಪಾಧ್ಯಕ್ಷ ಬಸವರಾಜ ಸೋಮಾಪೂರ ತಿಳಿಸಿದರು. 

ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಳವಾರ ಸಮಾಜವು ಅತೀ ಕಡುಬಡತನಲ್ಲಿ ಇದ್ದು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಬಹಳ ತೊಂದರೆಯನ್ನು ಅನುಭವಿಸಬೇಕಾಗಿತ್ತು. 30 ವರ್ಷಗಳ ಕಾಲ ಸತತವಾಗಿ ಹೋರಾಟವನ್ನು ನಡೆಸುತ್ತಾ ಬಂದರು ಸಹ ಇದುವರೆಗೂ ಯಾವ ಸರಕಾರವು ತಳವಾರ ಸಮಾಜದ ಕಡೆಗೆ ಗಮನ ಹರಿಸಿದೆ ವಂಚಿತರನ್ನಾಗಿಸಿತ್ತು. ಆದರೆ ಇಂದಿನ ಸರಕಾರ ತಳವಾರ ಸಮಾಜವನ್ನು ಎಸ್,ಟಿ ಸಮಾಜಕ್ಕೆ ಸರಕಾರ ಸೇರೆ​‍್ಡ ಮಾಡಿ. ಪ್ರತಿಯೊಬ್ಬರಿಗೆ ಪ್ರಮಾಣ ಪತ್ರವನ್ನು ನೀಡಿದ ಕಾರಣ ಸರಕಾರಕ್ಕೆ ಕೃತಜ್ಞತೆ ಸಲಿಸಲು ಜಿಲ್ಲಾ ಮಟ್ಟದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ್ಕ ತಳವಾರ ಬಂಧುಗಳು ಸೇರಲಿದ್ದಾರೆ ಎಂದು ತಿಳಿಸಿದರು. 

ತಾಲೂಕ ಘಟಕ ಅಧ್ಯಕ್ಷ ಸಂಗಮೇಶ ನಾಗನೂರ, ನಗರ ಘಟಕ ಅಧ್ಯಕ್ಷ ರಾಮು ತಳವಾರ ಮಾತನಾಡಿದರು. ಉಪಾಧ್ಯಕ್ಷ ಶಿವು ಜತ್ತಿ, ಪ್ರ,ಕಾರ್ಯದರ್ಶಿ ರಾಜು ಗಡ್ಡಿ, ಆನಂದ ಪುಕಾಳೆ, ಮಹಾದೇವ ಕೋಳಿ, ರವಿಕುಮಾರ ಬೆಳಗಲ, ಉಮೇಶ ಗಸ್ತಿ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.  


ಸುದ್ದಿ ಓದಿ