ಎರಡು ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ
ಕೊಪ್ಪಳ 17: ನಗರದ ಶ್ರೀಶೈಲ್ ನಗರ್ ಸರ್ಕಲ್ ಹತ್ತಿರದಿಂದ ನಿರ್ಮಿತಿ ಕೇಂದ್ರದ ಬಡಾವಣೆ ಮೂಲಕ ಬಹದ್ದೂರ್ ಬಂಡಿ ರಸ್ತೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ವರೆಗಿನ ಎರಡು ಕೋಟಿ ರೂಪಾಯಿ ಕೆಆರ್ಡಿಬಿ ಯೋಜನೆಯ ಅನುದಾನದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುರುವಾರದಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಿಗಿರವರು ಚಾಲನೆ ನೀಡಿದರು, ಇದೆ ವೇಳೆ ಮೂರನೇ ವಾರ್ಡಿನ ಮಾಜಿ ಸದಸ್ಯ ಹಾಗೂ ನಗರಸಭೆಯ ಮಾಜಿ ಅಧ್ಯಕ್ಷ ಮತ್ತು ಸಮಾಜದ ಹಿರಿಯ ಮುಖಂಡ ಅಮ್ಜದ್ ಪಟೇಲ್ ರವರ ನೇತೃತ್ವ ದಲ್ಲಿ ನಿರ್ಮಿತಿ ಕೇಂದ್ರದ ಮುಸ್ಲಿಂ ಪಂಚ್ ಕಮಿಟಿ ಸೇರಿದಂತೆ ಓಣಿಯ ವಿವಿಧ ಸಂಘಟನೆಗಳು ಸಚಿವ ಶಿವರಾಜ್ ತಂಗಡಗಿ ಮತ್ತು ಶಾಸಕ ಕೆ ರಾಘವೇಂದ್ರ ಹಿಟ್ನಾಳ ರವರಿಗೆ ಸನ್ಮಾನಿಸಿದರು,
ಈ ಸಂದರ್ಭದಲ್ಲಿ ಕೊಪ್ಪಳ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಲಾಟೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಪಾಷಾ ಕಾಟನ್ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಾಷೂ ಸಾಬ್ ಖತೀಬ್, ನಗರಸಭೆಯ ಮಾಜಿ ಸದಸ್ಯ ಅಜಿಮುದ್ದೀನ್ ಅತ್ತಾರ್, ಯುವ ನಾಯಕ ಆಸಿಫ್ ಹಣಗಿ ಅಜ್ಜಪ್ಪ ಗೌಡ ಶಿವಕುಮಾರ್ ಪೌಲಿ ಶೆಟ್ಟರ್, ಸಲೀಂ ಅಳವಂಡಿ ಅಕ್ಬರ್ ಪೊಲೀಸ್ ಮನಿ ಸೈಯದ್ ಬಶೀರ್ ಅಹ್ಮದ್ ಅತ್ತಾರ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.