ಜಮಖಂಡಿ

ವಿವಿಧ ಗ್ರಾಮ ಜಲಾವೃತ ಜಿಲ್ಲಾಧಿಕಾರಿ ಜಾನಕಿ ಭೇಟಿ ನೀಡಿ:ಪರೀಶೀಲನೆ

ವಿವಿಧ ಗ್ರಾಮ ಜಲಾವೃತ ಜಿಲ್ಲಾಧಿಕಾರಿ ಜಾನಕಿ ಭೇಟಿ ನೀಡಿ:ಪರೀಶೀಲನೆ


ಲೋಕದರ್ಶನ ವರದಿ, 

ಜಮಖಂಡಿ  29: ತಾಲೂಕಿನ ಕೃಷ್ಣಾ ನದಿಯ ತೀರದ ವಿವಿಧ ಗ್ರಾಮಗಳು ಜಲಾವೃತಗೊಂಡ ನಡುಗೆಡ್ಡೆಗಳಿಗೆ ಹಾಗೂ ಜಲಾಶಯಗಳಿಗೆ ಜಿಲ್ಲಾಧಿಕಾರಿ ಕೆ,ಎಂ, ಜಾನಕಿ ಭೇಟಿ ನೀಡಿ.ನೀರಿನ ಮಟ್ಟ ಅವಲೋಕನ ಮಾಡಿ. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾದರೆ ಅದಕ್ಕೆ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮಹಾರಾಷ್ಟ್ರದ ಮಳೆ ದಿನದಿನಕ್ಕೆ ಹೆಚ್ಚಾಗುವ ಬಗ್ಗೆ ಯಾವದೇ ಮಾಹಿತಿ ಇಲ್ಲ. ಇವಾಗ ನದಿ ತೀರದ  ಗ್ರಾಮದ ಜನರ ಸಮಸ್ಯೆಗಳ ಬಗ್ಗೆ ಮಾಹಿತಯನ್ನು ಪಡೆದುಕೊಂದ್ದು. ಸ್ಥಳೀಯ ಮಟ್ಟದ ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಲಾಗಿದ್ದು. ಎಷ್ಟು ಸಾಧ್ಯವೋ ಅಷ್ಟು ಜನರನ್ನು ಸುರಕ್ಷಿತವಾಗಿರಲು ಜಿಲ್ಲಾಡಳಿತ ಕ್ರಮ ವಹಿಸುತ್ತದೆ. ಮಹಾರಾಷ್ಟ್ರದ ಜಿಲ್ಲಾಡಳಿತದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು. ಅಪಾಯಕ್ಕೆ ಒಳಗಾಗದ ಹಾಗೆ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯ ನಾವು ರಕ್ಷಣೆ ಮಾಡುತ್ತೇವೆ ಎಂದರು. 

ಗ್ರಾಮ, ತಾಲೂಕ, ಜಿಲ್ಲಾಮಟ್ಟ ತಂಡಗಳನ್ನು ರಚಿಸಲಾಗಿದ್ದು. ಪ್ರವಾಹವನ್ನು ಎದುರಿಸುವ 203 ಗ್ರಾಮಗಳನ್ನು ವಿಂಗಡಿಸಲಾಗಿದೆ. ಒಂದೊಂದು ಗ್ರಾಮಕ್ಕೆ ಒಬ್ಬ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಅವರಿಗೆ ಪ್ರತಿದಿನ ಮಾಹಿತಿ ನೀಡಲು ಸೂಚಿಸಲಾಗಿದೆ. ಈಗಾಗಲೇ ಜನರೊಂದಿಗೆ ಸಂಪರ್ಕದಲ್ಲಿದ್ದು. ಜನರ ಬೇಡಿಕೆಯಂತೆ ಬೋಟ್ ಖರೀದಿ ಮಾಡಲು ಸೂಚಿಸಲಾಗಿದೆ. ನೀರಿನ ಪ್ರವಾಹ ಹೆಚ್ಚಾದರೇ ಕಾಳಜಿ ಕೇಂದ್ರಗಳ ಸಿದ್ಧತೆ ಮಾಡಲಾಗಿದೆ. ರೇಷನ್, ವಸತಿ, ಬಟ್ಟೆ ತಾತ್ಕಾಲಿಕವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. 24 ವಾರಗಳಷ್ಟು ಜಾನುವಾರಗಳಿಗೆ ಮೇವು ಸಂಗ್ರಹಿಸಲಾಗಿದೆ. ಮಳೆಯಿಂದ ಹಾನಿಯಾದ ಮನೆಗಳಿಗೆ ಸರ್ಕಾರದಿಂದ ಪರಿಹಾರ ನೀಡುತ್ತಿದ್ದೇವೆ. ಈಗಾಗಲೇ 24 ಮನೆಗಳಿಗೆ ಪರಿಹಾರ ನೀಡಲಾಗಿದೆ. ಇನ್ನುಳಿದ ಮನೆಗಳನ್ನು ಸಮೀಕ್ಷೆ ಮಾಡಿ ಪರಿಹಾರ ನೀಡಲಾಗುವುದು ಎಂದರು. 


ಅಳಲು ತೊಂಡಿಕೊಂಡ ಗ್ರಾಮಸ್ಥರು : 

ಮುತ್ತೂರ ನಡುಗಡ್ಡೆಯಲ್ಲಿ 38 ಮನೆಗಳಿದ್ದು, 250 ಎಕರೆ ಜಮೀನನ್ನು ಹೊಂದಿದ್ದಾರೆ. ಆದರೆ ಆ ಜಮೀನಿಗೆ ಹಾಗೂ ರೈತರಿಗೆ ಸರ್ಕಾರದಿಂದ ಯಾವುದೇ ಪರಿಹಾರ ಹಾಗೂ ಪುನರ್ವಸತಿ ಕೇಂದ್ರವನ್ನು ಕಲ್ಪಿಸಲಾಗಿಲ್ಲ. ಆದ್ದರಿಂದ ನಾವು ಇಲ್ಲಿಯೇ ಉಳಿದಿದ್ದೇವೆ. ನಾವು ಹೈನುಗಾರಿಕೆಯನ್ನೇ ಅವಲಂಭಸಿದ್ದು, ನಾವು ಹಾಲು ಮಾರಲು ಬಹಳಷ್ಟು ತೊಂದರೆ ಆಗಿದೆ. ಹಾಗೂ ನಮಗೆ ಶಾಶ್ವತವಾಗಿ ಪರಿಹಾರ ಸಿಗುವವರೆಗೆ ನಾವು ಇಲ್ಲಿಂದ ಸ್ಥಳ ಬಿಡುವುದಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ಜಿಲ್ಲಾಧಿಕಾರಿಗಳ ಮುಂದೆ ತೊಡಿಕೊಂಡರು.  

ನುಗ್ಗೆಕಾಯಿ ಇಷ್ಟ ಡಿಸಿ : 

ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಭೇಟಿ ನೀಡುವ ಸಮಯದಲ್ಲಿ ರಸ್ತೆಯ ನಡುವೆ ಕಾರು ನಿಲ್ಲಿಸಿ. ಜಮೀನನಲ್ಲಿ ಬೆಳೆದ ನುಗ್ಗೆಕಾಯಿ ಕಿತ್ತುಕೊಂಡು ಮನೆಗೆ ತೆಗೆದುಕೊಂಡರು. ನನಗೆ  ನುಗ್ಗೆಕಾಯಿ ಎಂದರೆ ಬಹಳಷ್ಟು ಇಷ್ಟ ಎಂದರು. 

ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ, ತಹಶೀಲ್ದಾರ ಸದಾಶಿವ ಮುಕ್ಕೋಜಿ, ನಗರಸಭೆ ಪೌರಾಯುಕ್ತೆ ಲಕ್ಷ್ಮಿ ಅಷ್ಟಗಿ, ತಾ.ಪಂ.ಅಧಿಕಾರಿ ಗುರುಶಾಂತಪ್ಪ ಬೆಳುಂಡಗಿ ಸೇರಿದಂತೆ ಅನೇಕರು ಇದ್ದರು. 


ಪೋಟೋ : ತಾಲೂಕಿನ ಕೃಷ್ಣಾ ನದಿಯ ತೀರದ ವಿವಿಧ ಗ್ರಾಮಗಳು ಜಲಾವೃತಗೊಂಡ ನಡುಗೆಡ್ಡೆಗಳಿಗೆ ಹಾಗೂ ಜಲಾಶಯಗಳಿಗೆ ಜಿಲ್ಲಾಧಿಕಾರಿ ಕೆ,ಎಂ, ಜಾನಕಿ ಭೇಟಿ ನೀಡಿ.ನೀರಿನ ಮಟ್ಟ ಅವಲೋಕನ ಮಾಡಿ. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. 


ಸುದ್ದಿ ಓದಿ