ಹಾಲಿನ ಪುಡಿಯ ಪಾಕೆಟ್ ಶಾಲಾ ಮಕ್ಕಳಿಗೆ ವಿತರಣೆ
ಸಿಂದಗಿ29: ಸರ್ಕಾರಿ ಶಾಲಾ ಮಕ್ಕಳಿಗೆ ತಿಂಗಳಿಗೆ ಅರ್ಧ ಕೆಜಿ ಕೆನೆಭರಿತ ಪೌಷ್ಟಿಕ ಹಾಲಿನ ಪುಡಿಯನ್ನು ಕರ್ನಾಟಕ ಸರ್ಕಾರದ ಕ್ಷೀರಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿದೆ ಎಂದು ಮುಖ್ಯಶಿಕ್ಷಕ ಎಂ.ಜಿ. ತಳವಾರ ಹೇಳಿದರು.
ತಾಲೂಕಿನ ನಂದಗೇರಿ ಗ್ರಾಮದ ಸರಕಾರಿ ಪ್ರಾಥಮಿಕಶಾಲೆಯ ಆವರಣದಲ್ಲಿ ಶನಿವಾರ 2021-22ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಕ್ಷೀರಭಾಗ್ಯ ಯೋಜನೆಯಡಿ ಕೆನೆಭರಿತ ಹಾಲಿನ ಪುಡಿಯ ಪಾಕೆಟ್‍ನ್ನು ಶಾಲಾ ಮಕ್ಕಳಿಗೆ ವಿತರಿಸಿ ಮಾತನಾಡಿದರು.
ಮಕ್ಕಳು ದಿನಾಲು ಹಾಲಿನ ಪುಡಿಯನ್ನು ಹಾಲನ್ನು ಮಾಡಿ ಕುಡಿಯುವುದರಿಂದ ನಿಮ್ಮ ನಿಮ್ಮ ದೇಹಕ್ಕೆ ಅವಶ್ಯಕ ಪೋಷಕಾಂಶಗಳಾದ ಎನರ್ಜಿ, ಕಾರ್ಬೋಹೈಡ್ರೇಟ್, ಪ್ರೊಟೀನ್, ಕ್ಯಾಲ್ಸಿಯಂ, ಮುಂತಾದವುಗಳು ನಿಮಗೆ ಸಿಗುತ್ತವೆ ಹಾಗಾಗಿ ಪ್ರತಿಯೊಬ್ಬರೂ ತಪ್ಪದೇ ಹಾಲನ್ನು ಕುಡಿದು ಶಕ್ತಿವಂತರಾಗಿ ಬೇಕು. 2021-22ನೇ ಸಾಲಿನ ಜೂನ್ ಮತ್ತು ಜುಲೈ ಎರಡು ತಿಂಗಳ ಒಟ್ಟು ಒಂದು ಕೆಜಿ ಹಾಲಿನ ಪುಡಿಯನ್ನು ಪ್ರತಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ ಎಂದು ಹೇಳಿದರು.
ಶಿಕ್ಷಕ ಎಸ್.ಎಲ್. ಸುಂಬಡ, ಕೆ.ಎಂ. ಬಿರಾದಾರ, ಬಿ.ಎಂ. ನಾಯಕೋಡಿ, ಬಿ.ಎಂ. ಕೋಟಿ, ಬಿ.ಜಿ. ಯಂಕಂಚಿ, ಎಸ್.ಐ. ಚಾಂದಕವಟೆ, ನವೀನಕುಮಾರ್ ಎಚ್.ಎಲ್. ಸೇರಿದಂತೆ ಇತರರು ವಿತರಣೆ ಕಾರ್ಯಕ್ರಮದಲ್ಲಿ ಇದ್ದರು.