ಗೋಕಾಕ್

ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ

ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ

ಗೋಕಾಕ 17: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವ ಗೋಕಾಕ ಮತಕ್ಷೇತ್ರದ ಆಶಾ ಕಾರ್ಯಕರ್ತೆಯರಿಗೆ ಬೆಳಗಾವಿ ಸಂಸದೆ ಮಂಗಳಾ ಸುರೇಶ ಅಂಗಡಿ ಅವರು ನೀಡಿದ ಆಹಾರ ಕಿಟಗಳನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಗುರುವಾರದಂದು ನಗರದ ತಮ್ಮ ಕಾರ್ಯಾಲಯದ ಆವರಣದಲ್ಲಿ ವಿತರಿಸಿದರು. 

ಈ ಸಂದರ್ಭದಲ್ಲಿ ಶೃದ್ದಾ ಅಂಗಡಿ, ಜಿ.ಪಂ ಮಾಜಿ ಸದಸ್ಯರಾದ ಟಿ.ಆರ್‌.ಕಾಗಲ್, ಮಡೆಪ್ಪ ತೋಳಿನವರ, ನಗರಾಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮನ್ನವರ, ಮುಖಂಡರುಗಳಾದ ಎಸ್‌.ವ್ಹಿ ದೇಮಶೆಟ್ಟಿ, ಬಸವರಾಜ ಹಿರೇಮಠ, ಸುರೇಶ ಸನದಿ, ಲಕ್ಕಪ್ಪ ತಹಶೀಲ್ದಾರ, ಚಿದಾನಂದ ದೇಮಶೆಟ್ಟಿ, ಸೇರಿದಂತೆ ಅನೇಕರು ಇದ್ದರು. 

ಸುದ್ದಿ ಓದಿ