ಅಥಣಿ

ಶಿಸ್ತು, ಸಂಯಮ, ಯಶಸ್ಸಿನ ರಹದಾರಿ: ಭಂಡಾರಿಮಠ

ಶಿಸ್ತು, ಸಂಯಮ, ಯಶಸ್ಸಿನ ರಹದಾರಿ:  ಭಂಡಾರಿಮಠ
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮ.ನಿ.ಪ್ರ ಮರುಳಸಿದ್ಧ ಮಹಾಸ್ವಾಮಿಗಳನ್ನು ಸನ್ಮಾನಿಸುತ್ತಿರುವ ದೃಶ್ಯ

ಅಥಣಿ 8: ಶಿಸ್ತು, ಸಂಯಮ, ತಾಳ್ಮೆ ವಿದ್ಯಾರ್ಥಿ ಬದುಕಿಗೆ ಯಶಸ್ಸಿನ ರಹದಾರಿಗಳು ಎಂದು ಬೆಂಗಳೂರಿನ ಶ್ರವಣಕುಮಾರ ಭಂಡಾರಿಮಠ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಹೇಳಿದರು.

ಅವರು ಸ್ಥಳೀಯ ಎಸ್ ಎಸ್ ಎಮ್ ಎಸ್ ಕಾಲೇಜು ಸಭಾಭವನದಲ್ಲಿ ರವಿವಾರ ಸಾಯಂಕಾಲ ಜರುಗಿದ ಚಾಣಕ್ಯರತ್ನ ಕರಿಯರ್ ಅಕಾಡೆಮಿ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಪ್ರಯುಕ್ತ ಮುಕ್ತ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆಯ ಬಹುಮಾನ ಹಾಗೂ ರಾಜ್ಯ ಮಟ್ಟದ ಚಾಣಕ್ಯ ರತ್ನ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಥಣಿ ಪಟ್ಟಣದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನ ಮಾಡುತ್ತಿರುವ ನಾಗರಾಜ್ ಮಜ್ಜಗಿ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ನಂತರ ಉಪನ್ಯಾಸಕ ಸಾಹಿತಿ ಡಾ ಆರ್ ಎಸ್ ದೊಡ್ಡನಿಂಗಪ್ಪಗೋಳ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಾ ಇಂದು ಗ್ರಾಮೀಣ ನಗರ ಪ್ರದೇಶವೆನ್ನದೆ ಎಲ್ಲೆಡೆ ಯಲ್ಲೂ ಕೂಡ ಸ್ಪರ್ಧಾತ್ಮಕ ಪರೀಕ್ಷೆಯ ಅರಿವುಜಾಗೃತವಾಗಿದೆ. ಈ ನಿಟ್ಟಿನಲ್ಲಿ ಸತತ ಪರಿಶ್ರಮ ತಾಳ್ಮೆ ಹಾಗೂ ಒಳ್ಳೆ ಮಾರ್ಗದರ್ಶಕರ ದಾರಿಯಲ್ಲಿ ಸಾಗಿದರೆ ಬದುಕಿನಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಇಂದು ಇಷ್ಟೆಲ್ಲ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಿದ್ಧು ಅಧ್ಯಯನ ಮಾಡಿದ ಅಭ್ಯರ್ಥಿಗಳು ಮನೆಮನೆಗೆ ಐಎಎಸ್ ಐಪಿಎಸ್ ಕೆ ಎ ಎಸ ಪಿಎಸ್ಸೈ ಉತ್ತಮ ಆಡಳಿತಾತ್ಮಕ ಹುದ್ದೆಗಳನ್ನು ಪಡೆದುಕೊಂಡು ಭವ್ಯ ಭಾರತದ ನಿರ್ಮಾಣ ಮಾಡಬೇಕೆಂದು ಕರೆ ನೀಡಿದರು.

ಸಾನಿಧ್ಯವನ್ನು ಮರುಳಸಿದ್ಧ ಮಹಾಸ್ವಾಮಿಗಳು ಶೆಟ್ಟರಮಠ ಅಥಣಿ ವಹಿಸಿ ಮಾತನಾಡಿದರು, ಅಧ್ಯಕ್ಷತೆಯನ್ನು ವಹಿಸಿದ ಚಾಣಕ್ಯ ಕರಿಯರ್ ಅಕಾಡೆಮಿ ನಿರ್ದೇಶಕ ನಾಗರಾಜ್ ಮಜ್ಜಿಗೆ ಮಾತನಾಡಿ ನಮ್ಮ ಚಾಣಕ್ಯರ ಅಕಾಡೆಮಿಯಲ್ಲಿ ವಿಶೇಷವಾಗಿ ಗ್ರಾಮೀಣ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದ್ದು ಹೆಚ್ಚೆಚ್ಚು ಮಕ್ಕಳು ನಮ್ಮ ತರಬೇತಿ ಕೇಂದ್ರಕ್ಕೆ ಆಗಮಿಸಿ ಉತ್ತಮ ತರಬೇತಿ ಪಡೆದು ಬದುಕಿನಲ್ಲಿ ಉನ್ನತ ಹುದ್ದೆ ಪಡೆಯಬೇಕು ಅದಕ್ಕೆ ನಮ್ಮ ಸಂಸ್ಥೆ ಎಂದೆಂದಿಗೂ ಸಹಕಾರ ನೀಡುತ್ತಿದೆ ಎಂದು ಹೇಳಿದರು.

ವಿಶೇಷ ಆಹ್ವಾನಿತರಾಗಿ ಮಂಜುನಾಥ ಬ್ಯಾಡಗಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು, ಬೆಂಗಳೂರು ಅಶೋಕ ಬಿರಾದಾರ ನಿರ್ದೇಶಕರು ಆರ್ಯಭಟ ಕರಿಯರ್ ಅಕಾಡೆಮಿ, ವಿಜಯಪೂರ ಪಾಲ್ಗೊಂಡಿದ್ದರು.

ಚಾಣಕ್ಯ ರತ್ನ ಪ್ರಶಸ್ತಿಯನ್ನು ನಿಶಾಂತ ದಳವಾಯಿ, ಎಸ್ ಕೆ ಹೊಳೆಪ್ಪನವರ, ಬಿ ಎಸ್ ಪಾಟೀಲ, ಸಂಜಯ ಕಾಳೆ, ವಿನಾಯಕ ಮಠಪತಿ, ಮಹಾದೇವ ಮಡಿವಾಳ , ಡಾ ಆರ್ ಎಸ್ ದೊಡ್ಡನಿಂಗಪ್ಪಗೋಳ, ಸಂತೋಷ ಬಡಕಂಬಿ, ಶಂಕರಗೌಡ ಬಸನಗೌಡರ, ಶಶಿಧರ ಬರ್ಲಿ, ಶ್ರವಣಕುಮಾರ ಭಂಡಾರಿಮಠ, ಸಂಜಯ ರಾಯಮಾನೆ, ಮಂಜುನಾಥ ಬ್ಯಾಡಗಿ, ಪ್ರದೀಪ ಜಾಧವ, ಅಶೋಕ ಬಿರಾದಾರ ಅವರುಗಳು ಚಾಣಕ್ಯ ರತ್ನ ಪ್ರಶಸ್ತಿ ಸ್ವೀಕರಿಸಿದರು.

ಮುಕ್ತ ಲಿಖಿತ ಪರೀಕ್ಷೆ ಸ್ಪರ್ಧೆಯಲ್ಲಿ ಪ್ರಿಯಾ ಪಾಟೀಲ ಅವರು ಪ್ರಥಮ ಬಹುಮಾನ ಪಡೆದು ನಲವತ್ತು ಸಾವಿರ ನಗದು ಪುರಸ್ಕಾರ ಪಡೆದರು. ಈ ವೇಳೆ ನೂರಾರು ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.


ಸುದ್ದಿ ಓದಿ