ಕೊಪ್ಪಳ

ದಲಿತರ ಭೂಮಿ ಹಕ್ಕು, ಅಭಿವೃದ್ಧಿ ಕಾಮಗಾರಿಗಳಲ್ಲಿನ ತಾರತಮ್ಯ ಸರಿಪಡಿಸಲು ಆಗ್ರಹ

ದಲಿತರ ಭೂಮಿ ಹಕ್ಕು, ಅಭಿವೃದ್ಧಿ ಕಾಮಗಾರಿಗಳಲ್ಲಿನ ತಾರತಮ್ಯ ಸರಿಪಡಿಸಲು ಆಗ್ರಹ


ಕೊಪ್ಪಳ, ಅ.01: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ದಲಿತ ಸಮುದಾಯದವರು ಎದುರಿಸುತ್ತಿರುವ ಜಮೀನು ಹಕ್ಕುಗಳ ಸಮಸ್ಯೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿನ ತಾರತಮ್ಯವನ್ನು ಸರಿಪಡಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಘಟಕ ಆಗ್ರಹಿಸಿದೆ.  

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಜಿಲ್ಲಾ ಅಧ್ಯಕ್ಷ ಪ್ರಕಾಶ್ ಹೊಳೆಯಪ್ಪನವರ್, ಸಂಬಂಧಪಟ್ಟ ಆಡಳಿತಾಧಿಕಾರಿಗಳು ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.  

ಸರ್ಕಾರಿ ಜಮೀನು ಹಂಚಿಕೆ ಪರೀಶೀಲನೆಗೆ ಆಗ್ರಹ  

1956ರಿಂದ 2026ರವರೆಗೆ ಸರ್ಕಾರಿ ಜಮೀನು ಹಂಚಿಕೆಯಾಗಿರುವ ಕುರಿತು ಸಮಗ್ರ ಪರೀಶೀಲನೆ ನಡೆಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ಜನರಿಗೆ ಹಂಚಿಕೆಯಾಗಿರುವ ಜಮೀನುಗಳ ಪ್ರಸ್ತುತ ಸ್ಥಿತಿ ಹಾಗೂ ಫಲಾನುಭವಿಗಳ ಹಕ್ಕುಗಳನ್ನು ಪರೀಶೀಲಿಸಬೇಕು ಎಂದು ಒತ್ತಾಯಿಸಿದರು.  

ತಾಲ್ಲೂಕು ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಈ ಹಿಂದೆ ಮಂಜೂರಾದ ಭೂಮಿಯ ಹಕ್ಕುಗಳನ್ನು ಶೀಘ್ರವಾಗಿ ಬಗೆಹರಿಸಬೇಕು.

ಹಲವು ವರ್ಷಗಳಿಂದ ನೆಲೆಸಿರುವ ನಿವಾಸಿಗಳಿಗೆ ಇದುವರೆಗೆ ಹಕ್ಕುಪತ್ರ ದೊರೆತಿಲ್ಲ. ನಿವೇಶನ ರಹಿತರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.  

ಪ್ರಸ್ತುತ ಜಾರಿಯಲ್ಲಿರುವ ವಸತಿ ಯೋಜನೆಗಳಲ್ಲಿ ಅರ್ಹ ಬಡವರಿಗೆ ಸಮರ​‍್ಕವಾಗಿ ಮನೆಗಳನ್ನು ಹಂಚಿಕೆ ಮಾಡದೆ ಕಡೆಗಣಿಸಲಾಗುತ್ತಿದೆ. ಸುಮಾರು 1,500 ಎಕರೆಗೂ ಅಧಿಕ ಭೂಮಿ ಅಕ್ರಮವಾಗಿ ಇತರರ ಪಾಲಾಗುತ್ತಿರುವ ಆರೋಪಗಳ ಕುರಿತು ತನಿಖೆ ನಡೆಸಿ, ನಕಲಿ ದಾಖಲೆಗಳ ಮೂಲಕ ಭೂಮಿ ಕಬಳಿಸುವುದನ್ನು ತಡೆಯಬೇಕು ಎಂದು ಪ್ರಕಾಶ್ ಹೊಳೆಯಪ್ಪನವರ್ ಒತ್ತಾಯಿಸಿದರು.  


ಸುದ್ದಿ ಓದಿ