ಜಮಖಂಡಿ

ನೀರು ಪೂರೈಕೆಗೆ ಹಣದ ಬೇಡಿಕೆ: ವಾಲ್‌ಮನ್ ಬದಲಾವಣೆಗೆ ಮನವಿ

ನೀರು ಪೂರೈಕೆಗೆ ಹಣದ ಬೇಡಿಕೆ: ವಾಲ್‌ಮನ್ ಬದಲಾವಣೆಗೆ ಮನವಿ

ಜಮಖಂಡಿ 17: ನಗರದ ವಾರ್ಡ ನಂ.29 ಮಹಾಲಿಂಗೇಶ್ವರ ಕಾಲೋನಿಯಲ್ಲಿ ಕಳೆದ 20 ದಿನಗಳಿಂದ ಕುಡಿವ ನೀರು ಪೂರೈಕೆಯಾಗುತ್ತಿಲ್ಲ. ನೀರು ಬಿಡುವ ವಾಲ್‌ಮ್ಯಾನ  ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲವೆಂದು ವಾರ್ಡ ಸದಸ್ಯೆ ಮಾನೆ ಮತ್ತು ಕಾಲೊನಿ ನಾಗರೀಕರು ಸೇರಿ ಪೌರಾಯುಕ್ತೆ ಲಕ್ಷ್ಮಿ ಅಷ್ಟಗಿ ಅವರಿಗೆ ಮನವಿ ಸಲ್ಲಿಸಿದರು. 

ನೀರು ಬೇಕಾದರೆ ಹಣ ನೀಡಿ, ಇಲ್ಲದಿದ್ದರೆ ನೀರು ಬಿಡುವುದಿಲ್ಲ. ಒಂದು ವೇಳೆ ನೀರು ಬಿಟ್ಟರು ಕೇವಲ 30-40 ನಿಮಿಷ ಮಾತ್ರ ನೀರು ಬಿಡುತ್ತಿದ್ದು, ನಂತರ ನೀರಿನ ವಾಲ್ ಬಂದ ಮಾಡಲಾಗುತ್ತಿದೆ. ದುಡ್ಡು ಕೊಟ್ಟರೆ ಮಾತ್ರ ಎಲ್ಲಿ ಬೇಕಾದರು ನೀರು ಬಿಡುತ್ತಿದ್ದು, ಇಂತಹ ವಾಲ್‌ಮನ್ ಅವರನ್ನು ಕೂಡಲೇ ಬದಲಿಸಿ ಬೇರೆಯವರನ್ನು ನೇಮಕ ಮಾಡಿಕೊಳ್ಳಲು ಮನವಿ ಮಾಡಿಕೊಂಡರು. 

ಈ ವೇಳೆ ಸಂತೋಷ ಮಾನೆ, ಸಂತೋಷ ಆಳಗಿ, ರಾಜಶೇಖರ ಐಹೋಳ್ಳಿ, ಜೋತಿ  ಶಿಂಧೆ, ಸುರೇಶ ಕಾಂಬಳೆ, ವೈಶಾಲಿ ಆಲಬಾಳ, ವಿಜೇತ ಆಲಬಾಳ, ಸುಂಚಿತಾ ಕುಂದ್ರಾಳ, ಲಕ್ಷ್ಮಿ ಹಾವೇರಿ, ಬೀಬೀಜಾನ ನಧಾಫ ಅನೇಕರಿದ್ದರು. 


ಸುದ್ದಿ ಓದಿ