ಜಮಖಂಡಿ

ಪುನರ್ವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯ ಈಡೇರಿಕೆಗೆ ಆಗ್ರಹ

ಪುನರ್ವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯ ಈಡೇರಿಕೆಗೆ ಆಗ್ರಹ

ಲೋಕದರ್ಶನ ವರದಿ,

ಜಮಖಂಡಿ : ಜಮಖಂಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ 18ಕ್ಕೂ ಹೆಚ್ಚು ಕೃಷ್ಣಾ ನದಿಯಿಂದ ಮುಳಗಡೆ ಹೊಂದಿರುವ ಪ್ರದೇಶಗಳ ಪುನರ್ವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದೆ. ಅಲ್ಲಿನ ನಿವಾಸಿಗಳ ಸಮಸ್ಯೆಯನ್ನು ಬೇಗನೆ ಈಡೇರಿಸಬೇಕೆಂದು ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು. 

ನಗರದ ಶಾಸಕರ ನಿವಾಸದಲ್ಲಿ ನಡೆದ ಪುನರ್ವಸತಿ ಕೇಂದ್ರಗಳ ಜನತೆಯ ಸಮಸ್ಯೆಗಳ ಬಗ್ಗೆ ಗ್ರಾ,ಪಂ, ಪಿಡಿಒ ಹಾಗೂ ಪುನರ್ವಸತಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

 ನಮ್ಮ ಕ್ಷೇತ್ರದಲ್ಲಿ ಮುಳಗಡೆ ಹೊಂದಿದ ಗ್ರಾಮಗಳಲ್ಲಿ ಪಿಡಿಒಗಳು ಮತ್ತು ಪು,ಕೇ ಅಧಿಕಾರಿಗಳು ಜಂಟಿಯಾಗಿ ಅಲ್ಲಿನ ರಸ್ತೆಗಳು, ಸಮುದಾಯ ಭವನಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗವಾಡಿ ಕೇಂದ್ರಗಳು, ಬಸ್ ತಂಗುದಾನಗಳು, ಸರಕಾರಿ ಕಚೇರಿಗಳು, ರಸ್ತೆ ಬದಿಯ ಚರಂಡಿಗಳು, ಶೌಚಾಲಯಗಳು ಸೇರಿದಂತೆ ಅನೇಕ ಕಾಮಗಾರಿಗಳ ಅಭಿವೃದ್ದಿಯನ್ನು ಮಾಡಬೇಕು ಎಂದರು.

ಸರಕಾರದಿಂದ ಸಾಕಷ್ಟು ಅನುದಾನವನ್ನು ತರಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿ. ಮುಳಗಡೆ ಪ್ರದೇಶಗಳನ್ನು ಅಭಿವೃದ್ಧಿ ಮಾಡುತ್ತೇನೆ. ಸರಿಯಾದ ಸಮಯಕ್ಕೆ ಮಳೆ ಬಾರದ ಹಿನ್ನಲೆಯಲ್ಲಿ ಜನ, ಜಾನುವಾರಗಳಿಗೆ ಕುಡಿಯಲು ನೀರಿನ ಅಭಾವ ಬಂದಿದೆ. ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತಗೊಂಡಿವೆ. ಹೀಗಾಗಿ ಸಾಕಷ್ಟು ಸಮಸ್ಯೆಗಳನ್ನು ಎದುಸಬೇಕಾಗುತ್ತದೆ. ಅದಕ್ಕಾಗಿ ಮುಳಗಡೆ ಕೇಂದ್ರಗಳ ಸಮಸ್ಯೆಗಳ ಪಟ್ಟಿ ಮಾಡಿ. ಸಂಬಧಿಸಿದ ಸಚಿವರಿಗೆ ಮತ್ತು ಸಿಎಂ, ಹಾಗೂ ಅಧಿಕಾರಿಗಳಿಗೆ ಮನವಿ ನೀಡಿ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದರು.

ಮುತ್ತೂರ ಗ್ರಾಮದ ಮುಳಗಡೆ ಪುನರ್ವಸತಿ ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಇವೆ. ನಮ್ಮ ಗ್ರಾಮವನ್ನು ಕಡಪಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಗೆ ನೀಡಿದ್ದಾರೆ. ವಹಿಸಿದ್ದಾರೆ. ಗ್ರಾಮದ ಜನತೆ ಉತ್ತಾರೆಗಳು ಮತ್ತು ವಾರಸಾ ದಾಖಲಾತಿಗಳನ್ನು  ಕೇಳಲು ಹೋದರೆ 4 ರಿಂದ 5 ಸಾವಿರ ರೂಪಾಯಿಗಳ ಬೇಡಿಕೆಯನ್ನು ಕಡಪಟ್ಟಿ ಗ್ರಾಮ ಪಂಚಾಯತ ಅಧಿಕಾರಿಗಳು ಇಡುತ್ತಾರೆ. ಅದು ಸರಿಯಾದ ಸಮಯಕ್ಕೆ ದಾಖಲಾತಿಯನ್ನು ನೀಡದೆ ಸತಾಯಿಸುತ್ತಾರೆ. ಮುತ್ತೂರ ಗ್ರಾಮದ ಟ್ಯಾಕ್ಸ್ ತುಂಬಿಸಿಕೊಂಡು ಯಾವುದೇ ವ್ಯವಸ್ಥೆ ಮಾಡದೆ ಇದ್ದಾರೆ. ಕಡಪಟ್ಟಿ ಗ್ರಾಮ ಪಂಚಾಯತ ಪಿಡಿಒ ಅವರು ನಮ್ಮ ಸಮಸ್ಯೆಗಳ ಬಗ್ಗೆ ಆಲಿಸುತ್ತಿಲ್ಲ. ಹೀಗೆ ಆದರೆ ನಮ್ಮ ಪರಿಸ್ಥಿತಿ ಹೇಳುವುದು ಯಾರಿಗೆ ಎಂದು ಪ್ರಕಾಶ ಹಿಪ್ಪರಗಿ, ಬಸಲಿಂಗಪ್ಪ ಹಿಪ್ಪರಗಿ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು. ಪಿಡಿಒ  ಹಾಗೂ ಗ್ರಾಮಸ್ಥರ ಮಧ್ಯ ಕೆಲಕಾಲ ವಾಗ್ವಾದ ನಡೆಯಿತು.

ಶಾಸಕ ಜಗದೀಶ ಗುಡಗುಂಟಿ ಮಧ್ಯ ಪ್ರವೇಶಿಸಿ, ಗ್ರಾಮಸ್ಥರ ಸಮಸ್ಯೆ ಯಾವುದೇ ಇದ್ದರು  ಅದನ್ನು ಆಲಿಸುವ ಕೆಲಸ ಮಾಡಬೇಕು. ಮುಳಗಡೆ ಅಧಿಕಾರಿಗಳು ಯಾವುದೇ ಆರ್.ಸಿ.ಕೇಂದ್ರಗಳನ್ನು ಅಭಿವೃದ್ಧಿ ಪಡಿಸಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಡಕೋಳ ಗ್ರಾಮ ಪಂಚಾಯತ ಮುಳಗಡೆ ಕೇಂದ್ರ ನಿವಾಸಿಗಳು ನಮ್ಮನ್ನು ನಗರಸಭೆ ವ್ಯಾಪ್ತಿಗೆ ಒಳಪಡಿಸಿದ್ದಾರೆ. ಹೀಗಾಗಿ ನಮ್ಮ ಪು,ಕೇಂದ್ರಗಳಲ್ಲಿ ಯಾವುದೇ ಕೆಲಸಗಳು ಅಭಿವೃದ್ಧಿ ಹೊಮದಿಲ್ಲ. ನಗರಸಭೆಗೆ ಯಾವುದೇ ಕೆಲಸಕ್ಕೆ ಹೋದರೆ ಸಾವಿರಾರು ರೂ,ಗಳನ್ನು ಕೇಳುತ್ತಾರೆ. ಹೀಗಾದರೆ ನಮ್ಮ ಪರಿಸ್ಥಿತಿ ಭಿಕ್ಷೆ ಪಡುವ ಪರಿಸ್ಥಿತಿ ಬಂದಿದೆ. ಯಾರಿಗೆ ಹೇಳುವದು ಎಂದು ಮುಳಗಡೆ ಅಧಿಕಾರಿಗಳನ್ನು ಈಶ್ವರ ಆದೆಪ್ಪನ್ನವರ ತರಾಟೆಗೆ ತೆಗೆದುಕೊಂಡರು.

ನಮ್ಮ ಗ್ರಾಮ ಪಂಚಾಯತ ಬೇರೆ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡಿಸಬಾರದು. ಮತ್ತು ಕುಂಬಾರಹಳ್ಳ, ಕಡಕೋಳ ಗ್ರಾಮಗಳನ್ನು ನಗರಸಭೆ ವ್ಯಾಪ್ತಿ ವಹಿಸದೆ. ನಮ್ಮ ಗ್ರಾಮ ಪಂಚಾಯತಕ್ಕೆ ನೀಡಬೇಕು. ಅಂದರೆ ಮಾತ್ರ ನಮ್ಮ ಗ್ರಾಮದ ಮುಳಗಡೆ ಪ್ರದೇಶಗಳು ಅಭಿವೃದ್ದಿ ಹೊಂದುತ್ತವೆ.ಇಲ್ಲದೆ ಹೊದರೆ ಯಾವುದೇ ಅಭಿವೃದ್ದಿಗಳ ಆಗಲು ಸಾಧ್ಯವಿಲ್ಲ ಎಂದರು.


ಸುದ್ದಿ ಓದಿ