ಇಂಡಿ

ಶಾಮ್ ಪ್ರಸಾದ ಮುಖರ್ಜಿ ಪುಣ್ಯ ತಿಥಿ: ವನಮಹೋತ್ಸವ

ಶಾಮ್ ಪ್ರಸಾದ ಮುಖರ್ಜಿ  ಪುಣ್ಯ ತಿಥಿ: ವನಮಹೋತ್ಸವ
ಶಾಮ್‌ಪ್ರಸಾದ ಮುಖರ್ಜಿ ಅವರ ಪುಣ್ಯತಿಥಿ ಅಂಗವಾಗಿ ಪಟ್ಟಣದಲ್ಲಿ ಬಿಜೆಪಿ ಇಂಡಿ ಮಂಡಲ ವತಿಯಿಂದ ಬುಧವಾರ ಸಸಿ ನೆಡುವ ಕಾರ್ಯ

ಇಂಡಿ 24:   ಶಾಮ್ ಪ್ರಸಾದ ಮುಖರ್ಜಿ ಅವರ ಪುಣ್ಯ ತಿಥಿ ಅಂಗವಾಗಿ ತಾಲೂಕಿನಲ್ಲಿ 25 ಸಾವಿರ ಸಸಿಗಳನ್ನು ನೆಡುವ ಗುರಿ ಇಟ್ಟುಕೊಳ್ಳಲಾಗಿದೆ. ಇಂದು ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಎಂದರು. 

ಶಾಮ್‌ಪ್ರಸಾದ ಮುಖರ್ಜಿ ಅವರ ಪುಣ್ಯತಿಥಿ ಅಂಗವಾಗಿ ಪಟ್ಟಣದಲ್ಲಿ ಬಿಜೆಪಿ ಇಂಡಿ ಮಂಡಲ ವತಿಯಿಂದ ಬುಧವಾರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ರೈತಮೋರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ ಶಾಮ್‌ಪ್ರಸಾದ ಮುಖರ್ಜಿ ಅವರು ಭಾರತೀಯ ರಾಜಕಾರಣಿ, ನ್ಯಾಯವಾದಿ ಮತ್ತು ಶಿಕ್ಷಣ ತಜ್ಞರಾಗಿದ್ದರು. ಆವಾಹರಲಾಲ್ ನೆಹರೂರವರ ಸಚಿವ ಸಂಪುಟದಲ್ಲಿ ಕೈಗಾರಿಕೋಧ್ಯಮ ಮತ್ತು ಸರಬರಾಜು (ವಾಣಿಜ್ಯೋಧ್ಯಮ) ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಕಾಂಗ್ರೇಸ್ ಪಕ್ಷದವರಲ್ಲದಿದ್ದರೂ ಅವರ ಪ್ರತಿಭೆಯನ್ನು ಪರಿಣಿಸಿ ನೆಹರೂರವರು ಮಂತ್ರಿಮಂಡಲಕ್ಕೆ ಸೇರಿಸಿಕೊಂಡಿದ್ದರು. ಆ ನಂತರ ಮುಖರ್ಜಿ ಅವರು ನೆಹರೂರವರ ಮಂತ್ರಿ ಮಂಡಲದಿಂದ ಹೊರಬಂದು 1951ರಲ್ಲಿ ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ಮುಂದೆ ಅದು ಭಾರತೀಯ ಜನತಾ ಪಕ್ಷವಾಗಿ ಮುಂಚೂಣಿಯ ಬಲಪಂಥೀಯ ರಾಷ್ಟ್ರೀಯ ರಾಜಕೀಯ ಪಕ್ಷವಾಗಿ ಬೆಳೆಯಿತು ಎಂದು ಮುಖರ್ಜಿ ಅವರ ಕುರಿತು ವಿವರಿಸಿದ ಅವರು ಕೋವಿಡ್‌-19 ಮಹಾಮಾರಿ ಸಂದರ್ಭದಲ್ಲಿ ಆಕ್ಸಿಜನ್ ಇಲ್ಲದೆ ಸಾವಿರಾರು ಜನ ಸಾವನ್ನಪ್ಪಿದ್ದು ಗಿಡ-ಮರಗಳ ಬೆಲೆ ಆವಾಗ ಜನರಿಗೆ ಅರಿವಾಗಿದೆ. ಹೀಗಾಗಿ ಮುಖರ್ಜಿ ಅವರ ಪುಣ್ಯ ತಿಥಿಯಂದು ಬಿಜೆಪಿ ಇಂಡಿ ಮಂಡಲ ವತಿಯಿಂದ ಎಲ್ಲ ಭೂತ್‌ಗಳಲ್ಲ್ಮಿತ್ತು ಇಡೀ ತಾಲೂಕಿನಾದ್ಯಂತ 25 ಸಾವಿರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. 

ಬಿಜೆಪಿ ಎಸ್‌ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಅನೀಲ ಜಮಾದಾರ, ಶೀಲವಂತ ಉಮರಾಣಿ, ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಪುಟ್ಟಣಗೌಡ ಪಾಟೀಲ, ಪಿಂಟು ರಾಠೋಡ, ಯಲ್ಲಪ್ಪ ಹದರಿ, ರಮೇಶ ಧರೇನವರ, ಸೋಮು ನಿಂಬರಗಿಮಠ, ಬುದ್ದುಗೌಡ ಪಾಟೀಲ, ಶ್ರೀಮಂತ ಮೊಗಲಾಯಿ, ವಿಜಯಲಕ್ಷ್ಮೀ ರೂಗಿಮಠ, ಸುನಂದಾ ಗಿರಣಿವಡ್ಡರ, ಅನಸೂಯಾ ಮದರಿ, ಶಿವಯೋಗಿ ರೂಗಿಮಠ, ಕಿಸಾನ ರಾಠೋಡ, ವಿಜು ರಾಠೋಡ, ಸಚಿನ್ ಬೋಳೆಗಾಂವ್ ಮಲ್ಲು ವಾಲಿಕಾರ, ಶ್ರೀನಿವಾಸ ಕಂದಗಲ್ ಸೇರಿದಂತೆ ಮತ್ತಿತರರು ಇದ್ದರು. 

ಸುದ್ದಿ ಓದಿ