ರಾಣೆಬೆನ್ನೂರ

ದಾದಾಪೀರ್ ಸೇತ ಸನದಿ ಕಾಣೆ

ದಾದಾಪೀರ್ ಸೇತ ಸನದಿ ಕಾಣೆ

ರಾಣೇಬೆನ್ನೂರು 08: ಸೈಕಲ್ ಗಾರ ಓಣಿಯ ನಿವಾಸಿ, ದಾದಾಪೀರ್   ಮಕ್ಬುಲ್ ಸಾಬ್. ಸೇತ್ ಸನದಿ (49) ಎಂಬಾತನು ಕಾಣೆಯಾಗಿರುವ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಮಾ.23 ರಂದು ಕಾಣೆಯಾಗಿರುವ ಕುರಿತು ಆತನ ಸಹೋದರ  ಹಜರತಲಿ ಮಕ್ಬುಲ್ ಸಾಬ್ ಶೇತಸನದಿ ಎಂಬಾತನು ಠಾಣೇಗೆ ಹಾಜರಾಗಿ ದಾದಾಪೀರ್ ಈತನು ಕಳೆದ 9-1-2023 ರಂದು ಟೈಲರಿಂಗ್ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಇದುವರೆಗೂ ಮರಳಿ ಬಂದಿರುವುದಿಲ್ಲ ಎಂದು ದೂರು ದಾಖಲಿಸಿದ್ದಾರೆ.  ದೂರು ದಾಖಲಿಸಿಕೊಂಡಿರುವ ನಗರ ಠಾಣಾ ಪೊಲೀಸರು ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ. ಈತನು ಎಲ್ಲಿಯಾದರೂ ಕಂಡುಬಂದಲ್ಲಿ ಕೂಡಲೇ ರಾಣೇಬೆನ್ನೂರು ಶಹರ ಠಾಣೆಗೆ ಮಾಹಿತಿ ನೀಡುವಂತೆ ಠಾಣಾ ಪೊಲೀಸರು, ಪ್ರಕಟಣೆಯಲ್ಲಿ ಕೋರಿದ್ದಾರೆ.ಮೋ.9480804550 ಅಥವಾ-9480804532  ಸಂಪರ್ಕಿಬಹುದು.

ಸುದ್ದಿ ಓದಿ