ವಕೀಲರ ಸಂಘದ ಅಧ್ಯಕ್ಷರಾಗಿ ಡಿ. ಎಂ. ಜತ್ತಿ ಆಯ್ಕೆ

ಜಮಖಂಡಿ 01: ನಗರದ ವಕೀಲರ ಸಂಘದ 2024-26ರ ವರೆಗಿನ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಡಿ,ಎಂ,ಜತ್ತಿ ಆಯ್ಕೆಯಾಗಿದ್ದಾರೆ. 

ಒಟ್ಟು 296 ಮತಗಳಲ್ಲಿ 285 ಮತದಾನವಾಗಿದ್ದು, ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿದ ಡಿ,ಎಂ, ಜತ್ತಿಯವರಿಗೆ 166   ಬಿದ್ದಿದ್ದು. ಅವರ ವಿರುದ್ಧ ಸ್ಪರ್ಧಿಸಿದ್ದ ಎಸ್, ಆರ್, ಕಾಡಗಿಯವರಿಗೆ 118 ಮತಗಳು ಬಿದ್ದಿದ್ದು, ಒಂದು ಮತ ಅಸಿಂಧುವಾಗಿದ್ದು,  ಡಿ,ಎಂ,ಜತ್ತಿಯವರು 48 ಮತಗಳಿಂದ ಚುಣಾಯಿತರಾಗಿದ್ದಾರೆ. 

ಉಪಾಧ್ಯಕ್ಷರಾಗಿ ಎಸ್,ಬಿ, ಕಾಳೆ, ಪ್ರಧಾನ ಕಾರ್ಯದರ್ಶಿಯಾಗಿ ಶಿವಾನಂದ ಪಾರಶೆಟ್ಟಿ, ಸಹಕಾರ್ಯದರ್ಶಿಯಾಗಿ   ಬಿ,ಎಸ್,ತೇಲಿ, ಸದಸ್ಯರಾಗಿ ಜಗದೀಶ ಕೌಜಲಗಿ, ವಿ,ಎಸ್,ಕೂಡಗಿ, ಅಕ್ಷಯ ಬಾಡಗಿ, ಎಸ್,ಬಿ,ಬೋಸ್ಲೆ, ಎಸ್, ಆರ್,ಸೊರಗಾಂವಿ, ಸಿದ್ದು ಕುರಣಿ, ಲಕ್ಷ್ಮಿ ಸವದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  

ಸಂಭ್ರಮಾಚರಣೆಯಲ್ಲಿ ಆರ್‌. ಕೆ.ಪಾಟೀಲ್, ಸಂತೋಷ ಅಂಬಲಿ, ಮಲ್ಲು ನಂದಾ, ಕಿರಣ ಕುಳ್ಳಿ, ಎನ್‌.ಎ.ಪಾಟೀಲ್,  ಸೇರಿದಂತೆ ಇತರರು ಇದ್ದರು.