ಸೈಬರ್ ಭದ್ರತಾ ಸಮಸ್ಯೆಗಳು : ಸವಾಲುಗಳು ಮತ್ತು ಪರಿಹಾರಗಳು ಕುರಿತು ಉಪನ್ಯಾಸ
ಲೋಕದರ್ಶನ ವರದಿ
ಸೈಬರ್ ಭದ್ರತಾ ಸಮಸ್ಯೆಗಳು : ಸವಾಲುಗಳು ಮತ್ತು ಪರಿಹಾರಗಳು ಕುರಿತು ಉಪನ್ಯಾಸ
ಧಾರವಾಡ 27: ಕರ್ನಾಟಕ ವಿದ್ಯಾವರ್ಧಕ ಸಂಘವು ದಿನಾಂಕ: 28ರಂದು ಸಂಜೆ 6 ಗಂಟೆಗೆ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ದಿ.ಪ್ರೊ.ಎಂ.ಆಯ್. ಸವದತ್ತಿ ದತ್ತಿ ಅಂಗವಾಗಿ ಸೈಬರ್ ಭದ್ರತಾ ಸಮಸ್ಯೆಗಳು : ಸವಾಲುಗಳು ಮತ್ತು ಪರಿಹಾರಗಳು ವಿಷಯ ಕುರಿತುಉಪನ್ಯಾಸ ಮತ್ತುರಾಷ್ಟ್ರೀಯ ವಿಜ್ಞಾನ ದಿನಾಚರಣೆಕಾರ್ಯಕ್ರಮ ಆಯೋಜಿಸಿದೆ.
ಅತಿಥಿಉಪನ್ಯಾಸಕರಾಗಿಡಾ.ಉದಯ ಶಂಕರ ಪುರಾಣಿಕ, ನಿರ್ದೇಶಕರು, ಎ.ಐ ಮತ್ತು ಸೈಬರ್ ಸೆಕ್ಯುರಿಟಿಥೀಟಾ, ಡೈನಾಮಿಕ್ಸ್ (ಎಂಜಿಐ) ಯು.ಎಸ್.ಎಅವರುಆಗಮಿಸುವರು.
ಅಧ್ಯಕ್ಷತೆಯನ್ನುಪ್ರೊ. ಬಿ. ಜಿ. ಮೂಲಿಮನಿ, ವಿಶ್ರಾಂತ ಉಪಕುಲಪತಿಗಳು, ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಮತ್ತು ಬಿಎಲ್‌ಡಿಇ ವಿಶ್ವವಿದ್ಯಾಲಯ, ವಿಜಯಪುರಅವರುಆಗಮಿಸುವರು.
ಡಾ. ಮಲ್ಲಿಕಾರ್ಜುನ ವ್ಹಿ. ಅಳಗವಾಡಿ, ವಿಶ್ರಾಂತ ಪ್ರಾಧ್ಯಾಪಕರು, ಕರ್ನಾಟಕಕೇಂದ್ರಿಯ ವಿಶ್ವವಿದ್ಯಾಲಯ, ಕಲಬುರಗಿ ಹಾಗೂ ಡಾ.ಪುಷ್ಪಾ ಎಂ.ಸವದತ್ತಿ, ಹಿರಿಯ ಪ್ರಾಧ್ಯಾಪಕರು, ಕೇಂದ್ರೀಯ ವಿಶ್ವವಿದ್ಯಾಲಯ, ಗುಲ್ಬರ್ಗಾಅವರು ಉಪಸ್ಥಿತರಿರುವರು.
ಸಾಹಿತಿಗಳು, ಚಿಂತಕರು, ಕಲಾವಿದರು, ತಾಯಂದಿರು, ವಿದ್ಯಾರ್ಥಿಗಳು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.