ಜಮಖಂಡಿ

ಜನವಾಡ ಗ್ರಾಮದಲ್ಲಿ ಮೊಸಳೆ ಪ್ರತ್ಯಕ್ಷ

ಜನವಾಡ ಗ್ರಾಮದಲ್ಲಿ ಮೊಸಳೆ ಪ್ರತ್ಯಕ್ಷ

ಲೋಕದರ್ಶನ ವರದಿ

ಜಮಖಂಡಿ : 12: ತಾಲೂಕಿನ ಜನವಾಡ ಗ್ರಾಮದಲ್ಲಿ ಮೊಸಳೆ ಪ್ರತ್ಯೇಕವಾಗಿರುವ ಘಟನೆ ನಡೆದಿದೆ.

ನದಿಯಲ್ಲಿ ನೀರಿನ ಅಭಾವ ಸೃಷ್ಟಿಯಾದ ಬೆನ್ನಲ್ಲೆ ಮೊಸಳೆಗಳು ನದಿಯಿಂದ ಹೊರ ಬರಲು ಶುರು ಮಾಡಿವೆ. 

ಜಿಲ್ಲೆಯಲ್ಲಿನ ಕೃಷ್ಣಾ ಹಾಗೂ ಘಟಪ್ರಭಾ ನದಿ ತೀರದಲ್ಲಿ ಇತ್ತೀಚೆಗೆ ಮೊಸಳೆಗಳ ಹಾವಳಿ ಅಧಿಕವಾಗಿದೆ. ತಾಲ್ಲೂಕಿನ ಜನವಾಡ ಗ್ರಾಮದಲ್ಲಿ ಮೊಸಳೆಯೊಂದು ಆಹಾರ ಅರಿಸಿ ಜಮೀನಿಗೆ ನುಗ್ಗಿತ್ತು. ಮೊಸಳೆ ಕಂಡ ರೈತರು ಅದಕ್ಕ ಸೆರೆ ಹಿಡಿದು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. 

ಜನವಾಡ ಗ್ರಾಮದ ಪುಂಡಲೀಕ ಎನ್ನುವರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷವಾದಾಗ ಪುಂಡಲೀಕ ಅವರು ಮೊಸಳೆ ಸುದ್ದಿಯನ್ನು ಊರಿನವರಿಗೆ ತಿಳಿಸಿದ್ದಾರೆ. ಬಳಿಕ ಊರಿನವರೇ ಕೂಡಿಕೊಂಡು ಮೊಸಳೆ ಸೆರೆ ಹಿಡಿದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸೆರೆ ಸಿಕ್ಕ ಮೊಸಳೆಯನ್ನು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಹೋಗಿ ಸುರಕ್ಷಿತವಾಗಿ ಬಿಟ್ಟು ಬರಲಾಗಿದೆಂದು ತಿಳಿಸಿದ್ದಾರೆ.



ಸುದ್ದಿ ಓದಿ