ಗೋಕಾಕ್

ಮುಗಳಖೋಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸರಕಾರಿ ಆಸ್ಪತ್ರೆ) ಕೊವಿಡ್ ಕೇಂದ್ರ ಪ್ರಾರಂಭ

ಮುಗಳಖೋಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸರಕಾರಿ ಆಸ್ಪತ್ರೆ) ಕೊವಿಡ್ ಕೇಂದ್ರ ಪ್ರಾರಂಭ

ಮುಗಳಖೋಡ 11 : ಪಟ್ಟಣದ ಮುಗಳಖೋಡ-ಹಳ್ಳೂರ ರಸ್ತೆಗೆ ಹೊಂದಿಕೊಂಡಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕೇಂದ್ರವು ಇನ್ನೇರಡು ದಿನಗಳಲ್ಲಿ ಪ್ರಾರಂಭವಾಗುವುದೆಂದು ರಾಯಬಾಗ ತಹಶೀಲ್ದಾರಾದ ಮೋಹನ ಭಸ್ಮಿ ಅವರು ಭರವಸೆ ನೀಡಿದ್ದಾರೆಂದು ಪಟ್ಟಣದ ಹಿರಿಯರು ಹಾಗೂ ಜಿ.ಪಂ ಮಾಜಿ ಸದಸ್ಯರಾದ ಡಾ.ಸಿ.ಬಿ.ಕುಲಿಗೋಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮುಗಳಖೋಡವು ಒಂದು ದೊಡ್ಡ ಪಟ್ಟಣವಾಗಿದ್ದು, ಪುರಸಭೆಯನ್ನು ಹೊಂದಿದೆ. ಇಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ಸುತ್ತಮುತ್ತಲಿನ ಗ್ರಾಮದ ಜನತೆ ವ್ಯಾಪಾರ ವಹಿವಾಟಕ್ಕಾಗಿ ಆಗಮಿಸುತ್ತಿದ್ದು ಜನದಟ್ಟನೆಯ ಪ್ರದೇಶವಾಗಿದೆ. ಇಂದು ಮಹಾಮಾರಿ ಕೊರೊನಾ ಎಲ್ಲೇಡೆ ಹಬ್ಬುತ್ತಿರುವುದರಿಂದ ಜನರು ಬದುಕು ಚಿಂತಾಜನಕವಾಗಿದ್ದು, ಕೊವಿಡ್ ರೋಗಿಗಳನ್ನು ಬೇರೆಯೇಡೆಗೆ ಸಾಗಿಸಬೇಕಾದ ಸಂದರ್ಭದಲ್ಲಿ ರೋಗಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹಾಗಾಗಿ ಬಹುದಿನಗಳಿಂದ ಸರಕಾರಿ ಆಸ್ಪತ್ರೆಯಲ್ಲಿ ಕೊವಿಡ್ ಕೇಂದ್ರವನ್ನು ಪ್ರಾರಂಭಿಸಬೇಕೆಂದು ಜನಪ್ರತಿನಿಗಳು, ಎಂಎಲ್ಸಿಯವರಾದ ವಿವೇಕರಾವಣ್ಣಾ ಪಾಟೀಲ ಹಾಗೂ ಮಾಜಿ ಜಿ.ಪಂ ಸದಸ್ಯ ಡಾ.ಸಿ.ಬಿ.ಕುಲಿಗೋಡ ನೇತೃತ್ವದಲ್ಲಿ ಪುರಸಭೆ ಅಧ್ಯಕ್ಷೆ ಅಜಂಲಿ ಸಂ ಕುಲಿಗೋಡ, ಉಪಾಧ್ಯಕ್ಷ ಮಯೂರ ಕುರಾಡೆ, ಪುರಸಭೆ ಎಲ್ಲ ಸದಸ್ಯರು, ಊರಿನ ಹಿರಿಯರು ಆರೋಗ್ಯ ಇಲಾಖೆಯ ಮೇಲಾಧಿಕಾರಿಗಳಿಗೆ ಒತ್ತಾಯಿಸುತ್ತಿದ್ದರು. ಅದರೊಂದಿಗೆ ತಹಶೀಲ್ದಾರ ಅವರಿಗೆ ಮನವಿ ಮಾಡಿದ್ದರು. ಇದರ ಫಲವಾಗಿ ಮನವಿಗೆ ಸ್ಪಂದಿಸಿದ ರಾಯಬಾಗ ತಹಶೀಲ್ದಾರರಾದ ಮೋಹನ ಭಸ್ಮಿ ಅವರು ಇನ್ನೇರಡು ದಿನಗಳಲ್ಲಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊವಿಡ್ ಕೇಂದ್ರವನ್ನು ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಇದರ ಸದುಪಯೋಗವನ್ನು ಪಟ್ಟಣದ ಜನತೆ ಮತ್ತು ಸುತ್ತಮುತ್ತಲಿನ ಗ್ರಾಮದ ಜನತೆ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಡಾ.ಸಿ.ಬಿ.ಕುಲಗೋಡ, ಪುರಸಭೆ ಉಪಾಧ್ಯಕ್ಷರಾದ ಮಯೂರ ಕುರಾಡೆ, ಸಂಜಯ ಕುಲಿಗೋಡ, ಪ್ರಕಾಶ ಆದಪ್ಪಗೋಳ, ಪಿ.ಎಂ.ಕುಲಿಗೋಡ, ಎಸ್.ಎ.ಯಡವನ್ನವರ, ರಮೇಶ ಯಡವನ್ನವರ, ಪುರಸಭೆ ಸದಸ್ಯರಾದ ರವಿ ಹುಲ್ಲೋಳ್ಳಿ, ಚಂದು ಗೌಲತ್ತಿನವರ, ಪ್ರತಾಪ ಶೇಗುಣಸಿ, ರಮೇಶ ಕಾಪಸಿ, ಕರೇಪ್ಪ ಮಂಟೂರ, ಕಪೀಲ ಕರಿಭೀಮಗೋಳ, ವಿಠ್ಠಲ ಯಡವನ್ನವರ, ನೇಮಣ್ಣಾ ಬಾಬನ್ನವರ, ಸದಾಶಿವ ಚೌಗಲಾ, ಹಣಮಂತ ಕಾಡಾಪೂರ, ಖಾಜಾಸಾಬ ಡಾಂಗೆ ಮುಂತಾದವರು ಇದ್ದರು.

ಬಹುದಿನಗಳಿಂದ ಸರಕಾರಿ ಆಸ್ಪತ್ರೆಯಲ್ಲಿ ಕೊವಿಡ್ ಕೇಂದ್ರವನ್ನು ಆರಂಭಿಸಬೇಕೆಂದು ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದೇವು ಈಗ ಆ ಸಮಯ ಒದಗಿಬಂದಿದೆ ಕೊವಿಡ್ ಕೇಂದ್ರವನ್ನು ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು. 

ಡಾ.ಸಿ.ಬಿ.ಕುಲಿಗೋಡ 

ಜಿ.ಪಂ ಮಾಜಿ ಸದಸ್ಯರು.

 

ಸುದ್ದಿ ಓದಿ