ಜೆಎಸ್ಎಸ್ ಪದವಿ ಮಹಾವಿದ್ಯಾಲಯದಲ್ಲಿ ಕೋವಿಡ್ ಬೂಸ್ಟರ್ ಡೋಸ್ ಲಸಿಕಾ ಅಭಿಯಾನ
ಗೋಕಾಕ 27: ಜೆಎಸ್ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಗೋಕಾಕ, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಎನ್ಸಿಸಿ ಮತ್ತು ರೆಡ್ ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಕೋವಿಡ್-19 ಬೂಸ್ಟರ್ ಡೋಸ್ ಲಸಿಕಾ ಅಭಿಯಾನವನ್ನು ಮಹಾವಿದ್ಯಾಲಯದ ಶಿಕ್ಷಕರುಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ದಿ. 27ರಂದು ಹಮ್ಮಿಕೊಳ್ಳಲಾಗಿತ್ತು.
ಅಭಿಯಾನಕ್ಕೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆಶಾಲತಾ ಎಸ್. ತೇರದಾಳ, ಉಪ-ಪ್ರಾಚಾರ್ಯ ಡಾ. ಆರ್. ಎಸ್. ಬಳಿಗಾರ, ಕಿಂಅ ಸಂಯೋಜಕ ಪ್ರೊ. ಆರ್. ಎಮ್. ಮಹೇಂದ್ರಕರ ಅವರು ಚಾಲನೆ ನೀಡಿದರು. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಎನ್. ಎಲ್. ತೇರದಾಳ(ಘಟಕ-1), ಪ್ರೊ. ಎಮ್. ವ್ಹಿ. ಗೊರಗುದ್ದಿ(ಘಟಕ-2), ಸ್ಕೌಟ್ಸ್ ಘಟಕದ ರೋವರ್ ಲೀಡರ್ ಡಾ. ವಿಜಯಕುಮಾರ ಪಾಟೀಲ ಮತ್ತು ಗೈಡ್ಸ್ ಘಟಕದ ರೇಂಜರ್ ಲೀಡರ್ ಡಾ. ವಿಜಯಲಕ್ಷ್ಮೀ ಪಲೋಟಿ, ಎನ್.ಸಿ.ಸಿ. ಎ.ಎನ್.ಓ. ಪ್ರೊ. ಟಿ. ಎಮ್. ಕನಕರಾಜ ಟಿ. ಎಮ್., ರೆಡ್ಕ್ರಾಸ್ ಕಾರ್ಯಕ್ರಮ ಅಧಿಕಾರಿ ಎ. ಕೆ. ಕಿಳ್ಳಿಕೇತ ಮತ್ತು ಪ್ರೊ. ಜೆ. ಸಿ. ಪೋಲಾಶಿ, ಮಹಾವಿದ್ಯಾಲಯದ ಶಿಕ್ಷಕರು ಮತ್ತು ವಿದ್ಯಾಥರ್ಿಗಳು ಅಭಿಯಾನದಲ್ಲಿ ಉಪಸ್ಥಿತರಿದ್ದು, ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆದುಕೊಂಡರು