ಜಮಖಂಡಿ

ಫೆ, 2 ರಂದು ಅರ್ಬನ್ ಬ್ಯಾಂಕ್ ಚುನಾವಣೆಯ ಮತ ಎಣಿಕೆ

ಫೆ, 2 ರಂದು ಅರ್ಬನ್ ಬ್ಯಾಂಕ್ ಚುನಾವಣೆಯ ಮತ ಎಣಿಕೆ

ಜಮಖಂಡಿ 1: ಇತ್ತೀಚಿಗೆ ನಡೆದ ಅರ್ಬನ್ ಬ್ಯಾಂಕ್ ಚುನಾವಣೆಯ ಮತ ಎಣಿಕೆ ಫೆ, 2 ರಂದು ಪಿ,ಬಿ, ಹೈಸ್ಕೂಲ್‌ನಲ್ಲಿ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುತ್ತೆಂದು  ಚುನಾವಣಾಧಿಕಾರಿ ತಹಶೀಲ್ದಾರ ಸದಾಶಿವ ಮಕ್ಕೋಜಿ ಹೇಳಿದರು.  

ನಗರದ ಅರ್ಬನ್ ಬ್ಯಾಂಕ ಸಭಾ ಭವನದಲ್ಲಿ ನಡೆದ ಮತ ಎಣಿಕೆ ಪ್ರಯುಕ್ತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮತ ಎಣಿಕೆಗಾಗಿ 26 ಕೊಠಡಿಯಲ್ಲಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದು ಪ್ರತಿಯೊಂದು ಕೊಠಡಿಗೂ 6 ಜನ ಎಣಿಕಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು. ಪಾರದರ್ಶಕವಾಗಿ ಮತ ಎಣಿಕೆ ಮಾಡುತ್ತೇವೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು 120 ಜನ ಪೋಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದರು. 

ಫೆ, 2ರಂದು ಬೆಳಿಗ್ಗೆ 7 ಕ್ಕೆ ಉಪ ಖಜಾನೆಯಲ್ಲಿ ಅಭ್ಯರ್ಥಿಗಳು ಮತ ಎಣಿಕೆ ಎಜಂಟರು ಇರಬೇಕು. ನಂತರ ಸಮಗ್ರ ರಕ್ಷಣೆಯಲ್ಲಿ ಮತ ಪೆಟ್ಟಿಗೆಗಳನ್ನು ಎಣಿಕಾ ಕೇಂದ್ರಕ್ಕೆ ತೆಗೆದುಕೊಂಡು ಹೋಗುತ್ತೇವೆ. ಅಲ್ಲಿ ಮೊದಲು ಪ,ಜಾ, ಪಪಂ, ಮಹಿಳೆ, ಹಿಂದುಳಿದ ವರ್ಗ ನಂತರ ಸಾಮಾನ್ಯ ವರ್ಗದ ಮತ ಎಣಿಕೆ ನಡೆಯುತ್ತದೆ. ಮತ ಎಣಿಕಾ ಕೇಂದ್ರದಲ್ಲಿ ಅಭ್ಯರ್ಥಿ ಹೊರತು ಪಡಪಸಿ ಇತರರಿಗೆ ಮೊಬೈಲ್ ಬಳಕೆ ಮತ್ತು ಚಿತ್ರೀಕರಣಕ್ಕೆ ಅವಕಾಶವಿರುವುದಿಲ್ಲ. ಸಂಶಯಾಸ್ಪದ ಮತ ಪತ್ರವಿದ್ದರೆ ಅದನ್ನು ಚುನಾವಣಾಧಿಕಾರಿಗಳು ಇತ್ಯರ್ಥಗೊಳಿಸುತ್ತಾರೆ. ಸಮಾನ್ಯವಾಗಿ ಮತ ಬಿದ್ದರೆ ಚೀಟಿ ಮೂಲಕ ವಿಜಯ ಅಭ್ಯರ್ಥಿಗಳನ್ನು  ಷೋಷಣೆ ಮಾಡುತ್ತೇವೆ ಎಂದರು.  

ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸ ಸಾರವಾಡ, ಸಿದಗಿರಿ ನ್ಯಾಮಗೌಡ, ಅರ್ಬನ್ ಬ್ಯಾಂಕ ಪ್ರಧಾನ ವ್ಯವಸ್ಥಾಪಕ ಸಂಗಪ್ಪಾ ತುಪ್ಪದ, ವ್ಯವಸ್ಥಾಪಕ ಸಂತೋಷ ಹಲ್ಯಾಳ, ಶಿಕ್ಷಕ ಮಾಳೇದ ಸೇರಿದಂತೆ ಅಭ್ಯರ್ಥಿಗಳು ಸಭೆಯಲ್ಲಿ ಇದ್ದರು. 


ಸುದ್ದಿ ಓದಿ