ವೆಚ್ಚ ವೀಕ್ಷಕ ಮನೀಷಕುಮಾರ್ ಚವ್ಡಾ ಪರಿಶೀಲನೆ

ವೆಚ್ಚ ವೀಕ್ಷಕ ಮನೀಷಕುಮಾರ್ ಚವ್ಡಾ ಪರಿಶೀಲನೆ

ಬಳ್ಳಾರಿ 22: ಮಾಧ್ಯಮ ಕಣ್ಗಾವಲು ಮತ್ತು ಪ್ರಮಾಣೀಕರ ಸಮಿತಿಗೆ ಚುನಾವಣಾ ಆಯೋಗದಿಂದ ವೆಚ್ಚ ವೀಕ್ಷಕರಾಗಿ (ಎಕ್ಸೆಪೆಂಡಿಚರ್ ಅಬ್ಸರ್ವರ್) ಆಗಮಿಸಿರುವ ಮನೀಷಕುಮಾರ ಚವ್ಡಾ ಅವರು ಸೋಮವಾರ ಭೇಟಿ ನೀಡಿ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಿದರು.

       ಇಡೀ ದೇಶದಾದ್ಯಂತ ಗಮನಸೆಳೆದಿರುವ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಅಂಶಗಳು ವ್ಯಕ್ತವಾಗುವ ಸಾಧ್ಯತೆಗಳಿದ್ದು, ಮಾಧ್ಯಮ ಕಣ್ಗಾವಲು ಸಮಿತಿ ತೀವ್ರ ನಿಗಾವಹಿಸಿ ಈ ರೀತಿ ಅಂಶಗಳು ಹಾಗೂ ಪೇಯ್ಡ್ ನ್ಯೂಸ್ ಮಾದರಿ ಸುದ್ದಿಗಳು ಕಂಡುಬಂದರೇ ತಕ್ಷಣವೇ ಸಂಬಂಧಿಸಿದ ಸಮಿತಿಯ ಗಮನಕ್ಕೆ ತರಬೇಕು ಎಂದು ಅವರು ಹೇಳಿದರು.

ಅಭ್ಯಥರ್ಿಗಳಿಗೆ ಚುನಾವಣೆಯಲ್ಲಿ ವೆಚ್ಚ ಮಾಡಲು 70ಲಕ್ಷ ರೂ.ಮೀತಿ ನಿಗದಿಪಡಿಸಿರುವುದರಿಂದ ಅಭ್ಯಥರ್ಿಗಳು ಪೇಯ್ಡ್ ನ್ಯೂಸ್ ರೂಪದಲ್ಲಿ ಮಾಧ್ಯಮಗಳಲ್ಲಿ ತಮ್ಮ ಪರ ಪ್ರಚುರಪಡಿಸಿಕೊಳ್ಳಲು ಯತ್ನಿಸುತ್ತಾರೆ.

  ಈ ಹಿನ್ನೆಲೆಯಲ್ಲಿ ಎಂಸಿಎಂಸಿ ಸಿಬ್ಬಂದಿ ಮಾಧ್ಯಮಗಳ ಮೇಲೆ ಹದ್ದಿನ ಕಣ್ಣೀಡಬೇಕು ಎಂದು ಹೇಳಿದ ಮನೀಶಕುಮಾರ್ ಅವರು, ಅಭ್ಯಥರ್ಿಗಳಿಗೆ ಜಾಹೀರಾತಿಗೆ ಹಾಗೂ ಕರಪತ್ರಗಳ ವಿತರಣೆಗೆ ಅನುಮತಿ ನೀಡುವ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿಯ ಅಂಶಗಳಿದ್ದರೇ ಮಾತ್ರ ಅನುಮತಿ ನೀಡಿ ಎಂದರು.

  ನಂತರ ಅವರು ದೂರು ನಿರ್ವಹಣಾ ಕೋಶಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

  ಈ ಸಂದರ್ಭದಲ್ಲಿ ಮಾಧ್ಯಮ ಕಣ್ಗಾವಲು ಮತ್ತು ಪ್ರಮಾಣೀಕರಣ ಸಮಿತಿ ನೋಡಲ್ ಅಧಿಕಾರಿ ಬಿ.ಕೆ.ರಾಮಲಿಂಗಪ್ಪ, ವೆಚ್ಚ ವೀಕ್ಷಕರ ಉಸ್ತುವಾರಿ ಅಧಿಕಾರಿ ದೇವರಾಜ್ ಹಾಗೂ ಎಂಸಿಎಂಸಿ ಸಿಬ್ಬಂದಿ ಇದ್ದರು.

ಸುದ್ದಿ ಓದಿ