ಸಹಕಾರಿ ಸಂಘಗಳ ಪ್ರಗತಿಗೆ ಸ್ಥಳೀಯರ ಸಹಕಾರ ಅಗತ್ಯ: ಶ್ರೀಗಳು
ಬೆಟಗೇರಿ 03: ಸಹಕಾರಿ ಸಂಘ, ಸಂಸ್ಥೆಗಳು ಗ್ರಾಮೀಣ ವಲಯದ ಜನರ ಜೀವನಾಡಿಯಾಗಿವೆ. ಮೂಡಲಗಿ ಸಮೃದ್ಧಿ ಅರ್ಬನ್ ಕ್ರೆಡಿಟ್ ಸೊಸೈಟಿ ಸಮೃದ್ಧವಾಗಿ ಅಭಿವೃದ್ಧಿ ಹೊಂದಲಿ ಎಂದು ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡದಲ್ಲಿ ಜು.3ರಂದು ನಡೆದ ಮೂಡಲಗಿ ಸಮೃದ್ಧಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ ದ್ವಿತೀಯ ಶಾಖೆಯ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸಹಕಾರಿ ಸಂಘಗಳು ಪ್ರಗತಿ ಸಾಧಿಸಬೇಕಾದರೆ ಸ್ಥಳೀಯರ ಸಹಾಯ, ಸಹಕಾರ ಅಗತ್ಯ ಎಂದರು.
ಮೂಡಲಗಿ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ ದತ್ತಾತ್ರೇಯಬೋಧ ಸಾಮೀಜಿ ದಿವ್ಯಸಾನಿಧ್ಯ, ಸುಣಧೋಳಿ ಜಡಿಸಿದ್ಧೇಶ್ವರಮಠದ ಅಭಿನವ ಶಿವಾನಂದ ಮಹಾಸ್ವಾಮೀಜಿ ಸಮಾರಂಭದ ಸಮ್ಮುಖ, ಮೂಡಲಗಿ ಸಮೃದ್ಧಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಪ್ರಧಾನ ಕಛೇರಿ ಆಡಳಿತ ಮಂಡಳಿ ಅಧ್ಯಕ್ಷ ಸೋಮಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಶಾಖೆಯ ಉದ್ಘಾಟನೆ ಸಮಾರಂಭ ಶ್ರೀಮಹಾಲಕ್ಷ್ಮಿ, ಶ್ರೀಮಹಾಸರಸ್ವತಿ ಪೂಜೆಯೊಂದಿಗೆ ನಡೆದ ಬಳಿಕ ಶ್ರೀಗಳು, ಗಣ್ಯರು, ಮುಖ್ಯ ಅತಿಥಿಗಳನ್ನು ಈ ವೇಳೆ ಸಮೃದ್ಧಿ ಅರ್ಬನ್ ಕ್ರೆಡಿಟ್ ಸೊಸೈಟಿ ವತಿಯಿಂದ ಸತ್ಕರಿಸಲಾಯಿತು.
ರಾಜಕೀಯ ಧುರೀಣ ಭೀಮಪ್ಪ ಗಡಾದ, ಬಿ.ಬಿ.ಹಂದಿಗುಂದ, ಬಸವಂತ ಕೋಣಿ, ಸೈದಪ್ಪ ಗದಾಡಿ, ಸ್ಥಳೀಯ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಈರಯ್ಯ ಹಿರೇಮಠ, ಲಕ್ಷ್ಮಣ ನೀಲಣ್ಣವರ, ಜಗದೀಶ ಗಾಣಗೇರ, ರಮೇಶ ಪಾಟೀಲ, ಅರ್ಜುನ ದೇಯಣ್ಣವರ, ಶಿವಬೋಧ ಹಿರೇಮಠ, ಮಹಾಂತೇಶ ಮಾಳೇದ, ವೀರಣ್ಣ ಗಣಾಚಾರಿ, ಎನ್.ಎ.ನೀಲಣ್ಣವರ, ಮೂಡಲಗಿ ಸಮೃದ್ಧಿ ಅರ್ಬನ್ ಕ್ರೆಡಿಟ್ ಸೊಸೈಟಿ ಪ್ರಧಾನ ಕಛೇರಿ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಬೆಟಗೇರಿ, ಕೌಜಲಗಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ, ಸದಸ್ಯರು, ಸಿಬ್ಬಂದಿ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ವಿವಿಧ ಸಂಘ, ಸಂಸ್ಥೆಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ಗಣ್ಯರು, ಸ್ಥಳೀಯರು, ಇತರರು ಇದ್ದರು.