ಬದುಕು ಕಾದಂಬರಿ ಕುರಿತು ಸಂವಾದ ಕಾರ್ಯಕ್ರಮ

ಬದುಕು ಕಾದಂಬರಿ ಕುರಿತು ಸಂವಾದ ಕಾರ್ಯಕ್ರಮ

ಬಳ್ಳಾರಿ 28: ಸಂವಾದ ಕಾರ್ಯಕ್ರಮದಲ್ಲಿ "ಬದುಕು ಕಾದಂಬರಿಯಲ್ಲಿ ಯಾಜಮಾನ್ಯ ಮತ್ತು ಪ್ರತಿರೋಧ" ಎಂಬ ವಿಷಯವನ್ನು ಪ್ರೀತಿ. ಎಸ್.ಕೆ ಸಂಶೋಧನಾಥರ್ಿ ವಿಷಯ ಮಂಡಿಸಿದರು. ಕನ್ನಡ ಸಾಹಿತ್ಯದ ಪ್ರಸಿದ್ಧ ಬರಹಗಾತರ್ಿಯಾದ ಡಾ.ಗೀತಾ ನಾಗಭೂಷಣ ಅವರು ತಮ್ಮ ಈ ಕಾದಂಬರಿಯಲ್ಲಿ ಕೆಳಸ್ತರದ ಸಮುದಾಯದ ಮೇಲಿನ ದೌರ್ಜನ್ಯ, ನಿರ್ಗತಿಕ ಹೆಂಗಸರ ಮೇಲೆ ನಡೆಯುತ್ತಿರುವ ಶೋಷಣೆ, ಮೂಢನಂಬಿಕೆ ಇವುಗಳ ವಿರುದ್ಧ ಧ್ವನಿ ಎತ್ತುತ್ತಾರೆ. ಇದರಲ್ಲಿ ಕೆಳವರ್ಗದ ರೀತಿ-ರಿವಾಜು, ಆಚಾರ-ವಿಚಾರ, ಬಡತನ, ನಿರುದ್ಯೋಗ, ಅನೈತಿಕತೆ, ಪ್ರೀತಿ-ಪ್ರೇಮ, ದೇವದಾಸಿಯರ ದಾರುಣ ಜೀವನದ ಕಥೆಯನ್ನು ಚಿತ್ರಿಸಲಾಗಿದೆ. ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿ ಒಂದಕ್ಕೊಂದು ಪೂರಕವಾಗಿವೆ. ಸಮಾಜವೊಂದರ ಚಿತ್ರಣ ಸಾಹಿತ್ಯದಲ್ಲಿ ಮೂಡುವಾಗ ಅಲ್ಲಿರುವ ಸಂಸ್ಕೃತಿಯು ಸಾಹಿತ್ಯದಲ್ಲಿ ಬಿಂಬಿತವಾಗುತ್ತದೆ. ಹಾಗೆಯೇ ಸಮಾಜದಲ್ಲಿರುವ ಅಧಿಕಾರದ ಶ್ರೇಣಿಕರಣಗಳು ಕೂಡ ಸಾಹಿತ್ಯದಲ್ಲಿ ವಣರ್ಿಸಲಾಗುತ್ತದೆ. ಅದರಂತೆಯೇ ಸಮಾಜ ಮತ್ತು ಸಮುದಾಯಗಳ ಬದುಕಿನಲ್ಲಿ ಹಾಸುಹೊಕ್ಕಾಗಿ ಬೆಸೆದುಕೊಂಡ ಹಲವು ಅಂಶಗಳಲ್ಲಿ ಯಾಜಮಾನ್ಯ ಪ್ರಕ್ರಿಯೆ ಒಂದಾಗಿದೆ. ಯಾಜಮಾನ್ಯವನ್ನು ಒಂದು ಪರಿಕಲ್ಪನೆಯಾಗಿ ವಿಸ್ತೃತ ಆಯಾಮಗಳಲ್ಲಿ ಚಚರ್ಿಸಿದ ಕೀತರ್ಿ ಇಟಲಿಯ ಮಾಕ್ರ್ಸವಾದಿ ತತ್ವಚಿಂತಕನಾದ ಆಂಟೊನಿಯೋ ಗ್ರಾಂಶಿ ಅವರಿಗೆ ಸಲ್ಲುತ್ತದೆ. ಅವರ ಪ್ರಕಾರ ಯಾಜಮಾನ್ಯ ಎನ್ನುವುದು "ಯಾವುದೇ ಒಂದು ವರ್ಗ ಮತ್ತು ಅದರ ಪ್ರತಿನಿಧಿಗಳು ದಬ್ಬಾಳಿಕೆ ಮತ್ತು ಒಪ್ಪಂದದ ಮೂಲಕ ಕೆಳವರ್ಗದ ಮೇಲೆ ಅಧಿಕಾರ ಸ್ಥಾಪಿಸುವುದಾಗಿದೆ." ಸಾಮಾನ್ಯವಾಗಿ ಅಧಿಕಾರ ಎನ್ನುವುದು ವಸ್ತು, ವ್ಯಕ್ತಿ ಅಥವಾ ಗುಂಪುಗಳಲ್ಲಿ ಪರಸ್ಪರ ಚಲಾಯಿತವಾಗುವ ಯಾವುದೇ ರೀತಿಯ ಪ್ರಭಾವವಾಗಿದೆ. ಕುಟುಂಬದಂತಹ ಅತಿ ಸಣ್ಣ ಘಟಕದಿಂದ ರಾಜಕೀಯದಂತಹ ದೊಡ್ಡ ಘಟಕದವರೆಗೆ ಯಾಜಮಾನ್ಯ ಪ್ರಕ್ರಿಯೆ ವಿಸ್ತರಿಸಿಕೊಂಡಿರುವುದನ್ನು ನಾವು ಕಾಣುತ್ತೇವೆ. ಅದೇ ರೀತಿಯಾಗಿ ಪ್ರಧಾನ ಮತ್ತು ಅಧೀನ ಸಮುದಾಯಗಳಲ್ಲಿ ಏರ್ಪಡುವ ಸಾಂಸ್ಕೃತಿಕ ತಿಕ್ಕಾಟಗಳು, ಅನುಭವಿಸುವ ಸಂವೇದನೆಗಳು, ಎದುರಿಸುವ ಸಮಸ್ಯೆಗಳು ಈ ಕಾದಂಬರಿಯಲ್ಲಿ ಅಭಿವ್ಯಕ್ತಗೊಂಡಿವೆ.         ಯಾಜಮಾನ್ಯದ ನೆಲೆಗಳು ಲಿಂಗಾಧಾರಿತ, ಕೌಟುಂಬಿಕ, ಸಾಮಾಜಿಕ, ಪೋಲಿಸ್ ವ್ಯವಸ್ಥೆ, ಜಾತಿ ವ್ಯವಸ್ಥೆ, ಧಾಮರ್ಿಕತೆ, ಪುರೋಹಿತಶಾಹಿ ವ್ಯವಸ್ಥೆಗಳಲ್ಲಿ ಕಂಡುಬರುತ್ತದೆ. ಸಮಾಜದಲ್ಲಿ ಪ್ರಧಾನವಾಗಿ ವರ್ಗ, ವರ್ಣ, ಲಿಂಗಾಧಾರಿತ ಶ್ರೇಣಿಕರಣಗಳು ಕಂಡುಬರುತ್ತದೆ. ಜಾತಿ, ವರ್ಗ, ವರ್ಣ ಮುಂತಾದವುಗಳಲ್ಲಿ ವ್ಯಕ್ತಗೊಳ್ಳುವ ಪ್ರಬಲವಾದ ಯಾಜಮಾನ್ಯಕ್ಕೆ ಪ್ರತಿರೋಧ ಇದ್ದೆ ಇರುತ್ತದೆ. ಅಂತಹ ಪ್ರತಿರೋಧವು ಮಾತಿನ ಮೂಲಕ, ನಡವಳಿಕೆಯ ಮೂಲಕ ಅಥವಾ ಬರಹದ ಮೂಲಕ ವ್ಯಕ್ತವಾಗುತ್ತದೆ. ಈ ಕಾದಂಬರಿಯ ಸಂದರ್ಭದಲ್ಲಿ ಕೌಟುಂಬಿಕ ಮತ್ತು ಸಾಮಾಜಿಕ ನೆಲೆಯ ಪ್ರತಿರೋಧವು ಕಾಶಮ್ಮ ಹಾಗೂ ತುಳಜಾ ಪಾತ್ರಗಳಲ್ಲಿ ಕಂಡುಬರುತ್ತದೆ. ಕುಟುಂಬದ ಒತ್ತಾಯಕ್ಕೆ ಮಣಿದು ಮಾತರ್ಾಂಡನೊಂದಿಗೆ ಮದುವೆಯಾದ ಕಾಶಮ್ಮ ತನ್ನ ಗಂಡನನ್ನು ಬಿಟ್ಟು ಮತ್ತೆ ತನ್ನ ಪ್ರೇಮಿ  ಲಿಂಗರಾಜನ ಜೊತೆ ಜೀವನ ಸಾಗಿಸುತ್ತಾಳೆ. ಆದರೆ  ಸಮಾಜದ ದೃಷ್ಟಿಯಲ್ಲಿ ಅದು ಅನೈತಿಕ ಸಂಬಂಧದ ಸ್ವರೂಪ ಪಡೆದುಕೊಳ್ಳುತ್ತದೆ. ಸಮಾಜ ವಿಜ್ಞಾನಗಳ ನಿಕಾಯದ ಮುಖ್ಯಸ್ಥರು ಡಾ. ಸ. ಚಿ. ರಮೇಶ ರವರು ಮಾತಾನಾಡಿ ಧಾಮರ್ಿಕ ಚೌಕಟ್ಟುಗಳು ದೇವದಾಸಿ ಪದ್ಧತಿ, ಬಸವಿ ಬಿಡುವ ಪದ್ಧತಿಗಳನ್ನು ಪೋಷಿಸುತ್ತಿರುವುದನ್ನು ಇಂದಿಗೂ ನಮ್ಮ ನೆರೆಹೊರೆಯಲ್ಲಿ ಕಾಣಬಹುದಾಗಿದೆ. ಇಂತಹ ಪದ್ಧತಿ ಸ್ತ್ರೀ ಪ್ರಸ್ತುತದಲ್ಲಿಯೂ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದಾಳೆ.      ಸಮಾಜದಲ್ಲಿ ಗಂಡು ಹೆಣ್ಣಿನ ನಡುವಿನ ಸೆಳೆತಗಳು ಧಾಮರ್ಿಕತೆಯಲ್ಲಿ ಬಿಂಬಿಸಿವೆ. ಕೌಟುಂಬಿಕ ಮಹಿಳೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ಕಾಣಲಾಗಿದೆ. ಗೀತಾನಾಗಭೂಷಣ ಅವರ ಕಾದಂಬರಿಗಳಲ್ಲಿ ಈ ರೀತಿಯ ಯಾಜಮಾನ್ಯಕ್ಕೆ ಸಂಬಂಧಿಸಿದ ವ್ಯವಸ್ಥೆಗಳಿಗೆ ಸ್ತ್ರೀಯು ಪ್ರತಿರೋಧವನ್ನು ಹೇಗೆ ವ್ಯಕ್ತಪಡಿಸುತ್ತಾಳೆ ಎಂಬುದನ್ನು ಕಟ್ಟಿಕೊಟ್ಟಿದ್ದಾರೆ. ಆಶಾವಾದಿ ಮತ್ತು ಸಮಾನತೆಗಳನ್ನು ಪಡೆದುಕೊಳ್ಳಬೇಕಾದರೆ ಸಮಾನ ಶಿಕ್ಷಣ ಅವಶ್ಯಕ ಎಂದು ಅಭಿಪ್ರಾಯಿಸಿದರು. ರಾಜೇಶ.ಎಸ್ ಪ್ರಾಥರ್ಿಸಿದರು, ತಿಪ್ಪೇಸ್ವಾಮಿ ಸ್ವಾಗತಿಸಿದರು, ಲಕ್ಷ್ಮಿಕಾಂತ ನಿರೂಪಣೆ ಮಾಡಿದರು. ಪ್ರೇಮಕುಮಾರಿ.ಆರ್. ಅವರು ವಂದಿಸಿದರು, ನಾಗೇಶ ಅವರು ಕಾರ್ಯಕ್ರಮದ ವರದಿಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಸಂಶೋಧಕರಾದ ರಾಮಚಂದ್ರ ಲಕ್ಕಳ್ಳಿ, ಆನಂದಕುಮಾರ, ಪಾರಿಜಾತ.ಎಸ್., ಬಸವರಾಜು.ಎಸ್. ಮಧು.ಬಿ.ಡಿ., ಧನಲಕ್ಷ್ಮಿ, ಹುಲಿಯಪ್ಪ, ನಾಗರಾಜು, ಪ್ರಹ್ಲಾದ ಹಾಗೂ ಇತರರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ದಿ ಓದಿ