ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಈಡೇರಿಕೆಗೆ ನಿರಂತರ ಧರಣಿ
ಹುಬ್ಬಳ್ಳಿ,25: ಪೌರಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಯುತ್ತಿರುವ ಅನಿರ್ಧಿಷ್ಠಾವಧಿ ಧರಣಿಗೆ ನ್ಯಾಯ ಒದಗಿಸಲು ಹು-ಧಾಮ ಪಾಲಿಕೆಯ ಮಹಾಪೌರರು ಮಧ್ಯ ಪ್ರವೇಶಿಸಬೇಕೆಂದು ಆಗ್ರಹ. ಹುಬ್ಬಳ್ಳಿಯಲ್ಲಿ ಕಳೆದ ಏಳು ದಿನಗಳಿಂದ ಪೌರಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಬೃಹತ್ ಪ್ರಮಾಣದಲ್ಲಿ ನಿರಂತರ ಧರಣಿ ಪ್ರತಿಭಟನೆ ನಡೆಸುತ್ತಿದ್ದಾರೆ.
ನಗರದಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯನ್ನು ಸಹ ಲೆಕ್ಕಿಸದೆ ಬೃಹತ್ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಹಿರಿಯ ವಯಸ್ಸಿನ ಪೌರಕಾರ್ಮಿಕರು ಧರಣಿಯಲ್ಲಿ ಪಾಲ್ಗೊಂಡ ಕಾರಣ, ಹಲವರು ಈಗಾಗಲೇ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇಷ್ಟೆಲ್ಲಾ ನಡೆದರೂ, ಇನ್ನೂವರೆಗೆ ಸರ್ಕಾರದ ಯಾವುದೇ ಪ್ರತಿನಿಧಿಗಳಾಗಲಿ ಅಥವಾ ಸಂಬಂಧಪಟ್ಟ ಮಹಾನಗರ ಪಾಲಿಕೆ ಆಯುಕ್ತರಾಗಲಿ ಅಥವಾ ಅಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಪೌರಕಾರ್ಮಿಕರ ಅಹವಾಲುಗಳನ್ನು ಆಲಿಸುವ ಗೋಜಿಗೆ ಹೋಗಿಲ್ಲ.ನಗರದ ನೈರ್ಮಲ್ಯ ಕಾಪಾಡುವ ಪೌರಕಾರ್ಮಿಕರ ಪ್ರತಿಯಾಗಿ ಮಹಾನಗರ ಪಾಲಿಕೆ ತೋರಿರುವ ಈ ನಿರ್ಲಕ್ಷ್ಯವನ್ನು ಮಾದಿಗ ದಂಡೋರ ಒಖಕಖ ಸಂಘಟನೆ ತೀವ್ರವಾಗಿ ಖಂಡಿಸಿದೆ. ಪೌರಕಾರ್ಮಿಕರ ಸಮಸ್ಯೆಗಳಿಗೆ ತಕ್ಷಣ ಸೂಕ್ತ ಸ್ಪಂದನೆ ನೀಡಬೇಕೆಂದು ಮಾದಿಗ ದಂಡೋರ ಒಖಕಖ ಮತ್ತು ಕರ್ನಾಟಕ ರಾಜ್ಯ ಪರಿಶಿಷ್ಟ ಕುಲಬಾಂಧವರ ಒಕ್ಕೂಟದ ಸದಸ್ಯರು ಸೇರಿ ಪೂಜ್ಯ ಮಾಹಾಪೌರರಾದ ರಾಮಣ್ಣ ಬಡಿಗೇರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಆಗ್ರಹಿಸಿದರು.ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷರಾದ ಮಂಜುನಾಥ ಕೊಂಡಪಲ್ಲಿ ಮಾತನಾಡುತ್ತ ಸರಕಾರದ ಆದೇಶದ ಅನ್ವಯ ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪೌರಕಾರ್ಮಿಕರ ಖಾಯಮಾತಿ ಮತ್ತು ನೆರವೇತನ ಜಾರಿಗೆ ಆಗಿದ್ದರೂ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮಾತ್ರ ಇದು ಇನ್ನೂವರೆಗೆ ಸಮರ್ಕವಾಗಿ ಅನುಷ್ಠಾನವಾಗಿಲ್ಲ, ಪೂಜ್ಯ ಮಹಾಪೌರರು ತಕ್ಷಣ ಮಧ್ಯ ಪ್ರವೇಶಿಸಿ ಪೌರಕಾರ್ಮಿಕ ಬಂಧುಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಧಾರವಾಡ ಜಿಲ್ಲಾಧ್ಯಕ್ಷರಾದ ಸತ್ಯನಾರಾಯಣ ಎಂ ಮತ್ತು ಜಿಲ್ಲಾ ಕಾರ್ಯಾಧ್ಯಕ್ಷರಾದ ಶ್ರೀ ಗೋವಿಂದ ಬೆಲ್ಡೋಣಿ, ಹಿರಿಯ ಮುಖಂಡರಾದಪರಶುರಾಮ ಮಲ್ಯಾಳ, ಅನಿಲ ಆತ್ಮಕೂರ್ ಮುಂತಾದ ಅನೇಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಧುರೀಣರಾದ ವೀರಣ್ಣ ಸವಡಿ, ಸಂತೋಷ ಚವಾಣ್ ಮತ್ತು ಧಾರವಾಡ ಜಿಲ್ಲಾಧ್ಯಕ್ಷರಾದ ಸತ್ಯನಾರಾಯಣ ಎಂ ಮತ್ತು ಜಿಲ್ಲಾ ಕಾರ್ಯಾಧ್ಯಕ್ಷರಾದ ಶ್ರೀ ಗೋವಿಂದ ಬೆಲ್ಡೋಣಿ, ಪೌರ ಕಾರ್ಮಿಕರ ಮುಖಂಡರಾದ ವಿಜಯ ಗುಂಟ್ರಾಲ್, ಹಿರಿಯ ಮುಖಂಡರಾದ ಶ್ರೀ ಪರಶುರಾಮ ಮಲ್ಯಾಳ, ಅನಿಲ ಆತ್ಮಕೂರ್ ಮುಂತಾದ ಅನೇಕರು ಪಾಲ್ಗೊಂಡಿದ್ದರು.