ಅಥಣಿ

ಮುಂದುವರೆದ ಸರಣಿ ಮನೆಗಳ್ಳತನ: ಕೈಚೆಲ್ಲಿ ಕುಳಿತ ಅಥಣಿ ಪೋಲಿಸರು

ಮುಂದುವರೆದ ಸರಣಿ ಮನೆಗಳ್ಳತನ: ಕೈಚೆಲ್ಲಿ ಕುಳಿತ ಅಥಣಿ ಪೋಲಿಸರು

ಅಥಣಿ 13: ಅಥಣಿ ತಾಲೂಕಿನ ತೇಲಸಂಗ ಗ್ರಾಮದಲ್ಲಿ ಕಳೆದ ರಾತ್ರಿ ಸರಣಿ ಮನೆಗಳ್ಳತನ ಮಾಡಿರುವ ದುಷ್ಕರ್ಮಿಗಳು ಬೆಲೆಬಾಳುವ ವಸ್ತುಗಳು ಹೊತ್ತುಕೊಂಡು ಹೋಗಿದ್ದಾರೆ. ತಾಲೂಕಿನ ತೆಲಸಂಗ ಗ್ರಾಯದ ಹೊರಟ್ಟಿಯಲ್ಲಿ ಆರು ಮನೆಗಳಲ್ಲಿ ಕಳ್ಳರು ಕೈ ಚಳಕ ತೋರಿದ್ದಾರೆ. ಮನೆಯಲ್ಲಿ ಬೆಳೆಬಾಳುವ ವಸ್ತುಗಳನ್ನೆಲ್ಲ ತೆಗೆದುಕೊಂಡು ಹೋಗಿದ್ದಾರೆ.

ಗ್ರಾಮದ ಅಕ್ಬರ್ ಕರ್ಜಗಿ, ಗುರು ಜಮಖಂಡಿ, ಬಸಿರ ಅಪರಾಜ, ಹನುಮಂತ ಜಮಖಂಡಿ, ಗುರು ಮಾದರ. ಎಬ್ಬುವರ ಮನೆಯಲ್ಲಿ ಕಳ್ಳತನ ವಾಗಿದೆ. ಮುಲ್ಲಾ ಕುಟುಂಬದ ಮನೆಯಲ್ಲಿ 6 ಲಕ್ಷ ರೂಪಾಯಿ ಹಾಗೂ 10 ಗ್ರಾಮ ಚಿನ್ನ ಮತ್ತು ಗ್ರಾಮದ ದೇವಸ್ಥಾನ ವಿಠಲ ಮಂದಿರದಲ್ಲಿ ಒಂದುವರೆ ಕೆಜಿ ಬೆಳ್ಳಿಯ ಕಿರಿಟ್ ಮತ್ತು 10 ಗ್ರಾಮ ದೇವಿಯ ಮಾಂಗಲ್ಯ ಸರವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ದೇವಸ್ಥಾನ ಕಳ್ಳತನ ಮಾಡಿಕೊಂಡು ಬೆಳೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಐಗಳಿ ಪೆÇೀಲಿಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು ಪೋಲಿಸರು ಈ ಕೂಡಲೆ ಸೂಕ್ತ ಕ್ರಮಕೈಗೊಂಡು ಕಳ್ಳರನ್ನು ಬಂಧಿಸಬೇಕೆಂದು ಸ್ಥಳೀಯರ ಮನವಿಯಾಗಿದೆ.


ಸುದ್ದಿ ಓದಿ