ಬೆಳಗಾವಿ

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ನೂತನ ನಿರ್ದೇಶಕರಾಗಿ ಕಾಂಗ್ರೆಸ್ ಮುಖಂಡ ಗಂಗಾಧರ ಬಡಕುಂದ್ರಿ ಆಯ್ಕೆ

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ನೂತನ ನಿರ್ದೇಶಕರಾಗಿ ಕಾಂಗ್ರೆಸ್ ಮುಖಂಡ ಗಂಗಾಧರ ಬಡಕುಂದ್ರಿ ಆಯ್ಕೆ
Congress leader Gangadhara Badakundri selected as the new Director of the Kittur Development Authori


           ಘಟಪ್ರಭಾ 12 :ಗೋಕಾಕ ತಾಲೂಕಿನ ಕಾಂಗ್ರೆಸ್ ಮುಖಂಡರು, ಪಂಚಮಸಾಲಿ ಸಮಾಜದ ತಾಲೂಕಾ ಅಧ್ಯಕ್ಷರು, ಲಯನ್ ಕ್ಲಬ್ ಅಧ್ಯಕ್ಷರು, ಹಿರಿಯ ನ್ಯಾಯವಾದಿಗಳು, ಮಾಜಿ ಪುರಸಭೆ ಸದಸ್ಯರು ಆದ ಗಂಗಾಧರ ಬಡಕುಂದ್ರಿ ಅವರನ್ನು ಜಿಲ್ಲೆಯ ಪ್ರತಿಷ್ಠಿತ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

          ಇವರ ಆಯ್ಕೆಗೆ ಹಲವಾರು ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು, ರೈತ ಮುಖಂಡರು, ಮಲ್ಲಾಪೂರ ಪಿ ಜಿ ಗ್ರಾಮದ ಗುರು ಹಿರಿಯರು ಹರ್ಷ ವ್ಯಕ್ತಪಡಿಸಿದ್ದಾರೆ. ಇವರ ಆಯ್ಕೆಗೆ ಕಾಂಗ್ರೆಸ್ ಗೋಕಾಕ ತಾಲೂಕಾ ಮುಖಂಡ ಡಾ. ಮಹಾಂತೇಶ ಕಡಾಡಿ ಹಾಗೂ ಜಿಲ್ಲಾ ಮುಖಂಡರ ಪ್ರಯತ್ನದಿಂದ ಆಯ್ಕೆ ಆಗಿದ್ದು ಇವರ ಆಯ್ಕೆಗೆ ಎಲ್ಲರೂ ಹರ್ಷ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ