ಶಿಗ್ಗಾವ್

ಸರ್ವ ಸಮುದಾಯದ ಸಮಗ್ರ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ : ಶಾಸಕ ಪಠಾಣ

ಸರ್ವ ಸಮುದಾಯದ ಸಮಗ್ರ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ : ಶಾಸಕ ಪಠಾಣ

                    ಶಿಗ್ಗಾವಿ  28: ಕ್ಷೇತ್ರದಲ್ಲಿರುವ ಸರ್ವ ಸಮುದಾಯದ ಸಮಗ್ರ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು.   ತಾಲೂಕಿನ ಹುಲಗೂರ ಪಟ್ಟಣದಲ್ಲಿ ಅಂದಾಜು 17 ಕೋಟಿ ವೆಚ್ಚದ ಕಾಮಗಾರಿ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಕ್ಷೇತ್ರಕ್ಕೆ ಸಾಮಾನ್ಯ ಶಾಸಕನಾಗಿ ಸುಮಾರು 2 ಸಾವಿರ ರೂ ಕೋಟಿಯ ಅನುದಾನವನ್ನು ಬರಿ ಎರಡು ವರ್ಷದಲ್ಲಿ ತಂದಿದ್ದೇನೆ ಅಲ್ಲದೇ 21 ಕೆಪಿಎಸ್ ಸಿ ಶಾಲೆ ಮಂಜೂರು ಮಾಡಿಸಿದ್ದೇನೆ.                                   

                   ಕ್ಷೇತ್ರದಲ್ಲಿರುವ ಮಕ್ಕಳು ವಿದ್ಯಾಬ್ಯಾಸಕ್ಕೆ ಶಿರಸಿ ಕಾರವಾರ ಹುಬ್ಬಳ್ಳಿ ಧಾರವಾಡ ಹಾವೇರಿಗೆ ಹೋಗುವ ಬದಲು ಅಲ್ಲಿಯ ಮಕ್ಕಳು ಶಿಗ್ಗಾವಿ ಕ್ಷೇತ್ರಕ್ಕೆ ಬರುವ ನಿಟ್ಟಿನಲ್ಲಿ ಸಂಕಲ್ಪ ಮಾಡಿದ್ದೇನೆ ಎಂದರು.   ಹುಲಗೂರ ಪಟ್ಟಣ ತನ್ನದೇ ಆದ ಇತಿಹಾಸ ಹೊಂದಿದೆ ಹಾಗೂ ಇಲ್ಲಿಯವರೆಗೂ 30 ಕೋಟಿ ಅನುಧಾನ 2 ವರ್ಷದಲ್ಲಿ ನೀಡಿದ್ದೇನೆ ಇನ್ನೂ 30 ಕೋಟಿ ಅನುಧಾನ ನೀಡಿದರೆ ಹುಲಗೂರ ಸಮಗ್ರ ಅಭಿವೃದ್ಧಿ ಆಗುತ್ತದೆ ಎಂದರು.   

              ಈ ಸಂದರ್ಭದಲ್ಲಿ ಮುಖಂಡರಾದ ಜಾವೀದ ಅಹ್ಮದ ಸವಣೂರ, ಈಸೂಫಸಾಬ ಬಾವೀಕಟ್ಟಿ, ಗುಡ್ಡಪ್ಪ ಜಲದಿ, ಶೇಖಪ್ಪ ಮಣಕಟ್ಟಿ, ಶಂಕರಗೌಡ ಪಾಟೀಲ, ಅಣ್ಣಪ್ಪ ಲಮಾಣಿ, ಆನಂದ ಲಮಾಣಿ ಸೇರಿದಂತೆ ಹುಲಗೂರ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ