ಕಾರು ದ್ವಿಚಕ್ರ ವಾಹನ ಮಧ್ಯ ಡಿಕ್ಕಿ : ಓರ್ವ ಸಾವು
ಲೋಕದರ್ಶನ ವರದಿ,
ಜಮಖಂಡಿ16: ರಾಜ್ಯ ಹೆದ್ದಾರಿಯಲ್ಲಿ ಬುಲೆರೋ ಕಾರು ಹಾಗೂ ದ್ವಿಚಕ್ರ ವಾಹನ ಮಧ್ಯ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರರು ಇಬ್ಬರು ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಮುಧೋಳ ತಾಲೂಕಿನ ಪಿ.ಎಂ.ಬುದ್ದಿ ಗ್ರಾಮದ ಮುತ್ತಪ್ಪ ಸನದಿ (30), ಬಸವರಾಜ ಗಲಗಲಿ (20) ಮೃತ ಯುವಕರು ಜಮಖಂಡಿ-ಮುಧೋಳ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದ್ದು, ದ್ವಿಚಕ್ರ ವಾಹನ ಹಾಗೂ ಬುಲೆರೋ ವಾಹನ ಮಧ್ಯ ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮುತ್ತಪ್ಪ ಸನದಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಸವಾರ ಬಸವರಾಜ ಗಲಗಲಿ ತೀವ್ರ ಸ್ವರೂಪದ ಪೆಟ್ಟಾಗಿದ್ದು, ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ತರುವ ವೇಳೆ ರಸ್ತೆ ಮಧ್ಯ ಸಾವನ್ನಪ್ಪಿದ್ದಾನೆ. ಮೃತರು ಜಮಖಂಡಿಯಿಂದ ಸ್ವಗ್ರಾಮ ಮುಧೋಳ ತಾಲೂಕಿನ ಪಿಎಂ ಬುದ್ದಿಗೆ ಹೋಗುವ ವೇಳೆ ಈ ಘಟನೆ ಸಂಭವಿಸಿದೆ.
ಸಿಪಿಐ ಮಲ್ಲಪ್ಪ ಮಡ್ಡಿ, ಪಿ,ಎಸೈ ಮಹೇಶ ಸಂಖ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಜಮಖಂಡಿ ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ