ಕಟ್ಟಿಕೆರೆಯಲ್ಲಿ ನಡೆದ ಸ್ವಚ್ಚತಾ ಅಭಿಯಾನ
ಜಮಖಂಡಿ 05: ದೇಶ ಪ್ರಧಾನಿ ಅವರ ಮಹತ್ವಾಕಾಂಕ್ಷೆ ಸ್ವಚ್ಛ ಭಾರತ ಅಭಿಯಾನದಲ್ಲಿ ಶಾಸಕ ಜಗದೀಶ ಗುಡಗುಂಟಿ ನಗರದ ಪ್ರವಾಸಿ ತಾಣವಾದ ಕೆಟ್ಟೆಕೆರೆ ಉದ್ಯಾನವನದ ಆವರಣವನ್ನು ಸ್ವಚ್ಛಗೊಳಿಸಿ ಶ್ರಮದಾನ ಮಾಡಿದರು.
ನಗರದ ಕಟ್ಟಿಕೆರೆಯಲ್ಲಿ ನಡೆದ ಸ್ವಚ್ಚತಾ ಅಭಿಯಾನದಲ್ಲಿ ಮಾತನಾಡಿದ ಅವರು, ವಿಶ್ವದಲ್ಲಿ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಜನಸಂಖ್ಯೆ ಹೆಚ್ಚಾದಂತೆ ಗಲಿಜು ಹೆಚ್ಚಾಗುತ್ತಿದೆ. ಸ್ವಚ್ಚತೆಯಿಲ್ಲದೆ ಕಸಕಡ್ಡಿ, ಗಲಿಜುಗಳಿಂದ ನಮ್ಮ ಆರೋಗ್ಯ ಅನಾರೋಗ್ಯದಿಂದ ಬಳಲುಬೇಕಾಗುತ್ತದೆ. ಆರೋಗ್ಯದ ಮೂಲ ಸ್ವಚ್ಛತೆ. ನಾವು ಆಂತರಿಕವಾಗಿ ಮತ್ತು ಬಹಿರಂಗವಾಗಿ ಒಳ್ಳೆಯ ವಿಚಾರಗಳನ್ನು ಹೊಂದಿರಬೇಕು. ಮಹಾತ್ಮ ಗಾಂಧಿಜೀ ಅವರ ಕನಸಿನಂತೆ ಗ್ರಾಮೀಣ ಮಟ್ಟದಿಂದ ನಗರದವರೆಗೆ ಸ್ವಚ್ಛವನ್ನಾಗಿಸಬೇಕು. ಇಂದಿನ ದಿನಮಾನದಲ್ಲಿ ಪ್ರಧಾನಮಂತ್ರಿ ಮೋದಿಜಿಯವರಿಂದ ಸಾಕಾರಗೊಳ್ಳುತ್ತಿದೆ. ಪ್ರತಿದಿನವೂ ನಾವು ಸ್ವಚ್ಛತೆ ಕಡೆ ಗಮನಹರಿಸಬೇಕು ಸೂಚನೆಯನ್ನು ನೀಡಿದರು.
ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ ಮಾತನಾಡಿ, ಸ್ವಚ್ಛತಾ ಸೇವಾ ಕಾರ್ಯಕ್ರಮದ ಮೂಲಕ ಐದು ಸ್ಥಳಗಳನ್ನು ಆಯ್ಕೆ ಮಾಡುವುದರ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಕಳೆದ 15 ದಿನಗಳಿಂದ ಯುತ್ ಗ್ಯಾಬ್ರೆಜ್ನಿಂದ ಸ್ವಚ್ಚತೆ ಕಡೆಗೆ ಗಮನಹರಿಸಿದ್ದು. ಪ್ರತಿದಿನ 1 ಗಂಟೆ ನಮ್ಮ ಮನೆ, ನಮ್ಮ ಊರು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಬೇಕು. ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಪರಿಸರ ಸ್ವಚ್ಛವಾಗಿಡಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ವಿಪ, ಸದಸ್ಯ ಜಿ, ಎಸ್, ನ್ಯಾಮಗೌಡ, ತಹಸಿಲ್ದಾರ್ ಸದಾಶಿವ ಮುಕ್ಕೋಜಿ, ನಗರಸಭೆ ಸದಸ್ಯ ಕುಶಾಲ್ ವಾಗ್ಮೋರೆ, ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ, ಉಪವಲಯ ಅರಣ್ಯ ಅಧಿಕಾರಿ ಮಹೇಶ ಗುಡಿಮನಿ, ಗಸ್ತು ಅರಣ್ಯ ಪಾಲಕ ಆರ್,ಬಿ, ಮೇತ್ರಿ, ಎಸ್,ಎಚ್, ಕುಳಲಿ, ನ್ಯಾಯವಾದಿ ಎಸ್,ಬಿ, ಕಾಳೆ, ವಿ,ಎಸ್,ವಿಶ್ವಬ್ರಾಹ್ಮಣ, ಎಸ್,ಕೆ, ಹಾಲಳ್ಳಿ, ನಗರಸಭೆ ಸಹಾಯಕ ಇಂಜಿನಿಯರ ಕುಸುಮಾ ಸಪ್ಲಡ, ವಿಜಯಕುಮಾರ ವಂದಾಲ, ಎಸ್,ಐ, ವಿನಾಯಕ ನಿಡೋಣಿ ಸೇರಿದಂತೆ ಅನೇಕರು ಇದ್ದರು.