ಜಮಖಂಡಿ

ನಗರಸಭೆ ಕಾರ್ಯದಲ್ಲಿ ಸಾರ್ವಜನಿಕರು ಕೈ ಜೋಡಿಸಿದರೆ ನಗರ ಸುಂದರವಾಗಲು ಸಾಧ್ಯ: ಗೌರೋಜಿ

ನಗರಸಭೆ ಕಾರ್ಯದಲ್ಲಿ ಸಾರ್ವಜನಿಕರು ಕೈ ಜೋಡಿಸಿದರೆ ನಗರ ಸುಂದರವಾಗಲು ಸಾಧ್ಯ: ಗೌರೋಜಿ

ಗಜಾನನ ಉತ್ಸವ ಸಮಿತಿ ಕಾರ್ಯಕ್ರಮ 

ಜಮಖಂಡಿ 13: ನಗರದಲ್ಲಿನ ಉದ್ಯಾನ ವನವನ್ನು ನಗರಸಭೆಯವರು ಸ್ವಚ್ಚತಾ ಮಾಡುವ ಕಾರ್ಯದಲ್ಲಿ ಸಾರ್ವಜನಿಕರು ಸಹ ಕೈ ಜೋಡಿಸಿದರೆ ನಗರ ಸುಂದರವಾಗಲು ಸಾಧ್ಯ ಎಂದು ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ ಹೇಳಿದರು. 

ನಗರದ ಕುಂಚನೂರ ರಸ್ತೆ ಹತ್ತಿರ ಲಾಲಾ ಬಹದ್ದೂರ್ ಶಾಸ್ತ್ರಿ ನಗರದಲ್ಲಿ ನಡೆದ  ಗಜಾನನ ಉತ್ಸವ ಸಮಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇವಲ ನಗರಸಭೆ ಮೇಲೆ ಒತ್ತಡ ಹಾಕದೆ. ತಮ್ಮ ಮನೆ, ಅಂಗಳ ಹೇಗೆ ಸ್ವಚ್ಛಾತಯಿಂದ ಕಾಪಾಡಿಕೊಳ್ಳುತ್ತಿರಿ. ಅದೇ ತರಹ ಉದ್ಯಾನವನವನ್ನು ಸ್ವಚ್ಛಾತೆಯಿಂದ ಕಾಪಾಡಿಕೊಂಡರೆ. ಯಾವುದೇ ತರಹದ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ. ಇಲ್ಲಿನ ನಿವಾಸಿಗಳು ಪ್ರತಿ ಒಂದು ವಾರ ಎಲ್ಲರು ಸೇರಿಕೊಂಡು ಉದ್ಯಾನವನವನ್ನು ಸ್ವಚ್ಚತಾ ಮಾಡು ಕಾರ್ಯ ಮಾಡಿದ್ದರೆ ಮಾತ್ರ  ಉದ್ಯಾನವನ ಸುಂದರವಾಗಿ ಕಾಣುತ್ತದೆ. ತಮ್ಮ ಮನೆಯ ಸುತ್ತಮುತ್ತಲು ಸಹ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು ಎಂದರು.  

ವೇದಿಕೆಯಲ್ಲಿ ಎನ್,ಎ, ಶ್ಯಾನವಾಡ, ಮಲ್ಲಿಕಾರ್ಜುನ ಮಠದ, ರಾಜಶೇಖರ ಚಿಮ್ಮಡ, ವ್ಹಿ,ಡಿ,ಜೋಶಿ, ಶೀವಲಿಲಾ ಶ್ಯಾನವಾಡ, ಶಾರದಾ ಮಠದ, ವಿನೋದ ಲೋಣೆ ಇದ್ದರು.ಗಂಗಾಧರ ತಲೆಬಕ್ಕನ್ನವರ ನಿರೂಪಿಸಿದರು. ಎ,ಜಿ, ತಲೆಬಕ್ಕನ್ನವರ ಪ್ರಾಸ್ತಾವಿಕ ಮಾತನಾಡಿದರು. 

ವಿವಿಧ ಸ್ಪರ್ಧೆಗಳಲ್ಲಿ ಮಹಿಳೆಯರು. ಯುವಕರು. ಪುಟ್ಟ ಮಕ್ಕಳು ಭಾಗವಹಿಸಿ. ಸ್ಪರ್ಧೆಯಲ್ಲಿ ಗೆಲವು ಸಾಧಿಸಿದವರಿಗೆ ಹಾಗೂ ಹಿರಿಯ ನಾಗರಿಕರಿಗೆ. ಹೆಚ್ಚು ಅಂಕಗಳನ್ನು ಪಡೆದ ಶಾಲಾ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ. ಪ್ರಶಸ್ತಿಗಳನ್ನು ನೀಡಿದರು. 


ಸುದ್ದಿ ಓದಿ