ಅಥಣಿ

ರಾವಸಾಹೇಬ ಐಹೊಳೆ ಪರಿಶಿಷ್ಠ ಜಾತಿ ವಿಭಾಗದ ಜಿಲ್ಲಾ ಮಾಧ್ಯಮ ವಕ್ತಾರರಾಗಿ ಆಯ್ಕೆ

ರಾವಸಾಹೇಬ ಐಹೊಳೆ ಪರಿಶಿಷ್ಠ ಜಾತಿ  ವಿಭಾಗದ ಜಿಲ್ಲಾ ಮಾಧ್ಯಮ ವಕ್ತಾರರಾಗಿ ಆಯ್ಕೆ

ಅಥಣಿ 28: ಪುರಸಭೆಯ ಮಾಜಿ ಅಧ್ಯಕ್ಷ ಮತ್ತು ಹಾಲಿ ಪುರಸಭಾ ಸದಸ್ಯ ರಾವಸಾಹೇಬ ನಿವೃತ್ತಿ ಐಹೊಳೆ ಇವರನ್ನು ಪರಿಶಿಷ್ಠ ಜಾತಿ  ವಿಭಾಗದ ಬೆಳಗಾವಿ ಜಿಲ್ಲಾ ಮಾಧ್ಯಮ ವಕ್ತಾರರಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ. 

ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪರಿಶಿಷ್ಠ ಜಾತಿ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಲಿಲೋತಿ  ಆಯ್ಕೆ ಪತ್ರವನ್ನು ಬೆಂಗಳೂರಿನಲ್ಲಿ  ರಾವಸಾಹೇಬ ಐಹೊಳೆಯವರಿಗೆ ನೀಡಿ ಗೌರವಿಸಿದರು. ನನ್ನ ಮೇಲೆ ವಿಶ್ವಾಸ ಇಟ್ಟು ಎಐಸಿಸಿ ಅಧ್ಯಕ್ಚ ಮಲ್ಲಿಕಾರ್ಜುನ ಖರ್ಗೆ ಆದೇಶದ ಮೇರೆಗೆ, ಕೆಪಿಸಿಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಇವರ ಅನುಮೋದನೆ ಮೇರೆಗೆ  ಪರಿಶಿಷ್ಠ ಜಾತಿ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾದ ರಾಜೇಶ ಲಿಲೋತಿ  ನನ್ನನ್ನು ಆಯ್ಕೆ ಮಾಡಿದ್ದು, ನನ್ನ ಅಧಿಕಾರವಧಿಯಲ್ಲಿ  ಕಾಂಗ್ರೆಸ್ ಪಕ್ಷದ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ನವರ ಕೈ ಬಲ ಪಡಿಸುವ ಪ್ರಯತ್ನ ಮಾಡುವೆ ಮತ್ತು ನನ್ನ ಆಯ್ಕೆಗೆ ಸಹಕರಿಸಿದ ಪಕ್ಷದ ಎಲ್ಲ ಹಿರಿಯರನ್ನು ಅಭಿನಂದಿಸುವೆ ಎಂದರು. 


ಸುದ್ದಿ ಓದಿ