ಮರುಳಸಿದ್ದೇಶ್ವರ ಪ್ರೌಢ ಶಾಲೆಯ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಇಂಡಿ 23: ನಗರದಲ್ಲಿ ನಡೆದ ಬ್ರಿಲಿಯಂಟ್ ಶಾಲೆಯ ಕ್ರೀಡಾಂಗಣದಲ್ಲಿ ಜರುಗಿದ ತಾಲೂಕು ಮಟ್ಟದ ವಿವಿಧ ಕ್ರೀಡಾ ಪಂದ್ಯಾವಳಿಯಲ್ಲಿ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಶ್ರೀ ಮರುಳಸಿದ್ದೇಶ್ವರ ಪ್ರೌಡ ಶಾಲೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿನಿಯರು ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜಿಲ್ಲಾ ಮಟ್ಟದ ಆಯ್ಕೆಯಾಗಿ ಉತ್ತಮ ಸಾಧನೆ ಮಾಡಿದ್ದಾರೆ. 3000 ಮೀಟರ್ ಓಟದಲ್ಲಿ ನಿಂಗಪ್ಪ ಪೂಜಾರಿ ದ್ವಿತೀಯ, 200 ಮೀಟರ್ ಓಟದಲ್ಲಿ ಸಮರ್ಥ ಬಡಿಗೇರ್ ಪ್ರಥಮ, 100 ಹಾಗೂ 1500 ಮೀಟರ್ ಓಟದಲ್ಲಿ ಲಕ್ಷ್ಮಿ ಬಿರಾದಾರ ಪ್ರಥಮ ಸ್ಥಾನ ಪಡೆದಿದ್ದಾರೆ.ಇವರ ಸಾಧನೆಗೆ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಂದಾ ವಾಲಿಕಾರ ಹರ್ಷ ವ್ಯಕ್ತಪಡಿಸಿದ್ದಾರೆ ಹಾಗೂ ಮುಂದೆ ಮಕ್ಕಳು ಜಿಲ್ಲಾ ಮಟ್ಟ ಪಂದ್ಯಾವಳಿಯಲ್ಲಿ ಭಾಗವಹಿಸಲು ಹೋಗಿ ಬರುವ ಖರ್ಚು ವೆಚ್ಚವನ್ನು ನಮ್ಮ ಪಂಚಾಯಿತಿಯಿಂದ ಕೊಡಲಾಗುವುದು ಎಂದು ಹೇಳಿದರು.
ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಸಾಧನೆ ಮರುಳಸಿದ್ದೇಶ್ವರ ಪ್ರೌಡಶಾಲೆ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ. ಸರ್ವಜ್ಞ ಕರಿಯರ್ ಅಕಾಡೆಮಿ ಸಂಸ್ಥಾಪಕ ನಾಗೇಶ ಹೆಗಡ್ಯಾಳ, ಮರುಳಸಿದ್ದೇಶ್ವರ ಪ್ರೌಢಶಾಲಾ ಶಿಕ್ಷಕರಾದ ಎನ್ ಸಿ ಕುಂಬಾರ, ಪಿ ಸಿ ಬಗಲಿ, ಆರ್ ಎಮ್ ತಳವಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.