ಸಿಂಧಗಿ

ಮಕ್ಕಳ ಸಾಹಿತ್ಯ ಮಕ್ಕಳ ವ್ಯಕ್ತಿತ್ವ ರೂಪಿಸುತ್ತದೆ: ಪೂಜಾರ

ಮಕ್ಕಳ ಸಾಹಿತ್ಯ ಮಕ್ಕಳ ವ್ಯಕ್ತಿತ್ವ ರೂಪಿಸುತ್ತದೆ: ಪೂಜಾರ
ಸಿಂದಗಿ: ಶಿಕ್ಷಕ, ಸಾಹಿತಿ, ವ್ಯಂಗ್ಯಚಿತ್ರಕಾರ ಶರಣು ಚಟ್ಟಿ ಅವರ ‘ತುಂಟ ಮಕ್ಕಳು’ ಕೃತಿಯನ್ನು ಮಕ್ಕಳ ಸಾಹಿತಿ ಹ.ಮ. ಪೂಜ

ತುಂಟ ಮಕ್ಕಳು ಕವನ ಸಂಕಲನ ಲೋಕಾರ್ಪಣೆ : ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತಬೇಕು

ಸಿಂದಗಿ29:  ಮನೆ, ಶಾಲೆ, ಸಮಾಜದ ಪರಿಸರದ ಜೊತೆಗೆ ಮಕ್ಕಳ ಸಾಹಿತ್ಯ ಮಕ್ಕಳ ವ್ಯಕ್ತಿತ್ವ ನಿರ್ಮಾಣದ ವಿನ್ಯಾಸದಲ್ಲಿ ಬಹುಪ್ರಧಾನವಾದುದು ಎಂದು ಮಕ್ಕಳ ಸಾಹಿತಿ ಹ.ಮ. ಪೂಜಾರ ಹೇಳಿದರು.

ತಾಲೂಕಿನ ಗೋಲಗೇರಿ ಗ್ರಾಮದ  ಗೊಲ್ಲಾಳೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ  ಜ್ಞಾನಜ್ಯೋತಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ನುಡಿಚಿತ್ರ ಪ್ರಕಾಶನ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸ್ಥಳೀಯ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಸಾಹಿತಿ, ವ್ಯಂಗ್ಯ ಚಿತ್ರಕಾರ ಶರಣು ಚಟ್ಟಿ ಅವರ ‘ತುಂಟ ಮಕ್ಕಳು’ ಮಕ್ಕಳ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.

ಮಕ್ಕಳ ಮನೋವಿಕಾಸ ಅರಿತ ಶಿಕ್ಷಕರು ಬಿಡುವಿನ ಸಮಯದಲ್ಲಿ ಮಕ್ಕಳ ಸಾಹಿತ್ಯ ಕೃಷಿಯಲ್ಲಿ ತೊಡಬೇಕು. ಈ ನಿಟ್ಟಿನಲ್ಲಿ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಸಾಹಿತಿ, ವ್ಯಂಗ್ಯ ಚಿತ್ರಕಾರ ಶರಣು ಚಟ್ಟಿ ಅವರು ಶಿಕ್ಷಕ ವೃತ್ತಿಯೊಂದಿಗೆ ಮಕ್ಕಳ ಸಾಹಿತ್ಯ ಕೃಷಿಯಲ್ಲಿ ತೊಡಗಿ ತುಂಟ ಮಂಗ ಕವನ ಸಂಕಲನ ರಚಿಸಿದ್ದಾರೆ. ತುಂಟ ಮಕ್ಕಳು ಚೊಚ್ಚಲ ಕೃತಿಯಾದರು ಉತ್ತಮವಾಗಿ ಹೊರಬಂದಿದೆ ಎಂದು ಹೇಳಿದರು.

ಮುಳವಾಡದ ಮಕ್ಕಳ ಸಾಹಿತಿ ಪ.ಗು. ಸಿದ್ದಾಪೂರ ಮಾತನಾಡಿ, ಶರಣು ಚಟ್ಟಿ ಅವರು ಶಿಕ್ಷಕ ವೃತ್ತಿಯೊಡನೆ ಸಾಹಿತ್ಯ, ಚಿತ್ರಕಲೆಯಂಥ ಪ್ರವೃತ್ತಿಗಳನ್ನೂ ಮುನ್ನಡೆಸುತ್ತ ಸವ್ಯಸಾಚಿಯಾಗಿದ್ದಾರೆ. ಮಕ್ಕಳಿಗಾಗಿ ಕವನಗಳನ್ನು ಬರೆಯುವುದಲ್ಲದೇ ಅವುಗಳಿಗೆ ಚಿತ್ರಗಳನ್ನು ರಚಿಸುವ ಕಲೆಗಾರಿಕೆ ಶರಣು ಚಟ್ಟಿ ಅವರಿಗೆ ಸಿದ್ಧಿಸಿದ್ದು ವಿಶೇಷ. ಎಂದು ಹೇಳಿ ತುಂಟ ಮಕ್ಕಳು ಕವನ ಸಂಕಲನದಲ್ಲಿನ ಎಲ್ಲ ಕವನಗಳ ಸ್ವಾರಸ್ಯವನ್ನೂ ವಿಶ್ಲೇಷಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ಆನಂದ ಭೂಸನೂರ ಮಾತನಾಡಿ, ಶಿಕ್ಷಕರು ಮಕ್ಕಳ ಸಾಹಿತ್ಯ ಕೃಷಿ ಮಾಡುವ ಮೂಲಕ ವಿಜಯಪುರ ಜಿಲ್ಲೆ ಮಕ್ಕಳ ಸಾಹಿತಿಗಳ ತವರೂರು ಎಂಬ ಹೆಸರನ್ನು ಉಳಿಸಬೇಕು. ಶಿಕ್ಷಕರ ಸಾಹಿತ್ಯಿಕ ಪ್ರತಿಭೆ ಪೋಷಿಸುವಲ್ಲಿ ಶಿಕ್ಷಕರ ಸಂಘ ಕೈಜೋಡಿಸಲಿದೆ. ತುಂಟ ಮಕ್ಕಳು ಕೃತಿಯನ್ನು ತಾಲ್ಲೂಕಿನ ಎಲ್ಲಾ ಶಾಲೆಗಳಿಗೂ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಿಕ್ಷಕರ ಸಂಘದ ನಿರ್ದೇಶಕ ಜಿ.ಎನ್. ಪಾಟೀಲ ಮಾತನಾಡಿ, ಗ್ರಾಮೀಣ ಸಾಹಿತಿ, ಕಲಾವಿದರನ್ನು ಪ್ರೋತ್ಸಾಹಿಸುವುದು ಅಪೇಕ್ಷಣೀಯವಾಗಿದೆ ಎಂದು ಹೇಳಿ ಜ್ಞಾನಜ್ಯೋತಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆಗೆ ಐದು ಸಾವಿರ ರೂ. ಧನ ಸಹಾಯದ ವಾಗ್ದಾನ ಮಾಡಿದರು. 

ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮದ  ಗೊಲ್ಲಾಳೇಶ್ವರ ದೇವಸ್ಥಾನದ ಧರ್ಮದರ್ಶಿ ಹೊಳೆಪ್ಪಶರಣರು ದೇವರಮನಿ, ಸಾನಿಧ್ಯ ವಹಿಸಿದ್ದ ಸ್ಥಳೀಯ ಭಂಡಾರಿದೇವಿ ಶಕ್ತಿಪೀಠದ  ಮುನೀಂದ್ರದೇವ ಶಿವಾಚಾರ್ಯರು, ಅಧ್ಯಕ್ಷತೆ ವಹಿಸಿದ್ದ  ಗೊಲ್ಲಾಳೇಶ್ವರ ಶಿಕ್ಷಣ ಪ್ರಸಾರ ಸಮಿತಿಯ ಕಾರ್ಯದರ್ಶಿ ಆರ್.ಬಿ. ಬಿರಾದಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೊಲ್ಲಾಳಪ್ಪಗೌಡ ಪಾಟೀಲ, ಕಸಾಪ ಅಧ್ಯಕ್ಷ ಎಸ್.ಬಿ. ಚೌಧರಿ ಮಾತನಾಡಿದರು.

ಧರ್ಮದರ್ಶಿ ಸಿದ್ಧರಾಮಶರಣರು ದೇವರಮನಿ,  ಗೊಲ್ಲಾಳೇಶ್ವರ ಶಿಕ್ಷಣ ಪ್ರಸಾರ ಸಮಿತಿಯ ಅಧ್ಯಕ್ಷ ಎನ್.ಎಸ್. ಪಾಟೀಲ, ಉಪಾಧ್ಯಕ್ಷ ಪ್ರಭುಗೌಡ ಪಾಟೀಲ, ಪ್ರಾಚಾರ್ಯ ಎಸ್.ಎಂ. ಬನ್ನಿ, ನುಡಿಚಿತ್ರ ಪ್ರಕಾಶನದ ಪ್ರಕಾಶಕ ಗೊಲ್ಲಾಳಪ್ಪ ಚಟ್ಟಿ, ಬಸವರಾಜ ಅಗಸರ,  ರಾಯಪ್ಪ ಇವಣಗಿ, ಮುಖ್ಯಶಿಕ್ಷಕ ಆರ್.ಜಿ. ಬನಸಿ, ಮುಖ್ಯಶಿಕ್ಷಕಿ ಬಿ.ಎಸ್ .ಗೋಣಿ, ಎಸ್.ಎಸ್. ಸಾತಿಹಾಳ, ಎಂ.ಎಸ್. ಮಣೂರ ಸೇರಿದಂತೆ ಇತರರು ಇದ್ದರು.

ಲೇಖಕ ಶರಣು ಚಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಶಲಾ ಜಾಲವಾದಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ನೀಲಾಬಾಯಿ ಕೋಟೇಗೋಳ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಸಂಜೀವ ಯಂಕಂಚಿ ಸ್ವಾಗತಿಸಿದರು. ಶಿವಶಂಕರ ಪೂಜಾರಿ ನಿರೂಪಿಸಿದರು. ಮಲ್ಲಿಕಾರ್ಜುನ ಕರ್ನಾಳ ವಂದಿಸಿದರು.


ಸುದ್ದಿ ಓದಿ