ಜಮಖಂಡಿ

ಸರಕಾರಿ ಡ್ಯೂಟಿಗೆ ಚಕ್ಕರ್, ಎಣ್ಣಿ ಪಾರ್ಟಿಗೆ ಹಾಜರ

ಸರಕಾರಿ ಡ್ಯೂಟಿಗೆ ಚಕ್ಕರ್, ಎಣ್ಣಿ ಪಾರ್ಟಿಗೆ ಹಾಜರ

ಜಮಖಂಡಿ 24: ನಗರದ ಸರಕಾರಿ ಪಿಡಬ್ಲೂಡಿ ಇಲಾಖೆಯ ರಮಾನಿವಾಸ ಪ್ರವಾಸಿ ಮಂದಿರದಲ್ಲಿ (ಐಬಿ)ಯಲ್ಲಿ ಜಿಲ್ಲಾ ಪಂಚಾಯತ ಅಧಿಕಾರಿಗಳು ಕಚೇರಿ ಸಮಯದಲ್ಲಿ ಕೆಲಸಕ್ಕೆ ಚಕರ್ ಹೊಡೆದು ಗುತ್ತಿಗೆದಾರರೊಂದಿಗೆ ಮಧ್ಯ ಸೇವಿಸುತ್ತ ಮೋಜು ಮಸ್ತಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಲೋಕಸಭಾ ಸಾರ್ವತ್ರಿಕ ಚುಣಾವಣೆ ಚಾಲ್ತಿಯಲ್ಲಿದ್ದರು ಕಚೇರಿಗೆ ಚಕ್ಕರ ಹೊಡೆದು ಜಿಪಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಎಸ್‌.ಎಂ.ನಾಯಕ, ಎಂಜಿನಿಯರಗಳಾದ ರಾಮಪ್ಪ ರಾಠೋಡ, ಜಗದೀಶ ನಾಡಗೌಡ, ಗಜಾನನ ಪಾಟೀಲಗೆ 24ಗಂಟೆಯಲ್ಲಿ ಜಿಲ್ಲಾಧಿಕಾರಿ ಕೆ.ಜಾನಕಿ ಅವರು ನೋಟಿಸ್ ಜಾರಿ ಮಾಡಿದ್ದಾರೆ. ನೀತಿ ಸಂಹಿತೆ ಜಾರಿಯಾದಾಗ ವಸತಿ ಗೃಹಗಳು ತಹಶೀಲ್ದಾರ ಸುಪರ್ದಿಗೆ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದೆವೆ, ಆ ಪ್ರಕಾರ ನೀವು ನಮಗೆ ಸುಪರ್ದಿಗೆ ತೆಗೆದುಕೊಂಡಿದ್ದಿರಿ ಎಂದು ಹೇಳಿದ್ದಾಗೂ ನಿಮ್ಮ ಅನುಮತಿ ಇಲ್ಲದೆ ಜಿಲ್ಲಾ ಪಂಚಾಯತ ಅಧಿಕಾರಿ ಹಾಗೂ ಸಿಬ್ಬಂದಿಗಳು ವಸತಿ ಗೃಹದಲ್ಲಿ ಹೇಗೆ ಪ್ರವೇಶ ಮಾಡಿದ್ದಾರೆ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಜಮಖಂಡಿ ತಹಶೀಲ್ದಾರ ಸದಾಶಿವ ಮಕ್ಕೋಜಿಯವರಿಗೆ ನೋಟಿಸ ಜಾರಿ ಮಾಡಿದ್ದಾರೆ.ಘಟನೆ ಹಿನ್ನೆಲೆ: ಜಿಲ್ಲಾ ಪಂಚಾಯತ ನಾಲ್ಕು ಜನ ಅಧಿಕಾರಿಗಳು ಹಾಗೂ ಆರು ಜನ ಗುತ್ತಿಗೆದಾರರು ಸೇರಿ ಹತ್ತಕ್ಕು ಅಧಿಕ ಜನರು ಸೇರಿಮದ್ಯಾಹ್ನ 2 ಗಂಟೆ ಸುಮಾರಿಗೆ ಸರ್ಕಾರಿ ಐಬಿಯಲ್ಲಿ ಮದ್ಯ ಮಾಂಸದ ಪಾರ್ಟಿ ಹಮ್ಮಿಕೊಂಡಿದ್ದರು, ಈ ವಿಷಯ ತಿಳಿದು ಸಾರ್ವಜನಿಕರೊಬ್ಬರು ವಿಡಿಯೋ ಮಾಡಿ ಅಧಿಕಾರಿಗಳ ಗಮನಕ್ಕೆ ತಂದಾಗ ಅಧಿಕಾರಿಗಳಿಗೆ ನೋಟಿಸ್ ಜಾರಿಯಾಗಿದೆ. ವಿಡಿಯೋ ಮಾಡಿಕೊಂಡ ಸಾರ್ವಜನಿಕರಿಗೆ ಜಿಪಂ ಅಧಿಕಾರಿಗಳು ಗುತ್ತಿಗೆದಾರರ ಮೂಲಕ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಈ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ವಿಡಿಯೋ ಮಾಡಿಕೊಂಡವರು ಅರ್ಜಿ ಸಲ್ಲಿಸಿದ್ದಾರೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವದು ಎಂದು ಪೊಲೀಸರು ತಿಳಿಸಿದ್ದಾರೆ.ನೀತಿ ಸಂಹಿತೆ ಇದ್ದರು ಸಹ ಅಧಿಕಾರಿಗಳು ಈ ತರಹ ನಡೆದುಕೊಂಡಿದ್ದು.ಅಧಿಕಾರಿಗಳು ಅತ್ಯಂತ ಅಶಿಸ್ತಿನ ನಡುವಳಿಕೆಯಾಗಿದ್ದು. ಅವರ ಮೇಲೆ ಶಿಸ್ತು ಕ್ರಮಕ್ಕೆ ವರದಿ ಸಲಿಸಲಾಗುವುದು ಎಂದು ಉಪವಿಭಾಗಾಧಿರಿ ಸಂತೋಷ ಕಾಮಗೊಂಡ ತಿಳಿಸಿದ್ದಾರೆ.   


ಸುದ್ದಿ ಓದಿ