ವಿಜಯಪುರ

ಕೂಡಗಿ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ

ಕೂಡಗಿ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ

ಲೋಕದರ್ಶನ ವರದಿ 

ಕೊಲ್ಹಾರ  25: ತಾಲೂಕಿನ ಕೂಡಗಿ ಗ್ರಾಮದಲ್ಲಿ ಬ್ರಿಟಿಷರ ವಿರುದ್ಧದ ಸಶಸ್ತ್ರ ಹೋರಾಟದ ಹಾದಿಯಲ್ಲಿ ಮುಂಚೂಣಿಯಲ್ಲಿದ್ದ ಕೆಚ್ಚೆದೆಯ ಕನ್ನಡತಿ, ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮನ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.ಗ್ರಾಮದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವೀರ ರಾಣಿ ಚನ್ನಮ್ಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ನಮನ ಅರ​‍್ಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯೆ ಕಾಶೀಬಾಯಿ ಉಳ್ಳಾಗಡ್ಡಿ, "ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಧೈರ್ಯದಿಂದ ಹೋರಾಡಿದ ರಾಣಿ ಚನ್ನಮ್ಮನ ಸಾಹಸ, ಶೌರ್ಯ ಮತ್ತು ತ್ಯಾಗ ಎಂದೆಂದಿಗೂ ಅಜರಾಮರ. ಅಂತಹ ಮಹಾನ್ ಧೀಮಂತರ ಸ್ಮರಣೆ ಕೇವಲ ಜಯಂತಿ ಆಚರಣೆಗೆ ಸೀಮಿತವಾಗದೆ, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು" ಎಂದು ಕರೆ ನೀಡಿದರು


.ಕಾರ್ಯಕ್ರಮದಲ್ಲಿ ಗಂಗಾಧರಯ್ಯ ಹೀರೇಮಠ, ಗ್ರಾಮ ಪಂಚಾಯಿತಿ ಸದಸ್ಯೆ ಕಾಶೀಬಾಯಿ ಉಳ್ಳಾಗಡ್ಡಿ ಹಿರಿಯರಾದ ಸಾಹೇಬಗೌಡ ಪಾಟೀಲ, ಶಾಂತಪ್ಪ ತೋರವಿ, ಚಂದ್ರಶೇಖರ ಜುಗತಿ, ರಮೇಶ ಗುಡದಿನ್ನಿ, ಚನ್ನಬಸಪ್ಪ ಮಮದಾಪೂರ, ಈರಣಗೌಡ ಪಾಟೀಲ ಹಾಗೂ ಮಹೇಶ ವೀರಣ್ಣನವರ ಸೇರಿದಂತೆ ಗ್ರಾಮದ ಹಲವು ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ