ರಾಯಬಾಗ

ನೂಲಿ ಚಂದಯ್ಯನವರ ಜಯಂತಿ ಆಚರಣೆ

ನೂಲಿ ಚಂದಯ್ಯನವರ ಜಯಂತಿ ಆಚರಣೆ

ಲೋಕದರ್ಶನ ವರದಿ

ರಾಯಬಾಗ 01: ಸಮಾಜದಲ್ಲಿರುವ ಶೋಷಿತ ವರ್ಗದ ಜನರು ಒಳ್ಳೆಯ ಶಿಕ್ಷಣ ಪಡೆದು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಏಳ್ಗೆ ಹೊಂದಬೇಕೆಂದು ತಾಲ್ಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿ.ಎಸ್.ಚಂದರಗಿ ಹೇಳಿದರು.

ಗುರುವಾರ ಪಟ್ಟಣದ ಜಗಜೀವನರಾಮ್ ಭವನದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಂಘ ತಾಲ್ಲೂಕ ಘಟಕ ರಾಯಬಾಗ ಹಾಗೂ ಭಜಂತ್ರಿ ಸಮುದಾಯ ವತಿಯಿಂದ ಹಮ್ಮಿಕೊಂಡಿದ್ದ ಶಿವಶರಣ ಕಾಯಕಯೋಗಿ ನೂಲಿ ಚಂದಯ್ಯನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಧಾರವಾಡ ವಿವಿ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಶಿವರುದ್ರ ಕಲ್ಲೋಳಿಕರ ಮಾತನಾಡಿ, ಪ್ರತಿಯೊಂದು ಜನಾಂಗದವರು ತಮ್ಮ ಜನಾಂಗದ ಇತಿಹಾಸವನ್ನು ಅರಿತುಕೊಂಡು ನಡೆಯಬೇಕು. ತಮಗೆ ದೊರೆತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡ ಪ್ರಗತಿ ಹೊಂದಬೇಕೆಂದರು.

ಜಿ.ಪಂ.ಮಾಜಿ ಸದಸ್ಯ, ಹಿರಿಯರಾದ ಡಿ.ಎಸ್.ನಾಯಿಕ ಮಾತನಾಡಿ, ನೂಲಿ ಚಂದಯ್ಯನವರು ತಮ್ಮ ಕಾಯಕದೊಂದಿಗೆ ವಚನಗಳನ್ನು ರಚಿಸಿ ಶ್ರೇಷ್ಠ ಶಿವಶರಣರಾಗಿದ್ದಾರೆ. ಮನುಷ್ಯನಿಗೆ ಪ್ರೀತಿ, ಸಹೋದರತ್ವ, ಭಾತೃತ್ವ ಬೇಕು ಹೊರತು, ಸ್ವಜಾತಿ ಪ್ರೇಮ ಮುಖ್ಯವಲ್ಲ. ನಾವೆಲ್ಲರೂ ವಿಶ್ವಮಾನವರಾಗಬೇಕೆಂದು ಕರೆ ನೀಡಿದರು. 

ಸಾನ್ನಿಧ್ಯವನ್ನು ಶಿರಗೂರದ ಅಭಿನವ ಕಲ್ಮೇಶ್ವರ ಮಹಾರಾಜರು ವಹಿಸಿದ್ದರು. ಎಕೆಎಮ್ಎಸ್ (ಕಿತ್ತೂರ ಕನರ್ಾಟಕ) ರಾಜ್ಯ ಉಪಾಧ್ಯಕ್ಷ ಎಚ್.ಎ.ಭಜಂತ್ರಿ, ಎಕೆಎಮ್ಎಸ್ ಬೆಳಗಾವಿ ಜಿಲ್ಲಾಧ್ಯಕ್ಷ ಮುತ್ತಪ್ಪ ಭಜಂತ್ರಿ, ಶಿವಪ್ಪ ಭಜಂತ್ರಿ, ಗೋವಿಂದ ಭಜಂತ್ರಿ, ಅನಿಲ ಕೊರವಿ, ಮಹಾದೇವ ಮಲಾಜೂರೆ, ಪರಶುರಾಮ ಭಜಂತ್ರಿ, ರಾಣಪ್ಪಾ ಭಜಂತ್ರಿ, ಸುರೇಶ ಅಮ್ಮಿನಭಾವಿ, ವಿಜಯ ಕೊರವಿ, ಹಾಲಪ್ಪ ಭಜಂತ್ರಿ, ಬಸಪ್ಪ ಭಜಂತ್ರಿ, ಮಲ್ಲೇಶ ಭಜಂತ್ರಿ ಸೇರಿದಂತೆ ಅನೇಕರು ಇದ್ದರು.

ಬೆಳಿಗ್ಗೆ ಪಟ್ಟಣದಲ್ಲಿ ನೂಲಿ ಚಂದಯ್ಯನವರ ಭಾವಚಿತ್ರ ಭವ್ಯ ಮೆರವಣಿಗೆ ನಡೆಯಿತು 

ಸುದ್ದಿ ಓದಿ