ಜಮಖಂಡಿ

ಮಹಮ್ಮದ್ ಪೈಗಂಬರ್ ಜಯಂತಿ ಆಚರಣೆ

ಮಹಮ್ಮದ್ ಪೈಗಂಬರ್ ಜಯಂತಿ ಆಚರಣೆ

ಜಮಖಂಡಿ : 29: ಜಶ್ನೆ ಈದ-ಎ-ಮಿಲಾದುನ್ನಬಿ ಸಹಯೋಗದಲ್ಲಿ ಮಹಮ್ಮದ್ ಪೈಗಂಬರ್ ಜಯಂತಿಯ ಆಚರಣೆಯನ್ನು ವಿವಿಧ ಮುಸ್ಲಿಂ ಸಂಘಟನೆಯಿಂದ ಆಚರಿಸಲಾಯಿತು. 

ನಗರದ ಪ್ರಮುಖ ರಸ್ತೆಗಳ ಮೂಲಕ ಮಹಮ್ಮದ್ ಪೈಗಂಬರ್ ಜಯಂತಿಯ ಮೆರವಣಿಗೆ ಸಂಚರಿಸಿತು. ಮೆರವಣಿಗೆಯಲ್ಲಿ ವಿವಿಧ ಶಾಲಾಮಕ್ಕಳು, ವಿವಿಧ ಮುಸ್ಲಿಂ ಸಂಘಟನೆಗಳು ಸೇರಿಕೊಂಡು ಕೈಯಲ್ಲಿ ಹಸಿರು ಧ್ವಜವನ್ನು ಹಿಡಿದು ಘೋಷಣೆಯನ್ನು ಕೂಗುತ್ತಿದ್ದರು. 

ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ಜಮಾಯಿಸಿ. ಘೋಷಣೆಗಳನ್ನು ಕೂಗಿ. ಕೇವಲ ಪೈಗಂಬರ್ ಅವರ ಹಾಡುಗಳನ್ನು ಹಾಡಿದರು. ಅಲ್ಲಿಂದ ಅರ್ಷೇ ಮಸ್ಜಿದ್ ಮಡ್ಡಿ ಮೈದಾನಕ್ಕೆ ತಲುಪಿದರು. 

 ಸರಕಾರಿ ಆಸ್ಪತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಜಿಲ್ಲಾ ಘಟಕ ಅಧ್ಯಕ್ಷ ರಫೀಕ ಬಾರಿಗಡ್ಡಿ ಅವರು ಆಸ್ಪತ್ರೆಯ ರೋಗಿಗಳಿಗೆ ಬೆಳಗಿನ ಅಲ್ಪೋಪಹಾರದ ವ್ಯವಸ್ಥೆ ಮಾಡಿ. ಎಲ್ಲ ರೋಗಿಗಳಿಗೆ ವಿತರಣೆ ಮಾಡಿದರು. 

ಮಾಜಿ ಶಾಸಕ ಆನಂದ ನ್ಯಾಮಗೌಡ, ಮಾಜಿ ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ, ಪರುಶರಾಮ ಕಾಂಬಳೆ, ಶಶಿಕಾಂತ ದೊಡಮನಿ,  ಸಾಧೀಕ ಬಂಟನೂರ, ಅಬುಬಕರ್ ಕುಡಚಿ, ರೋಹಿತ ಸೂರ್ಯವಂಶಿ, ಅಶೋಕ ಕರ್ಜಗಿ, ಡಾ,ಕೃಷ್ಣಾ ಬಣ್ಣದ, ಡಾ,ಸುದೀರ ಬೆನಕಟ್ಟಿ ಸೇರಿದಂತೆ ಅನೇಕ ಯುವಕರು ಇದ್ದರು. ಜಮಖಂಡಿ ನಗರದ ಪ್ರಮುಖ ರಸ್ತೆಯ ಮೂಲಕ ಮಹಮ್ಮದ್ ಪೈಗಂಬರ್ ಅವರ ಮೆರವಣಿಗೆ ನಡೆಯಿತು. 


ಸುದ್ದಿ ಓದಿ